»   » ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!

ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮೊನ್ನೆ ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ಶರಣ್. ಹೀಗೆ ಕನ್ನಡದ ಹೆಸರಾಂತ ಹೀರೋಗಳು ಗಾಯಕರಾಗಿರುವುದು ನಿಮಗೆ ಗೊತ್ತು.

ತೆರೆಮೇಲೆ ಆಕ್ಷನ್ ಮಾಡುವುದರೊಂದಿಗೆ ಹಾಡೊಂದಕ್ಕೆ ಗಾನಸುಧೆ ಹರಿಸುತ್ತಿರುವ ನಾಯಕರ ಪಟ್ಟಿಗೆ ನಿರ್ದೇಶಕ ಕಮ್ ನಟ ಮೋಹನ್ ಸೇರ್ಪಡೆಯಾಗಿರುವ ಸುದ್ದಿ ಕೂಡ ಹಳೆಯದ್ದೇ.

Story behind Kannada Actor-Director Mohan turns singer for Male Nilluvavarege

'ಮಳೆ ನಿಲ್ಲುವವರೆಗೆ' ಚಿತ್ರದ ಹಾಡೊಂದಕ್ಕೆ ಮೋಹನ್ ದನಿಯಾಗಿದ್ದಾರೆ. ಆದ್ರೆ, ಮೋಹನ್ ಹಾಡು ಹಾಡಿರುವುದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಎಲ್ಲರೂ ಅಂದುಕೊಳ್ಳುವ ಹಾಗೆ, ನಾಯಕರು ಗಾಯಕರಾಗುತ್ತಿರುವ ಟ್ರೆಂಡ್ ನಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಮೋಹನ್ ಮೈಕ್ ಹಿಡಿಯಲಿಲ್ಲ.

''ಓಡು ಮರಿ...ಓಡು ಮರಿ...'' ಹಾಡನ್ನ ಹೆಸರಾಂತ ಗಾಯಕರಿಂದ ಹಾಡಿಸಬೇಕು ಅನ್ನುವ ಪ್ಲಾನ್ ಇತ್ತು. ಹೇಳಿ ಕೇಳಿ 'ಮಳೆ ನಿಲ್ಲುವವರೆಗೆ' ಹಾರರ್ ಸಿನಿಮಾ. ಇಡೀ ಸಿನಿಮಾಗೆ ಹಾರರ್ ಫೀಲ್ ಕೊಡುವ ಹಾಡು ಈ ''ಓಡು ಮರಿ..ಓಡು ಮರಿ..''

Story behind Kannada Actor-Director Mohan turns singer for Male Nilluvavarege

''ರೆಗ್ಯುಲರ್ ಸಿಂಗರ್ ಹಾಡಿದರೆ ಮಜ ಇರೋಲ್ಲ. ಬೇಸ್ ವಾಯ್ಸ್ ಇದ್ದರೆ ಚಂದ. ಒಮ್ಮೆ ನೀವೇ ಟ್ರೈ ಮಾಡಿ ಸಾರ್'' ಅಂತ ಸಂಗೀತ ನಿರ್ದೇಶಕ ಲಯೇಂದ್ರ ಹೇಳಿದ್ದರಂತೆ. ''ಆಗಲಿ, ನೋಡೋಣ ಅಂತ ಮೋಹನ್ ಮೈಕ್ ಮುಂದೆ ನಿಂತಿದ್ದಷ್ಟೇ. ಒಂದೇ ಟೇಕ್ ನಲ್ಲಿ 'ಓಡು ಮರಿ...ಓಡಿ ಮರಿ' ಓಕೆ ಆಗೋಯ್ತು''.

''ಹಾರರ್ ಸಾಂಗ್ ಇದು. ಆಲಾಪ, ಶೃತಿ ಅಂಥದ್ದೆಲ್ಲಾ ಏನು ಇಲ್ಲ. 'ಮಿಂಚಿನ ಓಟ' ಸಿನಿಮಾದಲ್ಲಿ ''ಹನ್ನೆರಡು ಗಂಟೆ ರಾತ್ರೀಲಿ...'' ಅಂತ ಸಾಂಗ್ ಇದೆ. ಆ ತರಹ ಈ ಹಾಡು ಮಾಡಿರುವುದು. ಇಡೀ ಸಿನಿಮಾನ ಇದೇ ತರಹ ಡೆಕೊರೇಟ್ ಮಾಡ್ಬೇಕು ಅಂತ ನಾನು ಅಂದುಕೊಂಡಿದ್ದೆ.'' ಅಂತಾರೆ ಮೋಹನ್. [ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ']

ಅಸಲಿಗೆ, ಇದೇ ಚಿತ್ರದ ಮತ್ತೊಂದು ಹಾಡಿಗೆ ಮೋಹನ್ ಪತ್ನಿ ಶ್ರೀವಿದ್ಯಾ ಕೂಡ ಹಾಡಿದ್ದಾರೆ. ಶ್ರೀವಿದ್ಯಾ ರವರ ರೆಕಾರ್ಡಿಂಗ್ ನಡೆಯುವಾಗ ಎರಡ್ಮೂರು ಟೇಕ್ ತೆಗೆದುಕೊಂಡಿದ್ದರು. ಪತ್ನಿ ಮೂಲತಃ ಗಾಯಕಿಯಾಗಿದ್ದರೂ ಟೇಕ್ ಮೇಲೆ ಟೇಕ್ ತಗೊಳ್ತಿದ್ದಾರೆ ಅಂತ ಮೋಹನ್ ಘುರ್ ಅಂದು ಚಾಲೆಂಜ್ ಮಾಡಿದ್ರಂತೆ.

Story behind Kannada Actor-Director Mohan turns singer for Male Nilluvavarege

ಆಮೇಲೆ ಪತಿಯ ಚಾನ್ಸ್ ಬಂದಾಗ, ಭಯದಿಂದಲೇ ಮೈಕ್ ಮುಂದೆ ಹೋದ ಮೋಹನ್, ಒಂದೇ ಏಟಲ್ಲಿ ಹಾಡಿ ಸವಾಲು ಗೆದ್ದು ಬಿಟ್ಟರು. ''ನನ್ನ ಹೆಂಡತಿ ಮುಂದೆ ನಾನು ಒಂದೇ ಟೇಕ್ ಗೆ ಹಾಡಿದೆ. ಚಾಲೆಂಜ್ ಇತ್ತು. ಒಂಥರಾ ಒಳ್ಳೇ ಎಕ್ಸ್ ಪೀರಿಯನ್ಸ್. ಕಾನ್ಫಿಡೆನ್ಸ್ ಬಂತು. ಹಾಡಿಬಿಟ್ಟೆ.'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ತಮ್ಮ ಗಾಯನ ಅನುಭವವನ್ನ ಮೋಹನ್ ಹಂಚಿಕೊಂಡರು. [ಮಳೆ ನಿಲ್ಲುವವರೆಗೆ ಚಿತ್ರಗಳು]

''ಓಡು ಮರಿ...ಓಡು ಮರಿ...'' ನಿರೀಕ್ಷೆಗೂ ಮೀರಿ ಚೆನ್ನಾಗಿ ಕೇಳಿಸಿದ್ದರಿಂದ ಮೋಹನ್ ವಾಯ್ಸನ್ನೇ ಸಂಗೀತ ನಿರ್ದೇಶಕ ಲಯೇಂದ್ರ ಫೈನಲ್ ಮಾಡಿದ್ದಾರೆ. ಎರಡೇ ಹಾಡುಗಳಿದ್ದರೂ, 'ಮಳೆ ನಿಲ್ಲುವವರೆಗೆ' ಚಿತ್ರದ ಟ್ರೇಲರ್ ಮತ್ತು ಸಾಂಗ್ಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ತಿಂಗಳು ಚಿತ್ರ ತೆರೆಕಾಣುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Mohan has sung a song in his directorial movie 'Male Nilluvavarege'. Actor Turned Director has revealed an interesting story during the making of 'Odu mari Odu mari' song.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada