For Quick Alerts
  ALLOW NOTIFICATIONS  
  For Daily Alerts

  ಯುವಸಾಮ್ರಾಟ್ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಹಾಡು

  By Rajendra
  |

  ಸ್ಟೈಲಿಶ್ ಸ್ಟಾರ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಅವರು 'ಯುವಸಾಮ್ರಾಟ್'' ಚಿತ್ರಕ್ಕಾಗಿ ಒಂದು ಫಾಸ್ಟ್ ನಂಬರ್ ಹಾಡಿಗೆ ಧ್ವನಿಗೂಡಿಸಿದ್ದಾರೆ. ಈ ಹಾಡಿನ ಮೂಲಕ ತಾವು ಗಾಯಕರಾಗಿ ಫಾಸ್ಟ್ ನಂಬರ್ ಗೂ ಸೈ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ ಪ್ರೇಮ್.

  "ಬ್ರಿಂಗ್ ಡೌನ್ ದಿ ಟಪಾಂಗುಚ್ಚಿ'' ಎಂದು ಆರಂಭವಾಗುವ ಈ ಡ್ಯಾನ್ಸ್ ನಂಬರ್ ಮತ್ತು ಪಕ್ಕಾ ಮಾಸ್ ಸಾಂಗ್ ಎನಿಸುವ ಈ ಹಾಡನ್ನು ಅದ್ಭುತವಾಗಿ, ಅತ್ಯಂತ ಪರಿಣಾಮಕಾರಿಯಾಗಿ ಹಾಡುವ ಜೊತೆಗೆ, ಒಂದು ಹೊಸ ತಂಡದ ಹೊಸ ಪ್ರಯತ್ನದಲ್ಲಿ ಪ್ರೀತಿಯಿಂದ ಪಾಲ್ಗೊಂಡು ಗಮನ ಸೆಳೆದಿದ್ದಾರೆ ಜನಪ್ರಿಯ ನಾಯಕ ಪ್ರೇಮ್. [ಎಂ ಎಂ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಪ್ರೇಮ್!]

  'ಯುವಸಾಮ್ರಾಟ್' ಚಿತ್ರಕ್ಕಾಗಿ ಇಡೀ ಕುಟುಂಬವೇ ತಮ್ಮನ್ನು ತೊಡಗಿಸಿಕೊಂಡಿರುವುದು ನನಗೆ ಖುಷಿಯ ವಿಷಯ. ಹೀಗಾಗಿಯೇ ಚಿತ್ರದ ನಿರ್ಮಾಪಕರಾದ ವರಲಕ್ಷ್ಮಿ ಅವರು ಕೇಳಿದ ಕೂಡಲೇ ಈ ಚಿತ್ರಕ್ಕೆ ಹಾಡಲು ಒಪ್ಪಿಕೊಂಡೆ. ಚಿತ್ರತಂಡಕ್ಕೆ ಮತ್ತು ನಾಯಕ ಕಿರಣ್ ಹಾಗೂ ನಿರ್ದೇಶಕ ಯಶವಂತ್ ಅವರಿಗೆ ಯಶಸ್ಸು ಸಿಗಲಿ'' ಎಂದು ಹಾರೈಸಿದರು.

  ಈ ಹಾಡಿನ ಸಂಗೀತ ಮತ್ತು ಸಾಹಿತ್ಯದ ಬಗ್ಗೆಯೂ ಪ್ರೇಮ್ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜೇಶ್ ರಾಮನಾಥ್ ಅವರ ಸ್ಟುಡಿಯೋದಲ್ಲಿ ಇತ್ತೀಚೆಗಷ್ಟೇ ಈ ಹಾಡನ್ನು ಧ್ವನಿಮುದ್ರಿಸಿಕೊಳ್ಳಲಾಯಿತು. ಶ್ರೀ ವರಲಕ್ಷ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ 'ಯುವಸಾಮ್ರಾಟ್' ಚಿತ್ರದ ನಿರ್ಮಾಪಕರು ವರಲಕ್ಷ್ಮಿ ನಂದಕುಮಾರ್.

  ಮೊದಲ ಬಾರಿಗೆ ತಮ್ಮ ಪುತ್ರ ಕಿರಣ್ ಕುಮಾರ್ ಅವರನ್ನು ನಾಯಕನನ್ನಾಗಿ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಹಿರಿಯ ಪುತ್ರ ನಾಯಕ. ಕಿರಿಯ ಪುತ್ರ ಯಶವಂತ್ ಕುಮಾರ್ ಈ ಚಿತ್ರದ ಕಥೆ, ಚಿತ್ರಕತೆ, ಸಂಭಾಷಣೆ, ಸಂಗೀತದ ಜೊತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಹಿರಿಯ ಪತ್ರಕರ್ತರಾದ ನಂದಕುಮಾರ್ ಅವರು ಈ ಚಿತ್ರದ ನಿರ್ಮಾಣ ವಿನ್ಯಾಸಕರಾಗಿದ್ದಾರೆ.

  ಹಲವು ಹೊಸತನಗಳ 'ಯುವಸಾಮ್ರಾಟ್' ಇದೀಗ ಮುಕ್ತಾಯ ಹಂತ ತಲುಪಿದೆ. ಉಕ್ರೇನ್ ಚೆಲುವೆ ಸ್ನಿಝಾನ ಈ ಚಿತ್ರದ ನಾಯಕಿಯಾಗಿ ಮತ್ತೊಂದು ಆಕರ್ಷಣೆಯಾಗಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ, ಎಂ.ಎಸ್.ಉಮೇಶ್, ಕೋಟೆ ಪ್ರಭಾಕರ್, ಪಿ.ಎಲ್.ವೆಂಕಟರಾಮರೆಡ್ಡಿ, ಸಿಂಗರ್ ಶ್ರೀನಿವಾಸ್, ವೆಂಕಟ್ ಟೈಕೊಂಡೋ, ರಾಮ್ ದೇವ್, ಮೋಹನ್ ಜುನೇಜ, ಕುಮುದ, ತನುಜ, ಕವನ ಹಾಗೂ ಹೊಸ ಪ್ರತಿಭೆಗಳಾದ ರೇಣುಕುಮಾರ್, ದರ್ಶನ್ ಹುಣಸೂರು, ಭಾರತಿ ಶರ್ಮ, ಪ್ರೀತಿ ಶರ್ಮ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

  ವಿಶೇಷ ಪಾತ್ರದಲ್ಲಿ ಹೆಸರಾಂತ ರಾಜಕಾರಿಣಿಗಳಾದ ನೆ.ಲ ನರೇಂದ್ರಬಾಬು ಹಾಗೂ ನಿರ್ದೇಶಕ-ನಟ ನಾಗೇಂದ್ರ ಅರಸು ಅವರು ನಟಿಸಿದ್ದಾರೆ. ಅರುಣ್ ಸುರೇಶ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಛಾಯಾಗ್ರಾಹಕರಾಗಿದ್ದಾರೆ. ಸಂಕಲನ ಶಿವರಾಜ್ ಮೆಹು, ಕಲೆ ಕನಕ, ಸಾಹಿತ್ಯ ಕವಿರಾಜ್, ಗೌಸ್ ಪೀರ್, ರಘುಕುಮಾರ್, ಯಶವಂತ್ ಕುಮಾರ್; ನೃತ್ಯ ರಾಜ್ ಕಮಲ್, ಸಾಹಸ ರಾಮ್ ದೇವ್ (ಹ್ಯಾರಿಸ್ ಜಾನಿ), ನಿರ್ಮಾಣ ನಿರ್ವಹಣೆ ಭರತ್. (ಒನ್ಇಂಡಿಯಾ ಕನ್ನಡ)

  English summary
  Stylish Star Prem Kumar has sung a fast number for Kannada movie 'Yuva Samrat'. "Bring down the Tapanguchchi" song penned by Kaviraj. The song recording held at the Rajesh Ramanath Sthai studio music by Yashwanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X