»   »  'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು

'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು

Posted By:
Subscribe to Filmibeat Kannada

'ಟಗರು' ಸಿನಿಮಾ ಈಗಾಗಲೇ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮವನ್ನು ಮಾಡಿದೆ. ಅವರ ನಂತರ ಈಗ ಸಿನಿಮಾದ ಒಂದು ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. 'ಬದುಕಿನ ಬಣ್ಣವೇ..' ಹಾಡಿನ ವಿಡಿಯೋ ಈಗ ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ಜಯಂತ್ ಕಾಯ್ಕಿಣಿ ಅವರ ಒಂದು ಹಾಡು ಇದ್ದೇ ಇರುತ್ತದೆ. ಈ ಹಿಂದೆ ಸೂರಿ ಅವರ ಚಿತ್ರಗಳ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಕಾಯ್ಕಿಣಿ ಪದ ಜೋಡಿಸಿದ್ದರು. ಇನ್ನು ಅದೇ ರೀತಿ ಟಗರು' ಸಿನಿಮಾಗೆ ಕೂಡ ಕಾಯ್ಕಿಣಿ ಮೂರು ಹಾಡನ್ನು ಬರೆದಿದ್ದರು. 'ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ...' ಸಿನಿಮಾದ ಹಾಡುಗಳ ಪೈಕಿ ಹೈಲೈಟ್ ಆಗಿತ್ತು. ಸಿನಿಮಾ ನೋಡುಗರಿಗೆ ಹೊಸ ಫೀಲ್ ನೀಡಿತ್ತು. ಸಿನಿಮಾದ ತುಂಬ ರೌಡಿಸಂ, ಮಾಸ್ ಅಂಶಗಳು ತುಂಬಿದ್ದು, ಈ ಹಾಡು ಬಂದಾಗ ಕೂಲ್ ಎನಿಸುತ್ತದೆ.


ಅಮೇರಿಕಾದಲ್ಲಿ ಗುಟುರು ಹಾಕಲಿರುವ ಶಿವಣ್ಣನ 'ಟಗರು'


ಸಿದ್ಧಾರ್ಥ ಬೆಳಮನು ಈ ಹಾಡನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಹೊಸ ರೀತಿಯ ಮ್ಯೂಸಿಕ್ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆಯಿಂದ ಈ ಹಾಡನ್ನು ಹೊರಬಂದಿದೆ. ನಟ ಶಿವರಾಜ್ ಕುಮಾರ್ ಮತ್ತು ನಟಿ ಭಾವನ ಹಾಡಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸ್ವತಃ ಶಿವಣ್ಣ ಅವರೇ ಹೇಳಿದಂತೆ ಈ ಸಿನಿಮಾದಲ್ಲಿ ಅವರಿಗೆ ತುಂಬ ಇಷ್ಟ ಆಗಿರುವ ಹಾಡು ಕೂಡ ಇದೇ ಆಗಿದೆ.


Tagaru kannada movie video song released

ಇನ್ನು 'ಟಗರು' ಸಿನಿಮಾ ಕಳೆದ ತಿಂಗಳು 23ಕ್ಕೆ ರಿಲೀಸ್ ಆಗಿದ್ದು, ಎಲ್ಲಡೆ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ. ಇದೀಗ ಅಮೇರಿಕಾದಲ್ಲಿ ಗುಟುರು ಹಾಕಲು ಸಜ್ಜಾಗಿದೆ. ಮಾರ್ಚ್ 8 ಅಂದ್ರೆ ಇಂದು 'ಯು.ಎಸ್.ಎ'ನಲ್ಲಿ 'ಟಗರು' ತೆರೆಗೆ ಅಪ್ಪಳಿಸಲಿದೆ. ಶಿಕಾಗೋ, ಫಿಲಡೆಲ್ಫಿಯ, ಅಟ್ಲಾಂಟ ಸೇರಿದಂತೆ 25ಕ್ಕೂ ಹೆಚ್ಚು ಕಡೆ 'ಟಗರು' ಬಿಡುಗಡೆ ಆಗಲಿದೆ.


ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!

English summary
Actor Shiva Rajkumar's 'Tagaru' kannada movie video song released. The song written by Jayanth Kaikini and composed by music director Charan Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada