'ಮಾರಮ್ಮನ ಡಿಸ್ಕೋ' ಹಾಡಲ್ಲಿ ಟೆನ್ನಿಸ್ ಕೃಷ್ಣ ಜೊತೆ 'ಬಸಣ್ಣಿ' ತಾನ್ಯ

'ಮಾರಮ್ಮನ ಡಿಸ್ಕು' ಎಂದ ಕೂಡಲೆ ಕನ್ನಡ ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು ಟೆನ್ನಿಸ್ ಕೃಷ್ಣ.

'ಐ ತೇರಿ ಲಕ್ಕಡಿ, ಪಕ್ಕಡಿ, ಜುಮ್ಮ..' ಡೈಲಾಗ್ ನಿಂದ ಜಗ್ಗೇಶ್ ಹೇಗೆ ಜನಪ್ರಿಯತೆ ಗಳಿಸಿದರೋ, ಅದೇ ರೀತಿ 'ಮಾರಮ್ಮನ ಡಿಸ್ಕು..' ಡೈಲಾಗ್ ನಿಂದ ವರ್ಷಗಳ ಕಾಲ ಕನ್ನಡಿಗರನ್ನು ಕಿಲ ಕಿಲ ಅಂತ ನಗಿಸಿದವರು ಟೆನ್ನಿಸ್ ಕೃಷ್ಣ.

'ಮಾರಮ್ಮನ ಡಿಸ್ಕು..' ಮತ್ತು ಟೆನ್ನಿಸ್ ಕೃಷ್ಣ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಅಲೋಕ್ ಬಾಬು. 'ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ..' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಅಲಿಯಾಸ್ ಆಲ್ ಓಕೆ ಇದೀಗ ಒಂದು ಪಾರ್ಟಿ ಸಾಂಗ್ ಸಿದ್ಧಪಡಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.

Tanya Hope and Tennis Krishna to shake legs in Alok Babus Marammana Disco song

ಅಲೋಕ್ ಬಾಬು ಹಾಡುವ ಆ ಪಾರ್ಟಿ ಸಾಂಗ್ ಗೆ 'ಮಾರಮ್ಮನ ಡಿಸ್ಕೋ' ಅಂತ ಹೆಸರಿಟ್ಟಿದ್ದಾರೆ. ರೆಟ್ರೋ ಸ್ಟೈಲ್ ನಲ್ಲಿ 'ಮಾರಮ್ಮನ ಡಿಸ್ಕೋ' ಹಾಡು ಮೂಡಿಬರಲಿದ್ದು, 'ಮಾರಮ್ಮನ ಡಿಸ್ಕು' ಖ್ಯಾತಿಯ ಟೆನ್ನಿಸ್ ಕೃಷ್ಣ ಕೂಡ ಸ್ಟೆಪ್ ಹಾಕಲಿದ್ದಾರೆ.

ವಿಶೇಷ ಅಂದ್ರೆ, ಈ ಹಾಡಿನಲ್ಲಿ ಟೆನ್ನಿಸ್ ಕೃಷ್ಣ ಜೊತೆಗೆ 'ಬಸಣ್ಣಿ ಬಾ..' ಹಾಡಿನ ಖ್ಯಾತಿಯ ತಾನ್ಯ ಹೋಪ್ ಕೂಡ ಸೊಂಟ ಬಳುಕಿಸಲಿದ್ದಾರೆ.

ಇನ್ನೇನು ನ್ಯೂ ಇಯರ್ ಬರ್ತಾಯಿದೆ. ವರ್ಷಾಂತ್ಯದ ಪಾರ್ಟಿಗೆ 'ಮಾರಮ್ಮನ ಡಿಸ್ಕೋ' ಹಾಡು ಪರ್ಫೆಕ್ಟ್ ಆಗಿ ಸೂಟ್ ಆಗಲಿದ್ದು, ಅಷ್ಟರೊಳಗೆ ಹಾಡನ್ನು ಬಿಡುಗಡೆ ಮಾಡಲು ಅಲೋಕ್ ಬಾಬು ಪ್ಲಾನ್ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ತೆಲುಗಿನಲ್ಲಿ 'ಮಾರಮ್ಮನ ಡಿಸ್ಕೋ' ಹಾಡು ಬಿಡುಗಡೆ ಆಗಲಿದೆ

More from Filmibeat

English summary
Tanya Hope and Tennis Krishna to shake legs in Alok Babu's Marammana Disco song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X