Don't Miss!
- Sports
ಕೆಕೆಆರ್ ತಂಡದಲ್ಲಿ ಸುನಿಲ್ ನರೈನ್ ಭವಿಷ್ಯದ ಬಗ್ಗೆ ಬಾಯ್ಬಿಟ್ಟ ಬ್ರೆಂಡನ್ ಮೆಕ್ಕಲಂ
- News
ಉತ್ತರ ಪ್ರದೇಶ ಕೊರೊನಾ ದಾಖಲೆ; ಭಾನುವಾರ ಲಾಕ್ಡೌನ್!
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲೆಲ್ಲೂ 'ಮಂಗ್ಲಿ' ಗಾನ: ತೆಲುಗು ಗಾಯಕಿಗೆ ಅದೃಷ್ಟ ತಂದುಕೊಟ್ಟ ರಾಬರ್ಟ್
ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಅಷ್ಟೇ ಏಕೆ ಮೊಬೈಲ್ ಸ್ಟೇಟಸ್ ಹಾಗೂ ವಾಟ್ಸಾಪ್‌ಗಳಲ್ಲೂ ತೆಲುಗು ಗಾಯಕಿ ಮಂಗ್ಲಿಯ ಗಾನ ಸದ್ದು ಮಾಡ್ತಿದೆ. ಎಲ್ಲೆ ನೋಡಿದ್ರು ''ಕಣ್ಣೇ ಅದಿರಿಂಧಿ.....'' ಎಂಬ ಹಾಡೇ ಕೇಳುತ್ತಿದೆ.
ಇದು ರಾಬರ್ಟ್ ಚಿತ್ರದ ತೆಲುಗು ವರ್ಷನ್ ಹಾಡು. ಕನ್ನಡದಲ್ಲಿ 'ಕಣ್ಣಾ ಹೊಡಿಯೊಕಾ....' ಎಂದು ಹಾಡಿದೆ. ಇದೇ ಹಾಡು ತೆಲುಗಿನಲ್ಲಿ 'ಕಣ್ಣೆ ಅದಿರಿಂಧಿ...' ಆಗಿ ಮೂಡಿ ಬಂದಿದೆ. ಮೂಲ ಕನ್ನಡದ್ದೇ ಆಗಿದ್ದರು ತೆಲುಗಿನಲ್ಲಿ ದೊಡ್ಡ ಸಕ್ಸಸ್ ಕಂಡಿದೆ. ತೆಲುಗು ಹಾಡೇ ಎನ್ನುವಷ್ಟು ಜನ ಸ್ವೀಕರಿಸಿದ್ದಾರೆ.
ಕರ್ನಾಟಕದಲ್ಲಿ ಕೆಜಿಎಫ್ ದಾಖಲೆ ಮುರಿದ ರಾಬರ್ಟ್: ಅತಿ ದೊಡ್ಡ ಬೆಲೆಗೆ ವಿತರಣೆ ಹಕ್ಕು ಸೇಲ್
ಅದಕ್ಕೆ ಕಾರಣ ಗಾಯಕಿ ಮಂಗ್ಲಿ. ಅಂದ್ಹಾಗೆ, ತೆಲುಗಿನಲ್ಲಿ ಈ ಹಾಡನ್ನು ಹಾಡಿರುವುದು ಗಾಯಕಿ ಹೆಸರು ಮಂಗ್ಲಿ. ಮಂಗ್ಲಿಯ ಮೂಲ ಹೆಸರು ಸತ್ಯವತಿ ರಾಥೋಡ್. ಟಾಲಿವುಡ್ ಇಂಡಸ್ಟ್ರಿಯಲ್ಲಿ ಮಂಗ್ಲಿ ಎಂದೇ ಖ್ಯಾತಿಗಳಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದರೆ, ತೆಲುಗಿನಲ್ಲಿ ಕಸರ್ಲಾ ಶ್ಯಾಮ್ ಹಾಡು ಬರೆದಿದ್ದಾರೆ. ಕನ್ನಡದಲ್ಲಿ ಶ್ರೇಯಾ ಘೋಷಲ್ ಹಾಡಿದ್ದರೆ, ತೆಲುಗಿನಲ್ಲಿ ಮಂಗ್ಲಿ ಧ್ವನಿಯಾಗಿದ್ದಾರೆ.
ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್
ಎರಡು ಭಾಷೆಯಲ್ಲಿ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿಗಿಂತ ಮಂಗ್ಲಿ ರಾಬರ್ಟ್ ಪ್ರಿ-ರಿಲೀಸ್ ವೇದಿಕೆಯಲ್ಲಿ ಹಾಡಿದ ಹಾಡು ಹೆಚ್ಚು ವೈರಲ್ ಆಗಿದೆ. ಆಂಧ್ರ ಪ್ರದೇಶದಲ್ಲಿ ಈ ಹಾಡಿನ ಹವಾ ದೊಡ್ಡ ಮಟ್ಟದಲ್ಲಿ ಇದೆಯೋ ಇಲ್ಲವೋ, ಕರ್ನಾಟಕದಲ್ಲಿ ಮಾತ್ರ ಮಂಗ್ಲಿಯ 'ಕಣ್ಣೇ ಅದಿರಿಂಧಿ....' ಹವಾ ಸಖತ್ ಜೋರಿದೆ.
ಇದುವರೆಗೂ ಮಂಗ್ಲಿ ತೆಲುಗು ಇಂಡಸ್ಟ್ರಿಯಲ್ಲಿ ಏಂಟು ಸಿನಿಮಾ ಸಾಂಗ್ ಹಾಡಿದ್ದಾರೆ. ಅಲಾ ವೈಕುಂಠಪುರಂಲೋ ಚಿತ್ರದ ''ರಾಮುಲು ರಾಮುಲು'' ಹಾಡು ಸಹ ಒಂದು. ಇದನ್ನು ಬಿಟ್ಟರೆ ಬೇರೆ ಹಾಡುಗಳು ಅಷ್ಟು ಹೆಸರು ತಂದುಕೊಟ್ಟಿಲ್ಲ. ಆದರೆ, ರಾಬರ್ಟ್ ಚಿತ್ರದ ಈ ಹಾಡು ಮಂಗ್ಲಿಯ ಹೆಸರನ್ನು ಕೂಗಿ ಕೂಗಿ ಹೇಳುತ್ತಿದೆ.
ಮಂಗ್ಲಿ ಸಿನಿಮಾ ಹಾಡುಗಳಿಂತ ಜವಾರಿ ಹಾಡು, ಜಾನಪದ ಗೀತೆ ಹಾಗೂ ಭಕ್ತಿ ಗೀತೆಗಳನ್ನು ಹಾಡುವುದರಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ತೆಲುಗಿನ ಬಹುತೇಕ ಕಾರ್ಯಕ್ರಮದಲ್ಲಿ ಮಂಗ್ಲಿ ಅವರಿಂದಲೇ ಭಕ್ತಿ ಹಾಡಿಸುವ ಟ್ರೆಂಡ್ ಸಹ ಅಲ್ಲಿದೆ.
26 ವರ್ಷದ ಮಂಗ್ಲಿ ಅನಂತಪುರ ಜಿಲ್ಲೆಯವರು. ಹಲವು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದರು.
ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ.