»   » ಟಿಬೆಟ್ಟಿಯನ್ನರ ಬಾಯಲ್ಲಿ ರವಿಚಂದ್ರನ್ ಹಾಡು! ನೋಡಿದ್ರೆ ಬೆಕ್ಕಸ ಬೆರಗಾಗ್ತೀರಾ!

ಟಿಬೆಟ್ಟಿಯನ್ನರ ಬಾಯಲ್ಲಿ ರವಿಚಂದ್ರನ್ ಹಾಡು! ನೋಡಿದ್ರೆ ಬೆಕ್ಕಸ ಬೆರಗಾಗ್ತೀರಾ!

Posted By:
Subscribe to Filmibeat Kannada

ಒಬ್ಬರು ಪ್ರೇಮಲೋಕ ಸೃಷ್ಟಿಸಿದ ದೇವರು... ಇನ್ನೊಬ್ಬರು ಸಪ್ತ ಸ್ವರಗಳ ಅಧಿಪತಿ... ಇವರಿಬ್ಬರು ಸೇರಿಕೊಂಡು ಸೃಷ್ಟಿಸಿದ ಇಂಪಾದ ಗೀತೆಗಳು ಒಂದೆರಡಲ್ಲ. ಸಿನಿ ರಸಿಕರು ಸದಾ ಗುನುಗುವ ಮಧುರ ಗೀತೆಗಳನ್ನು ಕೊಟ್ಟ ಜನಪ್ರಿಯ ಜೋಡಿ ರವಿಚಂದ್ರನ್ ಮತ್ತು ಹಂಸಲೇಖ.

ರವಿಚಂದ್ರನ್ ಮತ್ತು ಹಂಸಲೇಖ ಮೊಟ್ಟ ಮೊದಲ ಬಾರಿಗೆ ಒಂದಾಗಿದ್ದು 'ಪ್ರೇಮಲೋಕ' ಚಿತ್ರದಲ್ಲಿ. 'ಪ್ರೇಮಲೋಕ' ಸಿನಿಮಾದ ಹಾಡುಗಳು ಇಂದಿಗೂ ಜನಜನಿತ. ಅಂದಿನ ಕಾಲಕ್ಕೆ 'ಪ್ರೇಮಲೋಕ' ಚಿತ್ರದ ಆಡಿಯೋ ಕ್ಯಾಸೆಟ್ ಗಳು ದಾಖಲೆ ಮಟ್ಟದಲ್ಲಿ ಸೇಲ್ ಆಗಿದ್ವು.

ಇಂದಿಗೂ ಯುವ ಪ್ರೇಮಿಗಳಿಗೆ, ಸಂಗೀತ ಪ್ರಿಯರಿಗೆ, ಹರೆಯದ ಹುಡುಗ-ಹುಡುಗಿಯರಿಗೆ 'ಪ್ರೇಮಲೋಕ'ದ ಹಾಡುಗಳ ಮೇಲೆ ಸಿಕ್ಕಾಪಟ್ಟೆ ಪ್ರೇಮ. ಅಷ್ಟಕ್ಕೂ, 'ಪ್ರೇಮಲೋಕ'ದ ಹಾಡುಗಳ ಬಗ್ಗೆ ನಾವು ಇಷ್ಟೊಂದು ಪೀಠಿಕೆ ಹಾಕಲು ಒಂದು ಕಾರಣ ಇದೆ. ಅದನ್ನ ತಿಳಿಯಲು ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ದೂರದ ಟಿಬೆಟ್ ನಲ್ಲೂ 'ಪ್ರೇಮಲೋಕ'ದ ಗುನುಗು

'ಪ್ರೇಮಲೋಕ' ಚಿತ್ರದ ಹಾಡುಗಳು... ಕ್ರೇಜಿ ಸ್ಟಾರ್ ರವಿಚಂದ್ರನ್... ನಾದಬ್ರಹ್ಮ ಹಂಸಲೇಖ ಬರೀ ಕರುನಾಡ ಮನೆ-ಮನಗಳಲ್ಲಿ ಮಾತ್ರ ನೆಲೆಯೂರಿದ್ದಾರೆ ಅಂದುಕೊಳ್ಳಬೇಡಿ. ದೂರದ ಟಿಬೆಟ್ ನಲ್ಲೂ 'ಪ್ರೇಮಲೋಕ' ಸಾಂಗ್ ಗಳಿಗೆ, ರವಿಚಂದ್ರನ್ ಹಾಗೂ ಹಂಸಲೇಖಗೆ ಅಭಿಮಾನಿಗಳು ಇದ್ದಾರೆ ಸ್ವಾಮಿ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ....

ಟಿಬೆಟ್ಟಿಯನ್ ಮಹಿಳೆ ಬಾಯಲ್ಲಿ ರವಿ-ಹಂಸಲೇಖ ಹಾಡು

ಟಿಬೆಟ್ಟಿಯನ್ ಮಹಿಳೆಯ ಬಾಯಲ್ಲಿ 'ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ...' ಹಾಡನ್ನೊಮ್ಮೆ ನೋಡ್ಬಿಡಿ...

ಟಿಬೆಟ್ಟಿಯನ್ ಮಹಿಳೆಯ ಕನ್ನಡ ಗಾಯನ

ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಟಿಬೆಟ್ಟಿಯನ್ ಮಹಿಳೆ ಕನ್ನಡ ಗೀತೆ ಹಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹಂಸಲೇಖ ಸಂಗೀತ ನಿರ್ದೇಶನದ 'ಪ್ರೇಮಲೋಕ' ಚಿತ್ರದ ಟೈಟಲ್ ಗೀತೆಯನ್ನು ಹಾಡುವ ಮೂಲಕ ಟಿಬೆಟ್ಟಿಯನ್ ಮಹಿಳೆ ಶಬ್ಬಾಶ್ ಎನಿಸಿಕೊಂಡಿದ್ದಾರೆ.

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

ಕ್ಲೀನ್ ಬೌಲ್ಡ್ ಆದ ರವಿಚಂದ್ರನ್ ಫ್ಯಾನ್ಸ್

'ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ...' ಹಾಡನ್ನ ಟಿಬೆಟ್ಟಿಯನ್ ಮಹಿಳೆ ಹಾಡುತ್ತಿದ್ದರೆ, ಅಕ್ಕ-ಪಕ್ಕದಲ್ಲಿ ಮಕ್ಕಳು ನೃತ್ಯ ಮಾಡಿದ್ದಾರೆ. ಕನ್ನಡದಲ್ಲಿ ಗಾನಸುಧೆ ಹರಿಸಿದ ಟಿಬೆಟ್ಟಿಯನ್ ಮಹಿಳೆಗೆ ಕನ್ನಡ ಬರುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಎಲ್ಲೂ ಅಪಭ್ರಂಶ ಮಾಡದೆ ಸ್ಪಷ್ಟವಾಗಿ ಕನ್ನಡ ಗೀತೆ ಹಾಡುವುದನ್ನು ಕಂಡು ರವಿಚಂದ್ರನ್ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.

ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲ. ಇದು ಸರೀನಾ ?

ಮನಸೋತಿದ್ದಾರೆ ಕನ್ನಡಿಗರು

ಕೆಲವೊಮ್ಮೆ ಸಾಹಿತ್ಯ ನೋಡದೆ 'ಪ್ರೇಮಲೋಕ'ದ ಹಾಡನ್ನ ಟಿಬೆಟ್ಟಿಯನ್ ಮಹಿಳೆ ಹಾಡಿರುವುದನ್ನು ನೋಡಿದ್ರೆ, ಆಕೆ ಕನ್ನಡ ಕಲಿತು, ಹಾಡನ್ನ ಚೆನ್ನಾಗಿ ಅಭ್ಯಾಸ ಮಾಡಿರುವುದು ಸ್ಪಷ್ಟ. ಟಿಬೆಟ್ಟಿಯನ್ ಮಹಿಳೆಯ ಕನ್ನಡ ಪ್ರೇಮ, ರವಿಚಂದ್ರನ್ ಹಾಗೂ ಹಂಸಲೇಖ ಮೇಲಿನ ಅಭಿಮಾನ ಕಂಡು ಕನ್ನಡಿಗರು ಮನಸೋತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಟ್ರೆಂಡ್ ಆಗುತ್ತಿದೆ.

ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ

ಅಂದ್ಹಾಗೆ, ಹಂಸಲೇಖ ಸಂಗೀತ ಸಂಯೋಜಿಸಿದ 'ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ...' ಹಾಡನ್ನ ಹಾಡಿರುವವರು ಎಸ್.ಜಾನಕಿ ಹಾಗೂ ಯೇಸುದಾಸ್.

English summary
Tibetan lady sings Ravichandran-Hamsalekha's Premaloka song

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada