»   » ಸಿಂಗಾಪುರ್ ನಲ್ಲಿ ಇಂದು ಅರ್ಜುನ್ ಜನ್ಯ ಮ್ಯೂಸಿಕ್ ಮ್ಯಾಜಿಕ್

ಸಿಂಗಾಪುರ್ ನಲ್ಲಿ ಇಂದು ಅರ್ಜುನ್ ಜನ್ಯ ಮ್ಯೂಸಿಕ್ ಮ್ಯಾಜಿಕ್

Posted By: Pavithra
Subscribe to Filmibeat Kannada

ಚಂದನವನದ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅಂಡ್ ಟೀಂ ಸದ್ಯ ಸಿಂಗಾಪುರ್ ನಲ್ಲಿ ಬೀಡು ಬಿಟ್ಟಿದೆ. ಇಂದು ಮಧ್ಯಾಹ್ನ ಅರ್ಜುನ್ ಜನ್ಯ ಮ್ಯೂಸಿಕಲ್ ಲೈವ್ ಕಾರ್ಯಕ್ರಮವನ್ನ ಸಿಂಗಾಪುರದ ಕನ್ನಡ ಸಂಘ ಆಯೋಜಿಸಿದ್ದು, ಅಲ್ಲಿ ಕನ್ನಡಿಗರಿಗೆ ಕನ್ನಡ ಸಿನಿಮಾ ಹಾಡುಗಳನ್ನ ಕೇಳುವ ಅವಕಾಶ ಸಿಗಲಿದೆ.

ಇತ್ತೀಚಿಗೆ ಬಿಡುಗಡೆಯಾಗಿರುವ ಕನ್ನಡ ಸಿನಿಮಾ ಹಾಡುಗಳನ್ನ ಲೈವ್ ಆಗಿ ನೋಡಿ ಕೇಳಿ ಆನಂದಿಸುವ ಅವಕಾಶ ಸಿಂಗಾಪುರ ಜನತೆಗೆ ಸಿಕ್ಕಿದ್ದು ಈಗಾಗಲೇ ಅರ್ಜುನ್ ಜನ್ಯ, ಅನುರಾಧ ಭಟ್, ಅನುಪಮ ಭಟ್, ವ್ಯಾಸ್ ರಾಜ್ ಸೇರಿದಂತೆ ಇನ್ನೂ ಅನೇಕ ಗಾಯಕರು ಅರ್ಜುನ್ ಜನ್ಯ ಜೊತೆ ಸಿಂಗಾಪುರ್ ತಲುಪಿದ್ದಾರೆ.

 Today Arjun Janya Music magic in Singapore

'ದೀಪೋತ್ಸವ 2017' ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು ಕನ್ನಡ ಸಿನಿಮಾ ಹಾಡುಗಳ ಮೂಲಕ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನ ಒಟ್ಟಿಗೆ ಆಚರಣೆ ಮಾಡುತ್ತಿದ್ದಾರೆ ಅಲ್ಲಿನ ಕನ್ನಡಿಗರು. ಇತ್ತೀಚಿನ ಹಾಡುಗಳಷ್ಟೇ ಅಲ್ಲದೆ ಅರ್ಜುನ್ ಜನ್ಯ ಟ್ರೆಂಡ್ ಸೆಟ್ ಮಾಡಿರುವ ಹಾಡುಗಳನ್ನೂ ಲೈವ್ ಪ್ರೋಗ್ರಾಂ ನಲ್ಲಿ ಹಾಡಲಾಗುತ್ತೆ. ಗಾಯಕಿ ಅನುರಾಧ ಭಟ್ ಹಾಗೂ ಸಹೋದರಿ ಅನುಪಮ ಭಟ್ ಜುಗಲ್ ಬಂದಿ ಕೂಡ ಕಾರ್ಯಕ್ರಮದಲ್ಲಿ ಪ್ಲಾನ್ ಮಾಡಿದ್ದು ಅಲ್ಲಿನ ಕನ್ನಡಿಗರಿಗೆ ಡಬಲ್ ಧಮಾಕ ಸಿಗಲಿದೆ.

 Today Arjun Janya Music magic in Singapore

ಅರ್ಜುನ್ ಜನ್ಯ ಲೈವ್ ಪ್ರೋಗ್ರಾಂ ಜೊತೆಯಲ್ಲಿ ಅಲ್ಲಿಯ ಕನ್ನಡಿಗರಿಗಾಗಿ ಒಂದಿಷ್ಟು ಕಾರ್ಯಕ್ರಮಗಳನ್ನ ಆಯೋಜಿಸಿಲಾಗಿದೆ. ಒಟ್ಟಾರೆ ಕನ್ನಡದ ಕಂಪು ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲೂ ಪಸರಿಸ್ತಿರೋದು ಖುಷಿ ವಿಚಾರ.

English summary
Music Director Arjun Janya's live music performance at Singapore today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X