For Quick Alerts
  ALLOW NOTIFICATIONS  
  For Daily Alerts

  2020ರಲ್ಲಿ ಯ್ಯೂಟ್ಯೂಬ್‌ನ ಟಾಪ್ ಹಾಡು ಯಾವುದು?

  |

  ಈ ವರ್ಷ ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹಾಡು ಯಾವುದು ಎಂದು ಯ್ಯೂಟ್ಯೂಬ್ ಇಂಡಿಯಾ ಘೋಷಿಸಿದೆ. ಟಾಪ್ ಹತ್ತರ ಪೈಕಿ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಂಲೋ' ಚಿತ್ರದ ಎರಡು ಹಾಡು ಸ್ಥಾನ ಪಡೆದುಕೊಂಡಿದೆ.

  ಈ ಎರಡು ಹಾಡು ಬಿಟ್ಟರೆ ಸೌತ್ ಇಂಡಿಯಾದ ಯಾವುದೇ ಹಾಡು ಟಾಪ್ ಹತ್ತರ ಪಟ್ಟಿಯಲ್ಲಿಲ್ಲ. ಸಿನಿಮಾ ಹಾಡುಗಳ ಜೊತೆಯಲ್ಲಿ ಕೆಲವು ಆಲ್ಬಂ ಹಾಡುಗಳು ಸಹ ಈ ವರ್ಷ ಸಂಗೀತ ಪ್ರಿಯರ ಮನ ಗೆದ್ದಿದೆ. ಹಾಗಾದ್ರೆ, 2020ರಲ್ಲಿ ಯ್ಯೂಟ್ಯೂಬ್‌ನ ನಂಬರ್ 1 ಹಾಡು ಯಾವುದು? ಮುಂದೆ ಓದಿ...

  2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು

  ಮೊದಲ ಸ್ಥಾನದಲ್ಲಿ Genda Phool

  ಮೊದಲ ಸ್ಥಾನದಲ್ಲಿ Genda Phool

  ಗಾಯಕ ಬಾದ್‌ಶಾ ಸಾಹಿತ್ಯ ರಚಿಸಿ, ಕಂಪೋಸ್ ಮಾಡಿರುವ ಹಾಡು Genda Phool. 2020ರ ಯ್ಯೂಟ್ಯೂಬ್ ನ ಟಾಪ್ ಹಾಡುಗಳ ಪೈಕಿ ಈ ಹಾಡು ಮೊದಲ ಸ್ಥಾನದಲ್ಲಿದೆ. ಬಾದ್‌ಶಾ ಮತ್ತು ಜಾಕ್‌ಲೀನ್ ಫರ್ನಾಂಡೀಸ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

  ಮೋಟೋ ಹಾಡು

  ಮೋಟೋ ಹಾಡು

  ಅಜಯ್ ಹೂಡ ಸಾಹಿತ್ಯ ರಚಿಸಿರುವ ಮೋಟೋ ಹಾಡು ಯ್ಯೂಟ್ಯೂಬ್‌ನ ಟಾಪ್ ಹಾಡುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡಿಲರ್ ಖಾರ್ಕಿಯಾ, ಅಜಯ್ ಹೂಡಾ ಮತ್ತು ಅಂಜಲಿ ರಾಘವ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು, ಅಮನ್ ಜಾಜಿ ಸಂಗೀತ ನೀಡಿದ್ದಾರೆ.

  2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

  ಮೂರನೇ ಸ್ಥಾನದಲ್ಲಿ ಬುಟ್ಟ ಬೊಮ್ಮಾ

  ಮೂರನೇ ಸ್ಥಾನದಲ್ಲಿ ಬುಟ್ಟ ಬೊಮ್ಮಾ

  ಈ ವರ್ಷದ ಟಾಪ್ ಹಾಡುಗಳ ಪೈಕಿ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆಯ ಹೆಜ್ಜೆ ಹಾಕಿರುವ ಬುಟ್ಟ ಬೊಮ್ಮಾ ಹಾಡು ಸ್ಥಾನ ಪಡೆದುಕೊಂಡಿದೆ. ಎಸ್ ತಮನ್ ಈ ಹಾಡಿಗೆ ಸಂಗೀತ ನೀಡಿದ್ದು, ಅಲಾ ವೈಕುಂಠಪುರಂಲೋ ಸಿನಿಮಾದ ಹಾಡು ಇದಾಗಿದೆ.

  ನಾಲ್ಕನೇ ಸ್ಥಾನದಲ್ಲಿ ಫೀಲಿಂಗ್ಸ್

  ನಾಲ್ಕನೇ ಸ್ಥಾನದಲ್ಲಿ ಫೀಲಿಂಗ್ಸ್

  ಸುಮಿತ್ ಗೋಸ್ವಾಮಿ ಸಾಹಿತ್ಯ ರಚಿಸಿ, ಕಂಪೋಸ್ ಮಾಡಿ ಹಾಡಿರುವ ಹಾಡು ಫೀಲಿಂಗ್ಸ್ ಈ ವರ್ಷದ ಟಾಪ್ ಹಾಡುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

  ರಾಮುಲು ರಾಮುಲು ಹಾಡು

  ರಾಮುಲು ರಾಮುಲು ಹಾಡು

  ಇನ್ನು ಆರನೇ ಸ್ಥಾನದಲ್ಲಿ ಗೋವಾ ಬೀಚ್ ಹಾಡು, ಏಳನೇ ಸ್ಥಾನದಲ್ಲಿ ಎಮಿವೇ ಹಾಡು, ಏಂಟನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಚಿತ್ರದ ರಾಮುಲು ರಾಮುಲು ಹಾಡು ಸ್ಥಾನ ಪಡೆದಿದೆ. ಒಂಬತ್ತನೇ ಸ್ಥಾನದಲ್ಲಿ ಎಬಿಸಿಡಿ 2 ಚಿತ್ರದ ಮುಕ್ಕಾಬುಲ್ಲಾ ಹಾಗೂ ಹತ್ತನೇ ಸ್ಥಾನದಲ್ಲಿ ದಿಲ್ ತೊಡ್ ಕೆ ಹಾಡು ಇದೆ.

  English summary
  Youtube in india: Check out the top Music Videos of 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X