»   » ಬಿಡುಗಡೆ ಆಯ್ತು ತುಳು ಸಿನಿಮಾ 'ಪಮ್ಮಣ್ಣೆ ದಿ ಗ್ರೇಟ್' ಧ್ವನಿಸುರುಳಿ

ಬಿಡುಗಡೆ ಆಯ್ತು ತುಳು ಸಿನಿಮಾ 'ಪಮ್ಮಣ್ಣೆ ದಿ ಗ್ರೇಟ್' ಧ್ವನಿಸುರುಳಿ

Posted By:
Subscribe to Filmibeat Kannada

ಮಂಗಳೂರು: ಶ್ರೀಮುತ್ತು ರಾಮ್ ಕ್ರಿಯೇಷನ್ಸ್ ಅವರ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ 'ಪಮ್ಮಣ್ಣೆ ದಿ ಗ್ರೇಟ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮಂಗಳೂರು ಪುರಭವನದಲ್ಲಿ ಜರಗಿತು.

ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಗಣೇಶ್ ರಾವ್ ಭಾಗವಹಿಸಿದ್ದರು. ಧ್ವನಿಸುರುಳಿಯನ್ನು ಬಿಡುಗಡೆ ಗೊಳಿಸಿದ ಅವರು, ತುಳು ಸಿನಿಮಾ ರಂಗ ಇಂದು ಕನ್ನಡ ಚಿತ್ರರಂಗದಂತೆ ಬೆಳೆಯುತ್ತಿದೆ. ಬಹಳಷ್ಟು ಮಂದಿ ಯುವ ನಿರ್ದೇಶಕರು, ಕಲಾವಿದರು ಆಕರ್ಷಿತರಾಗಿ ತುಳು ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ತುಳು ಭಾಷೆಯ ಮೇಲಿನ ಅಭಿಮಾನ, ಪ್ರೀತಿಯಿಂದ ನಿರ್ಮಾಪಕರು ತುಳು ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯೇ ಇಲ್ಲ. ಭಾಷೆಯ ಮೇಲಿನ ಅಭಿಮಾನದಿಂದ ಚಿತ್ರ ನಿರ್ಮಿಸುವವರನ್ನು ಪ್ರೇಕ್ಷಕರು, ಕಲಾಭಿಮಾನಿಗಳು ಟಿಕೆಟ್ ಪಡೆದು ಸಿನಿಮಾ ವೀಕ್ಷಿಸಬೇಕು ಎಂದು ಕೇಳಿಕೊಂಡರು.

ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರಾ, ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್, ಪಮ್ಮಿ ಕೊಡಿಯಾಲ್ ಬೈಲ್, ರೋನ್ಸ್ ಲಂಡನ್, ವೀರೇಂದ್ರ ಸುವರ್ಣ, ವಸಂತಕುಮಾರ್, ವಿಜಿಪಾಲ್, ಸುದೇಶ್ ಕುಮಾರ್, ಯೋಗೀಶ್ ಶೆಟ್ಟಿ ಜೆಪ್ಪು, ಯಾಕೂಬು ಖಾದರ್ ಗುಲ್ವಾಡಿ ಮೊದಲಾದವರು ಇದ್ದರು.

Tulu Movie Pammanne The great audio released

ಇದೇ ವೇಳೆ ಡಾ.ಸಂಜೀವ ದಂಡಕೇರಿ, ಸೀತಾರಾಮ್ ಕುಲಾಲ್, ಭೋಜ ಸುವರ್ಣ, ಚಂದ್ರಕಾಂತ್ ಶೆಟ್ಟಿ, ಚರಣ್ ಕುಮಾರ್ ರಾಗ್, ಸತೀಶ್ ಬಂದಲೆ ಮುಂತಾದವರನ್ನು ಸನ್ಮಾನಿಸಲಾಯಿತು.

ಕೃಷ್ಣ ನಾಯಕ್ ಕಾರ್ಕಳ, ವೀರೇಂದ್ರ ಸುವರ್ಣ ಕಟೀಲು ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ಎಂ.ಕೆ. ಸೀತಾರಾಮ್ ಕುಲಾಲ್, ಸುರೇಶ್ ಆರ್.ಎಸ್, ಕಾ.ವಿ. ಕೃಷ್ಣದಾಸ್ ಸಾಹಿತ್ಯ ಬರೆದಿದ್ದಾರೆ. ಎಸ್.ಪಿ.ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಅನುರಾಧಾ ಭಟ್, ಹೇಮಂತ್, ಚೇತನ್, ಕುಸಾಲ್ ಖುಷಿ ಕಂಠದಲ್ಲಿ ಹಾಡುಗಳು ಮೂಡಿ ಬಂದಿವೆ. ಅರವಿಂದ ಬೋಳಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಅಂಬರ್, ಶಿಲ್ಪ ಸುವರ್ಣ, ಅನುಷ್ ಕೋಟ್ಯಾನ್, ರಮೇಶ್ ಪಂಡಿತ್, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ ಅಭಿನಯಿಸಿದ್ದಾರೆ.

ಕಾಪು, ಉಚ್ಚಿಲ, ಕಟಪಾಡಿ, ಪಿಲಿಕುಳ, ಮಂಗಳೂರು, ಮೂಲ್ಕಿ, ಕಟೀಲುವಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, 30 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸಿನಿಮಾ ಜೂನ್ ತಿಂಗಳಲ್ಲಿ ತೆರೆ ಕಾಣಲಿದೆ.

ತುಳುನಾಡಿನ ಮೊಗವೀರ ಸಮಾಜದ ಕುಟುಂಬವೊಂದನ್ನು ಕೇಂದ್ರೀಕರಿಸಿರುವ ಕಥೆ ಹೊಂದಿರುವ 'ಪಮ್ಮಣ್ಣೆ ದಿ ಗ್ರೇಟ್' ಸಿನಿಮಾದಲ್ಲಿ ಸೀತಾರಾಮ್ ಕುಲಾಲ್ ರಚನೆಯ 'ಮೋಕೆದ ಸಿಂಗಾರಿ... ಉಂತುದೆ ವಯ್ಯಾರಿ' ಹಾಡು ಇರುವುದು ವಿಶೇಷ.

English summary
Tulu Movie 'Pammanne The great' audio is released in a event held at Mangaluru.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X