Just In
- 3 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 52 min ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 1 hr ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 2 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- News
ಕಾಫಿಗೆ ಬೆಂಬಲ ಬೆಲೆ ಘೋಷಿಸಿ ಬೆಳೆಗಾರರ ಮನಗೆದ್ದ ಕೇರಳ ಸರ್ಕಾರ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ
ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಹಾಗೂ ನೀಲಾ ವಾಸ್ವಾನಿ ಅವರು 57ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಭಾರತದ ರಿಕ್ಕಿ ಹಾಗೂ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೊಟರ್ ಕೆಲ್ಲರ್ ಮನ್ ಅವರ ಹೊಸ ಆಲ್ಬಂ ‘ವಿಂಡ್ಸ್ ಆಫ್ ಸಂಸಾರ‘ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದೆ. ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ಕ್ರೇಜ್ ಆಲ್ಬಂ ಸ್ಪರ್ಧಿಸಿತ್ತು.
ಕೇಜ್ ಅವರ ಸಂಗೀತ ಸಂಯೋಜನೆಯ ಭಾಗವಾಗಿರುವ ಬೆಳಗಾವಿ ಮೂಲದ ಕೀರ್ತಿ ನಾರಾಯಣ್ ಅವರು ಕೀ ಬೋರ್ಡ್ ವಾದಕ ಹಾಗೂ ಸಂಗೀತ ಪರಿಕರ ಸಂಯೋಜನೆಯ ಹೊಣೆಹೊತ್ತಿದ್ದು ಇನ್ನೊಂದು ವಿಶೇಷ.
ಸುಮಾರು 10 ವರ್ಷಗಳ ಪರಿಶ್ರಮ ಈಗ ಫಲ ನೀಡುತ್ತಿದೆ. ರಿಕ್ಕಿ ಅವರ ಸ್ವರಜ್ಞಾನಕ್ಕೆ ತಕ್ಕಂತೆ ಸಂಯೋಜನೆ ಮಾಡುವ ಹೊಣೆ ನಮ್ಮ ಮೇಲಿತ್ತು. ನಾನು ಅದನ್ನು ಉಳಿಸಿಕೊಂಡ ನಂಬಿಕೆಯಿದೆ ಎಂದು ಕೀರ್ತಿ ಹೇಳಿದ್ದಾರೆ.
ರಿಕ್ಕಿ 3 ಸಾವಿರಕ್ಕೂ ಅಧಿಕ ರೇಡಿಯೋ ಹಾಗೂ ಟಿವಿ ಜಿಂಗಲ್ಸ್ ಗೆ ಸಂಗೀತ ನೀಡಿದವರು. 2011ರ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೂ ರಿಕ್ಕಿದೇ ಮ್ಯೂಸಿಕ್. ಸುಮಾರು 13ಕ್ಕೂ ಅಧಿಕ ಅಲ್ಬಂ ಹೊರ ತಂದಿರುವ ರಿಕ್ಕಿ ಈಗ 57ನೇ ಗ್ರ್ಯಾಮಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಭಾರತ ಮತ್ತು ಆಫ್ರಿಕಾ ಸಂಗೀತಗಾರರ ಜೊತೆಗಾರಿಕೆಯಲ್ಲಿ ಮೂಡಿಬಂದಿರುವ 'ವಿಂಡ್ಸ್ ಆಫ್ ಸಂಸಾರ್' ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕುರಿತಾದ ಫ್ಯೂಶನ್ ಹಾಡುಗಳನ್ನು ಒಳಗೊಂಡಿದೆ. ವಿಂಡ್ಸ್ ಆಫ್ ಸಂಸಾರ ಗೀತೆಯ ತುಣುಕು ಇಲ್ಲಿ ನೋಡಿ...
2002ರಲ್ಲಿ ಸಂಗೀತ ಜಗತ್ತಿನಲ್ಲಿ ಸಿತಾರ್ ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಂಡಿತ್ ರವಿಶಂಕರ್‌ಗೆ ಸಂಗೀತ ಕ್ಷೇತ್ರದ ಹೆಮ್ಮೆಯ ಗ್ರ್ಯಾಮಿ ಪ್ರಶಸ್ತಿ ಸಂದಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ತಬಲಾ ಮಾಂತ್ರಿಕ ಝಾಕೀರ್ ಹುಸೇನ್, ವಿಶ್ವ ಮೋಹನ್, 2010ರಲ್ಲಿ ಎ.ಆರ್ ರೆಹಮಾನ್ ಈ ಪ್ರಶಸ್ತಿ ಗೆದ್ದಿದ್ದರು.
ನೀಲಾಗೆ ಗ್ರ್ಯಾಮಿ: ನೀಲಾ ವಾಸ್ವಾನಿ ಅವರು ಮಕ್ಕಳ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. I Am Malala: How One Girl Stood Up For Education And Changed The World (Malala Yousafzai) ಸಂಗೀತ ಆಲ್ಬಂನ ಕಥಾ ರೂಪಕ್ಕೆ ನೀಲಾ ದನಿಗೂಡಿಸಿದ್ದರು.
ಗ್ರ್ಯಾಮಿ ಪ್ರಶಸ್ತಿ ವಿಜೇತ ಸಿತಾರ್ ವಾದಕ ದಿವಂಗತ ಪಂಡಿತ್ ರವಿಶಂಕರ್ ಅವರ ಪುತ್ರಿ ಅನೌಷ್ಕ ಶಂಕರ್ ಅವರ ಆಲ್ಬಂ ಟ್ರೇಸಸ್ ಆಫ್ ಯೂ ಕೂಡಾ ಈ ಬಾರಿ ವರ್ಲ್ಡ್ ಮ್ಯೂಸಿಕ್ ಆಲ್ಬಂ ಕೆಟಗರಿಯಲ್ಲಿ ನಾಮನಿರ್ದೇಶನಗೊಂಡಿತ್ತು. ಅದರೆ, ಏಂಜಲಿಕ್ ಕಿಜೋ ಅವರ ಈವ್ ಈ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತು.