For Quick Alerts
  ALLOW NOTIFICATIONS  
  For Daily Alerts

  ರಂಗು ಮಾಸಿತು ಶಾಹಿಯ ಗೀಚಲು-ಉಳಿದವರು ಕಂಡಂತೆ

  By Mahesh
  |

  ಮಳೆಮರೆತು ತಾನಾಗಿ ಹಸಿರಾಗಿ ನಿಂತಾಗ ಈ ಭೂಮಿ... ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ... ಕಣ್ಣೀರೆ ನಿನ್ನ ಸಂತೇಗೆ ಕರೆದಾಗ, ಬೇಜಾರಿನಲ್ಲಿ ಸಜ್ಜಾದೆಯ? ನೋವಿರುವ ಗಾಯ ಬೆರಳಲ್ಲೆ ಇರುವಾಗ, ಬಿಡಿಸೋದು ಕಲಿತೆ ರಂಗೋಲಿಯ? ಮಿಂಚೊಂದು ಕಿಡಿಕಾರಿ ಆಕಾಶ ಚೆಲುವಾಯ್ತು ಹೇಗೆ? ಬೆಂಕಿಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

  ಮೇಲ್ಕಂಡ ಸಾಲುಗಳನ್ನು ಓದುತ್ತಿದ್ದಾರೆ ವಾಹ್ ! ಎನ್ನದೆ ಇರಲಾಗುವುದಿಲ್ಲ. ನಿರ್ದೇಶಕ ಸುನಿ ಅವರ ಸುವಿನ್ ಸಿನಿಮಾಸ್ ನಿರ್ಮಾಣದ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದ ಧ್ವನಿ ಸುರಳಿ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಫೆ.7 ರಂದು ಆಡಿಯೋ ರಿಲೀಸ್ ಆಗಬೇಕಿತ್ತು. ಅನಿವಾರ್ಯ ಕಾರಣಗಳಿಂದ ಫೆ.10 ರಂದು ಧ್ವನಿ ಸುರಳಿ ಅಭಿಮಾನಿಗಳ ಕೈ ತಲುಪಲಿದೆ. ಡಾ. ರಾಜ್ ಕುಟುಂಬದವರೊಬ್ಬರು( ಶಿವರಾಜ್ ಅಥವಾ ಪುನೀತ್) ಮುಖ್ಯ ಅತಿಥಿಗಳಾಗಿರುತ್ತಾರೆ. ಉಳಿದಂತೆ ನಮ್ಮನ್ನು ಮೆಚ್ಚಿ ತಪ್ಪುಗಳನ್ನು ತಿದ್ದಿ ಬೆಂಬಲಿಸುವ ಎಲ್ಲಾ ಅಭಿಮಾನಿಗಳು, ಚಿತ್ರ ತಂಡ ಅಂದಿನ ಕಾರ್ಯಕ್ರಮದಲ್ಲಿರುತ್ತದೆ ಎಂದು ನಿರ್ದೇಶಕ ಸುನಿ ಹೇಳಿದ್ದಾರೆ.

  ಉಳಿದವರು ಕಂಡಂತೆ ಚಿತ್ರದ ಟೇಲರ್ ತ್ರಿವೇಣಿ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ರಿಲೀಸ್ ಆಗಿ ಅಭಿಮಾನಿಗಳ ಮನಸೂರೆಗೊಂಡಿದೆ. ತುಗ್ಲಕ್, Lets kill gandhi ರಕ್ಷಿತ್ ಶೆಟ್ಟಿ ನಂತರ ಸಿಂಪಾಲ್ಲಾಗೊಂದು ಲವ್ ಸ್ಟೋರಿ ನಂತರ ಸಿಂಪಲ್ ಸ್ಟಾರ್ ಆಗಿ ಬೆಳೆದು ಈಗ 'ಉಳಿದವರು ಕಂಡಂತೆ' ಮೂಲಕ ಹೊಸ ಟ್ರೆಂಡ್ ಹುಟ್ಟಿಹಾಕಿದರು. ಉಳಿದವರು ಕಂಡಂತೆ ಚಿತ್ರದ ಹಾಡುಗಳ ಕೆಲ ಸಾಲುಗಳು ಕೂಡಾ ರಕ್ಷಿತ್ ಶೆಟ್ಟಿ ಫೇಸ್ ಬುಕ್ ನಲ್ಲಿ ಹಾಕುತ್ತಿದ್ದು, ಕ್ರೇಜ್ ಇನ್ನೂ ಜಾರಿಯಲ್ಲಿಡಲಾಗಿದೆ.

  ಉಳಿದವರು ಕಂಡಂತೆ ಚಿತ್ರ ಗೀತೆ ಸಾಲುಗಳು

  ಉಳಿದವರು ಕಂಡಂತೆ ಚಿತ್ರ ಗೀತೆ ಸಾಲುಗಳು

  ಚಿತ್ರದುರ್ಗದ ಕಲ್ಲಿನ ಕೋಟೆ, ಇಂಗ್ಲೀಷರಿಗೆ ಬಾಡಿಗೆ ಬಿಟ್ಟೆ, ಲೈಟ್ಹೌಸನ್ನು ನೆಲಕ್ಕೆ ಬಾಗಿಸಿ, ಚಂದಾ ನೋಡಲು ಲಾಂಟರ್ನ್ ಇಟ್ಟೆ, ಹುಳುಗಳ ಮೊಟ್ಟೆ, ಸಿಲ್ಕಿನ ಬಟ್ಟೆ, ಸೊಂಟಗೆ ಸುತ್ತಿ ಕೋಮಣ ತೊಟ್ಟೆ, ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ... Paper Paper Medicine Paper... Paper Paper Medicine Paper...

  ಬೆಂಕೀಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

  ಬೆಂಕೀಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

  ಮಳೆಮರೆತು ತಾನಾಗಿ ಹಸಿರಾಗಿ ನಿಂತಾಗ ಈ ಭೂಮಿ...
  ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ...
  ಕಣ್ಣೀರೆ ನಿನ್ನ ಸಂತೇಗೆ ಕರೆದಾಗ, ಬೇಜಾರಿನಲ್ಲಿ ಸಜ್ಜಾದೆಯ?
  ನೋವಿರುವ ಗಾಯ ಬೆರಳಲ್ಲೆ ಇರುವಾಗ, ಬಿಡಿಸೋದು ಕಲಿತೆ ರಂಗೋಲಿಯ? ಮಿಂಚೊಂದು ಕಿಡಿಕಾರಿ ಆಕಾಶ ಚೆಲುವಾಯ್ತು ಹೇಗೆ?
  ಬೆಂಕೀಯ ಕಡಿಗೀರಿ ಮನೆ ತುಂಬ ಬೆಳಕಾದ ಹಾಗೆ..

   ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು

  ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು

  ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು... ಕಳೆವ, ಸನಿಹದ ಕ್ಷಣವ, ಮೌನದ ಸ್ವರವ ಕೂಡಿಡುವೆನು...

  ಮನಸಾ ಬಿಚ್ಚಿಟ್ಟವನ, ಬರೆಯಲು ಮೌನದ ಕವನ, ಪದಗಳೆ ಇಲ್ಲದ ಸಾಲ, ಇಳಿಸಲು ಹಾಳೆಯ ಮೇಳ ಸೇರಲು, ರಂಗು ಮಾಸಿತು ಶಾಹಿಯ ಗೀಚಲು...

  ಟ್ರೇಲರ್ ರಿಲೀಸ್ ಸಮಾರಂಭ ಫ್ಯಾಶ್ ಬ್ಲಾಕ್

  ಟ್ರೇಲರ್ ರಿಲೀಸ್ ಸಮಾರಂಭ ಫ್ಯಾಶ್ ಬ್ಲಾಕ್

  ಟ್ರೇಲರ್ ರಿಲೀಸ್ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಲೂಸ್ ಮಾದ ಯೋಗಿ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ ಕರ್, ನಿರ್ದೇಶಕ ಪವನ್ ಒಡೆಯರ್ ಬಂದಿದ್ದರು. ಇವರ ಜತೆಗೆ ಉಳಿದವರು ಕಂಡಂತೆ ಚಿತ್ರ ನಿರ್ಮಿಸಿರುವ ಸುವಿನ್ ಸಿನಿಮಾಸ್ ನ ನಿರ್ದೇಶಕ ಸುನಿ, ಹೇಮಂತ್, ಅಭಿ ಇದ್ದರು.

  ಇವರ ಜತೆಗೆ ಚಿತ್ರದ ತಾರಾಗಣದಲ್ಲಿರುವ ತಾರಾ ಅನುರಾಧ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ, ಯಜ್ಞ ಶೆಟ್ಟಿ, ಟಿವಿ 9ನ ಮಾಜಿ ನಿರೂಪಕಿ ಕಮ್ ವಾರ್ತಾ ವಾಚಕಿ ಶೀತಲ್ ಶೆಟ್ಟಿ, ದಿನೇಶ್ ಮಂಗಳೂರು, ಈ ಹಿಂದೆ ಟಿವಿ ಚಾನೆಲ್ ನಿರೂಪಕರಾಗಿದ್ದ, ಆಗಾಗ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಗೌರೀಶ್ ಅಕ್ಕಿ ಮುಂತಾದವರು ಹಾಜರಿದ್ದರು. ಉಳಿದಂತೆ ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಬಿ. ಸುರೇಶ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಸಿದರು

  rn

  ಉಳಿದವರು ಕಂಡಂತೆ ಟ್ರೇಲರ್

  ಉಳಿದವರು ಕಂಡಂತೆ ಟ್ರೇಲರ್ ನಲ್ಲಿ ಕುಂದ್ರಾಪ ಕನ್ನಡ ಸಾಫ್ಟ್ ಬೈಗುಳಗಳು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. 80 ರ ದಶಕದಲ್ಲಿ ಉಡುಪಿ ಸುತ್ತಮುತ್ತ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ನಡೆದ ಘಟನಾವಳಿ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಕರಾವಳಿ ಭಾಗದಲ್ಲೇ ಚಿತ್ರಿತವಾಗಿರುವ ಟ್ರೇಲರ್ ಹೇಗಿದೆ ಎಂಬುದನ್ನು ನೋಡಿ..ಸದ್ಯಕ್ಕೆ ಇದರ ಕೌಂಟ್ 224,364

  English summary
  Ulidavaru Kandante much awaited Kannada movie songs coming your way for all of you to hear and sing..... this Feb 10th. Go grab your copies people says debut director Rakshit Shetty's facebook post. Ulidavaru Kandante film audio release function may feature one main guest from Dr. Raj family

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X