»   » ಉಪ್ಪಿ 'ಬ್ರಹ್ಮ' ಆಡಿಯೋ ರಿಲೀಸ್ ಗೆ ಮುಹೂರ್ತ ಫಿಕ್ಸ್

ಉಪ್ಪಿ 'ಬ್ರಹ್ಮ' ಆಡಿಯೋ ರಿಲೀಸ್ ಗೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರದ ಆಡಿಯೋ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ದಿ ಲೀಡರ್ ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ. ಡಿಸೆಂಬರ್ 29ರಂದು ಭಾನುವಾರ ಬಿಡುಗಡೆಯಾಗುತ್ತಿದೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮ ಚಿತ್ರದ ಇಡೀ ಟೀಂ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿರುತ್ತದೆ. ಕನ್ನಡ ಚಿತ್ರರಂಗದ ತಾರೆಗಳು ಈ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. [ಉಪೇಂದ್ರಗೆ ಮಕ್ಮಲ್ ಟೋಪಿ]


ಇತ್ತೀಚೆಗಷ್ಟೇ ಬ್ರಹ್ಮ ಚಿತ್ರದ "ಟಿಂಗು ಟಿಂಗು ಟಿಂಗು ಸಮ್ ಥಿಂಗು ಹ್ಯಾಪನಿಂಗು ಎದೆಯೊಳಗೆ ರಿಂಗಿಂಗು..." ಎಂಬ ಹಾಡಿನ ಚಿತ್ರೀರಣ ಮುಂಬೈನಲ್ಲಿ ನಿರ್ಮಿಸಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು. ಈ ಹಾಡನ್ನು ಕವಿರಾಜ್ ಹೆಣೆದಿದ್ದು ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ಉಪೇಂದ್ರ, ಪ್ರಣೀತಾ ಹೆಜ್ಜೆ ಹಾಕಿದ್ದಾರೆ. ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನ ಮಾಡಿರುವುದು ವಿಶೇಷ. ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರವಿದು.

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್, ಶರಣ್, ಪದ್ಮಜಾ ರಾವ್, ಸುಚೇಂದ್ರ ಪ್ರಸಾದ್ ಮುಂತಾದರಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
The much awaited music of Superstar Upendra's Brahma -The Leader is finally ready to hit stores. The music will be out on December 29, Sunday. The crew has also confirmed the news. ADVERTISEMENT The audio release program will be held in Nehru field, Hubli, which will be attended by the all the lead cast of the Brahma movie. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada