For Quick Alerts
  ALLOW NOTIFICATIONS  
  For Daily Alerts

  ಶಿವಭಕ್ತರಿಗೆ ವಿಶೇಷ ಉಡುಗೊರೆ ನೀಡಿದ ಗಾಯಕಿ ವಾಣಿ ಹರಿಕೃಷ್ಣ

  |

  ಇಂದು ದೇಶದಾದ್ಯಂತ ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ದೇಶದ ಜನತೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಭಜನೆ ಮಾಡುತ್ತ ರಾತ್ರಿಯಲ್ಲ ಜಾಗರಣೆ ಮಾಡುತ್ತಾರೆ. ಈ ವಿಶೇಷ ದಿನದೊಂದು ಕನ್ನಡದ ಖ್ಯಾತ ಗಾಯಕಿ ವಾಣಿ ಹರಿಕೃಷ್ಣ ಶಿವಭಕ್ತರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

  ಹೌದು, ಶಿವರಾತ್ರಿಯ ವಿಶೇಷವಾಗಿ ಶಿವನ ಬಗ್ಗೆ ಹಾಡೊಂದನ್ನು ಮಾಡಿ ರಿಲೀಸ್ ಮಾಡಿದ್ದಾರೆ ವಾಣಿ ಹರಿಕೃಷ್ಣ. 'ಶಂಕರ ಶಿವ ಶಂಕರ....' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಶಿವಭಕ್ತರ ಗಮನ ಸೆಳೆಯುತ್ತಿದೆ.

  ಶಿವನ ಬಗ್ಗೆ ಇರುವ ಈ ಹಾಡನ್ನು ವಾಣಿ ಹರಿಕೃಷ್ಣ ಅವರು ಶ್ರಮ ವಹಿಸಿ ಇಷ್ಟಪಟ್ಟು ಮಾಡಿರುವ ಹಾಡು. ವಾಣಿ ಅವರೆ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿ, ಧ್ವನಿ ನೀಡಿದ್ದಾರೆ. ವಾಣಿ ಅವರ ಜೊತೆ ಗಾಯಕ ಕೀರ್ತನ್ ಹೊಳ್ಳ ಕೂಡ ಹಾಡಿದ್ದಾರೆ.

  ಸರಿಗಮಪ ಶೋ ಮೂಲಕ ಎಲ್ಲರ ಗಮನ ಸೆಳೆದಿದ್ದ ಕೀರ್ತನ್ ಶೋ ವಿನ್ನರ್ ಕೂಡ ಆಗಿದ್ದರು. ವಾಣಿ ಮತ್ತು ಕೀರ್ತನ್ ಕಾಂಬಿನೇಶನ್ ನಲ್ಲಿ ಬಂದ 'ಶಂಕರ ಶಿವ ಶಂಕರ...' ಹಾಡನ್ನು ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  English summary
  Kannada famous Singer Vani Harikrishna composed a song about Lord Shiva for Shivaratri special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X