»   » ವಸಿಷ್ಠ ಸಿಂಹ ಹಾಡಿರುವ 'ಪಾರ್ಟಿ ಸಾಂಗ್'ಗೆ ಸಖತ್ ರೆಸ್ಪಾನ್ಸ್

ವಸಿಷ್ಠ ಸಿಂಹ ಹಾಡಿರುವ 'ಪಾರ್ಟಿ ಸಾಂಗ್'ಗೆ ಸಖತ್ ರೆಸ್ಪಾನ್ಸ್

Posted By:
Subscribe to Filmibeat Kannada

ಕಂಚಿನ ಕಂಠದ ಖಳನಟ ವಸಿಷ್ಠ ಸಿಂಹ ತಮ್ಮ ನಟನೆಯಿಂದ ಮಾತ್ರವಲ್ಲ, ತಮ್ಮ ಹಾಡಿನಿಂದಲೂ ಹೆಚ್ಚು ಮೋಡಿ ಮಾಡಿದ್ದಾರೆ. ವಸಿಷ್ಠ ಕನ್ನಡದ ಕೂಲ್ ವಿಲನ್ ಮಾತ್ರವಲ್ಲ, ಸ್ಟೀಟ್ ಸಿಂಗರ್ ಕೂಡ ಹೌದು.

ಇತ್ತೀಚೆಗಷ್ಟೇ ವಸಿಷ್ಠ ಸಿಂಹ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ಹಾಡಿದ 'ಮರೆತೇ ಹೋದೇನು' ಹಾಡಿನ ಹ್ಯಾಂಗೋವರ್ ನಿಂದ ಇನ್ನು ಜನ ಹೊರಬಂದಿಲ್ಲ. ಅಷ್ಟರಲ್ಲೇ ಹೊಸದೊಂದು ಪಾರ್ಟಿ ಸಾಂಗ್ ಹಾಡುವ ಮೂಲಕ ಸಂಗೀತ ಪ್ರಿಯರರಿಗೆ ಮತ್ತೆ ಕಿಕ್ ಕೊಟ್ಟಿದ್ದಾರೆ.

Vasishta simha's hangover song

ಎಸ್, ವಸಿಷ್ಠ ಸಿಂಹ ಕನ್ನಡದ ಹೊಸ ಚಿತ್ರದಲ್ಲೊಂದು Rap ಸಾಂಗ್ ಹಾಡಿದ್ದು, ಆ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಕನ್ನಡ ಕಲಾಭಿಮಾನಿಗಳು ವಸಿಷ್ಠ ಹಾಡಿರುವ 'ಹ್ಯಾಂಗೋವರ್' ಹಾಡು ಕೇಳಿ ಹ್ಯಾಂಗೋವರ್ ಆಗಿದ್ದಾರೆ.

ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!

ಅಂದ್ಹಾಗೆ, ವಸಿಷ್ಠ ಸಿಂಹ ಹಾಡಿರುವ ಮೊದಲ Rap ಸಾಂಗ್ ಇದು. ಸ್ವತಃ ವಸಿಷ್ಠ ಕೂಡ ಈ ಬಗ್ಗೆ ಖುಷಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡದಲ್ಲಿ ಚಂದನ್ ಶೆಟ್ಟಿ Rap ಸಾಂಗ್ ಗಳ ಮೂಲಕ ಖ್ಯಾತಿ ಗಳಿಸಿಕೊಂಡಿದ್ದಾರೆ. ಚಂದನ್ ಹಾಡುಗಳು ಮ್ಯೂಸಿಕ್ ಪ್ರಿಯರಿಗೆ ಹೆಚ್ಚು ಖಿಕ್ ಕೊಡುತ್ತಿದೆ. ಇದೀಗ, ವಸಿಷ್ಠ ಕೂಡ Rap ಸ್ಟೈಲ್ ನಲ್ಲಿ ಹಾಡಿರುವುದು ಕೇಳುಗರಿಗೆ ಟಾನಿಕ್ ಸಿಕ್ಕಿದಂತಾಗಿದೆ.

ಅಷ್ಟಕ್ಕೂ, ವಸಿಷ್ಠ ಹಾಡಿರುವ ಈ ಹಾಡು 'ಒಂದು ಲವ್ ಎರಡು ಸ್ಟೋರಿ' ಚಿತ್ರದ್ದು. ವಸಿಷ್ಠ ಎಂಬ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಂತೋಷ್, ಮಧು, ಪ್ರಕೃತಿ, ವಚನಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸಿದ್ಧಾರ್ಥ್ ಈ ಹಾಡನ್ನ ಕಂಪೋಸ್ ಮಾಡಿದ್ದು, ಸಾಹಿತ್ಯ ಕೂಡ ಅವರೇ ರಚಿಸಿದ್ದಾರೆ. ಸದ್ಯ, ಹ್ಯಾಂಗೋವರ್ ಹಾಡಿನ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ ಇದೇ ವರ್ಷ ತೆರೆಕಾಣಲಿದೆ.

ವಸಿಷ್ಠ ಸಿಂಹ ಪ್ರತಿಭೆಗೆ ಫುಲ್ ಮಾರ್ಕ್ಸ್ ಕೊಟ್ಟ ಪ್ರಕಾಶ್ ರೈ

English summary
Kannada Actor vasishta simha sing a new rap song in ''ondu love two love'' movie. the song has released and getting viral in social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X