»   » ಹಂಸಲೇಖ, ರವಿಚಂದ್ರನ್ ಕಾಂಬಿನೇಶನ್ ಹಾಡುಗಳನ್ನು ವಿಜಯ ಪ್ರಕಾಶ್ ಧ್ವನಿಯಲ್ಲಿ ಕೇಳಿ

ಹಂಸಲೇಖ, ರವಿಚಂದ್ರನ್ ಕಾಂಬಿನೇಶನ್ ಹಾಡುಗಳನ್ನು ವಿಜಯ ಪ್ರಕಾಶ್ ಧ್ವನಿಯಲ್ಲಿ ಕೇಳಿ

Posted By:
Subscribe to Filmibeat Kannada

ಕನ್ನಡದ ಸಿನಿ ಸಂಗೀತ ಲೋಕದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಹಾಡುಗಳಿಗೆ ವಿಶೇಷ ಸ್ಥಾನವಿದೆ. ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದ ಹಾಡುಗಳು ಎಷ್ಟು ಬಾರಿ ಕೇಳಿದರೂ ಸಾಕು ಎನ್ನಿಸುವುದಿಲ್ಲ. ಅಂತಹ ಹಾಡುಗಳನ್ನು ಈಗ ಗಾಯಕ ವಿಜಯ ಪ್ರಕಾಶ್ ಧ್ವನಿಯಲ್ಲಿ ಕೇಳುವ ಸಮಯ ಬಂದಿದೆ.

ಗಾಯಕ ವಿಜಯ ಪ್ರಕಾಶ್ ಈಗ 'ಸ್ವರಾಭಿಷೇಕ' ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ವಿಜಯ ಪ್ರಕಾಶ್ ಸುಮಧುರ ಹಾಡುಗಳನ್ನು ಹಾಡುತ್ತಿದ್ದಾರೆ. ಪ್ರತಿ ವಾರ ಪ್ರಸಾರವಾಗುವ ಈ ಕಾರ್ಯಕ್ರಮದ ಮುಂದಿನ ಒಂದು ಸಂಚಿಕೆಯಲ್ಲಿ ವಿಜಯ ಪ್ರಕಾಶ್ ಹಂಸಲೇಖ ಮತ್ತು ರವಿಚಂದ್ರನ್ ಜೋಡಿಯ ಹಾಡುಗಳನ್ನು ಹಾಡಲಿದ್ದಾರೆ.

Vijay Prakash sings Ravichandran and Hamsalekha combination songs.

ಪ್ರತಿ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸ್ವರಾಭಿಷೇಕ' ಕಾರ್ಯಕ್ರಮ ಪ್ರಸಾರವಾಗಲಿದೆ. ಹಂಸಲೇಖ ಮತ್ತು ರವಿಚಂದ್ರನ್ ಸಂಚಿಕೆಯ ಕಾರ್ಯಕ್ರಮ ಮುಂದಿನ ಭಾನುವಾರ ಪ್ರಸಾರವಾಗಲಿದೆ. ಸದ್ಯಕ್ಕೆ ಈ ಕಾರ್ಯಕ್ರಮದ ಒಂದು ಸಣ್ಣ ಝಲಕ್ ಹೊರ ಬಂದಿದೆ.

English summary
Watch Video: Singer Vijay Prakash sings Ravichandran and Hamsalekha combination songs in Colors Kannada Channel's 'Swarabhisheka' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada