For Quick Alerts
  ALLOW NOTIFICATIONS  
  For Daily Alerts

  20 ವರ್ಷದ ಹಿಂದೆಯೇ ದಾಖಲೆ ಸೃಷ್ಟಿಸಿದ್ದ 'ಯಜಮಾನ' ಆಡಿಯೋ

  |

  ಈಗಿನ ಸಿನಿಮಾಗಳ ಆಡಿಯೋ ರೈಟ್ಸ್ ಸೇಲ್ ಆದ್ರೆನೇ ದೊಡ್ಡ ಸಂಭ್ರಮ. ಅಷ್ಟು ಕೋಟಿಗೆ ಸೇಲ್ ಆಯ್ತು, ಇಷ್ಟು ಕೋಟಿಗೆ ಸೇಲ್ ಆಯ್ತು ಎಂದು ಬೀಗುತ್ತಾರೆ. ಆದರೆ, ಕೆಲವು ಹಳೆಯ ಚಿತ್ರಗಳು ಆಗಿನ ಸಮಯಕ್ಕೆ ಭರ್ಜರಿ ಬಿಸಿನೆಸ್ ಮಾಡಿರುವ ದಾಖಲೆಗಳಿವೆ. ಕಡಿಮೆ ಬೆಲೆಗೆ ಮಾರಾಟವಾದರೂ ದೊಡ್ಡ ಲಾಭ ಮಾಡಿಕೊಟ್ಟಿರುವ ಉದಾಹರಣೆಗಳಿವೆ.

  ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾ 'ಯಜಮಾನ' ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ದಾಖಲೆ ಬರೆದಿದೆ. ಡಾ ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದ ಈ ಚಿತ್ರ ಆಗಿನ ಸಮಯದಲ್ಲಿ ಅತಿ ದೊಡ್ಡ ಯಶಸ್ಸು ಕಂಡಿತ್ತು. ವಿಶೇಷವಾಗಿ ಆಡಿಯೋ ರೈಟ್ಸ್ ವಿಚಾರದಲ್ಲಿ ಹೆಚ್ಚು ಗಮನ ಸೆಳೆದಿತ್ತು.

  'ವಿಕ್ರಾಂತ್ ರೋಣ' ಆಡಿಯೋ ಹಕ್ಕು ದುಬಾರಿ ಬೆಲೆ ಮಾರಾಟ 'ವಿಕ್ರಾಂತ್ ರೋಣ' ಆಡಿಯೋ ಹಕ್ಕು ದುಬಾರಿ ಬೆಲೆ ಮಾರಾಟ

  ವರದಿಗಳ ಪ್ರಕಾರ ಯಜಮಾನ ಸಿನಿಮಾದ ಆಡಿಯೋ ಹಕ್ಕು 9 ಲಕ್ಷ ರೂಪಾಯಿಗೆ ಮಾರಾಟ ಆಗಿತ್ತಂತೆ. ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಹಾಡುಗಳನ್ನು ಖರೀದಿಸಿದ್ದರು. 9 ಲಕ್ಷಕ್ಕೆ ಖರೀದಿ ಮಾಡಿ 8 ಕೋಟಿವರೆಗೂ ಬಿಸಿನೆಸ್ ಮಾಡಿದೆ ಎಂಬ ಮಾಹಿತಿ ಇದೆ. ಆಗಿನ್ನು ಆಡಿಯೋ ಸಿಡಿ ಸಮಯ.

  ಈ ವಿಚಾರ ಈಗ ಏಕೆ ಅಂದ್ರಾ? ಇತ್ತೀಚಿನ ದಿನದಲ್ಲಿ ಸ್ಟಾರ್ ನಟರ ಚಿತ್ರಗಳ ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ ಆಗಿದೆ ಎನ್ನುವ ಸುದ್ದಿಗಳು ಹೆಚ್ಚಾಗಿದೆ. ಹಾಗಾಗಿ, ವಿಷ್ಣುವರ್ಧನ್ ಅಭಿಮಾನಿಗಳು ಯಜಮಾನ ಚಿತ್ರದ ಆಡಿಯೋ ಹಕ್ಕು ಸೇಲ್ ಬಗ್ಗೆ ವರದಿಯಾಗಿದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

  'ಯಜಮಾನ' ಚಿತ್ರಕ್ಕೆ 20 ವರ್ಷ: ಸಿನಿಮಾ ನೋಡಿ ಭಾವುಕರಾಗಿದ್ದ ಅಣ್ಣಾವ್ರು'ಯಜಮಾನ' ಚಿತ್ರಕ್ಕೆ 20 ವರ್ಷ: ಸಿನಿಮಾ ನೋಡಿ ಭಾವುಕರಾಗಿದ್ದ ಅಣ್ಣಾವ್ರು

  ಅಂದ್ಹಾಗೆ, ಯಜಮಾನ ಸಿನಿಮಾ ತಮಿಳಿನ 'ವಾನತ್ತಪೊಲಾ' ಚಿತ್ರದ ರಿಮೇಕ್. ತಮಿಳಿನಲ್ಲಿ ವಿಜಯಕಾಂತ್ ನಟಿಸಿದ್ದ ಪಾತ್ರದಲ್ಲಿ ಕನ್ನಡದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡರು. ಆರ್ ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದು, ಮುಸ್ತಾಫ್, ರೆಹಮಾನ್, ಮೆಹರುನ್ನಿಸ ಕೆ ಜಂಟಿಯಾಗಿ ನಿರ್ಮಿಸಿದ್ದರು. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಇತ್ತು.

  Vishnuvardhan Starrer Yajamana Movie Audio Earns Rs 8 crore 20 Years Back

  ಒಟ್ಟು ಎಂಟು ಹಾಡುಗಳು ಈ ಚಿತ್ರದಲ್ಲಿದ್ದವು. ಕೆ ಕಲ್ಯಾಣ್ ಸಾಹಿತ್ಯ ಬರೆದಿದ್ದರು. ಎಲ್ಲ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಅಗಿವೆ. ಅದರಲ್ಲೂ 'ಪ್ರೇಮ ಚಂದ್ರಮ.....' ಹಾಡು ಲವ್ ಫೆಲ್ಯೂರ್ ಹುಡುಗರ ಆಂಥೆಮ್ ಆಗಿತ್ತು.

  ದ್ವಿಪಾತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ್ದರು. ಪ್ರೇಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಶಶಿಕುಮಾರ್, ಅಭಿಜಿತ್ ಸಹೋದರರ ಪಾತ್ರದಲ್ಲಿದ್ದರು. ಅವಿನಾಶ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಪವಿತ್ರ ಲೋಕೇಶ್, ಎಂ ಎನ್ ಲಕ್ಷ್ಮಿದೇವಿ, ಶೋಭರಾಜ್, ಮೈಕಲ್ ಮಧು, ಶಿವರಾಂ ಸೇರಿದಂತೆ ಹಲವರು ನಟಿಸಿದ್ದರು.

  English summary
  Late Actor Dr Vishnuvardhan Starrer Yajamana Movie Audio Earns Rs 8 crore 20 Years Back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X