»   »  'ಅಚ್ಚ'ಕನ್ನಡ ಹಾಡುಗಳ ಕಾಲೆಳೆದ 'ನಮ್ದುಕೆ' ವಾಹಿನಿ

'ಅಚ್ಚ'ಕನ್ನಡ ಹಾಡುಗಳ ಕಾಲೆಳೆದ 'ನಮ್ದುಕೆ' ವಾಹಿನಿ

Posted By:
Subscribe to Filmibeat Kannada

ಇತ್ತೀಚಿನ ಕನ್ನಡ ಹಾಡುಗಳನ್ನು ಕೇಳ್ತಿದ್ದೀರಾ..? ಹಾಡಲ್ಲಿ ಕನ್ನಡ ಸಾಹಿತ್ಯದ ಜೊತೆಗೆ ಬೇರೆ ಭಾಷೆಯ ಸಾಹಿತ್ಯವೂ ಮಿಕ್ಸ್ ಆಗಿರ್ಬೇಕಲ್ವಾ. ಇದು ನಿಮ್ಮ ಗಮನಕ್ಕೆ ಬಂದಿದ್ಯಾ..?

ಸಾಹಿತ್ಯಕ್ಕೆ ತಕ್ಕ ಸಂಗೀತ ಇದೆ ಅಂತ ನೀವು ಹಾಡು ಪ್ಲೇ ಆಗ್ತಿದ್ದಂತೆ ತಲೆದೂಗ್ತಿರ್ತೀರಾ. ಆದ್ರೆ, 'ನಮ್ದುಕೆ' ಅನ್ನುವ ಯೂಟ್ಯೂಬ್ ವಾಹಿನಿ ಇಂತಹ 'ಅಚ್ಚ'ಕನ್ನಡ ಹಾಡುಗಳನ್ನ ಗುರುತಿಸಿ, ಹಾಡಲ್ಲಿರುವ ಬೇರೆ ಭಾಷೆಯ ಸಾಹಿತ್ಯಕ್ಕೆ 'ಅಚ್ಚ ಕನ್ನಡ' ಅರ್ಥ ಕೊಡುವ ಪ್ರಯತ್ನ ಮಾಡಿದೆ. [ಈ ವಿಡಿಯೋ ನೋಡಿ ನಗಬೇಕೋ, ನಡುಗಬೇಕೋ..ನೀವೇ ನಿರ್ಧರಿಸಿ]

Watch 2nd episode of Kannada Talkies: Acchkannada Songs

ಅವರ ಅಂತಹ 'ಅಚ್ಚ ಕನ್ನಡ' ಅರ್ಥಗಳನ್ನ ಕೇಳಿಬಿಟ್ಟರೆ ನೀವು ಬಿದ್ದು ಬಿದ್ದು ನಗುವುದು ಖಂಡಿತ. 'ರವಿ ಕಾಣದ್ದನ್ನು ಕವಿ ಕಂಡ...ಕವಿ ಕಾಣದ್ದನ್ನು ಕನ್ನಡ ಚಿತ್ರ ಸಾಹಿತಿ ಕಂಡ' ಅಂತ ಹೇಳ್ತಾ ಕನ್ನಡ ಚಿತ್ರ ಸಾಹಿತಿಗಳ ಕಾಲೆಳೆಯುವ ಈ ವಿಡಿಯೋ ನೋಡಿ ಎಂಜಾಯ್ ಮಾಡಿ.....

ಸದ್ಯಕ್ಕೆ ಕನ್ನಡದ ಮೂರು ಹಾಡುಗಳಲ್ಲಿನ ಹಿಂದಿ ಪದಗಳಿಗೆ ಕನ್ನಡ ಅರ್ಥ ಕೊಟ್ಟು ಈ ವಿಡಿಯೋ ರೆಡಿ ಮಾಡಲಾಗಿದೆ. ವಾಸುಕಿ ರಾಘವನ್ ಮತ್ತು ಗಣೇಶ್ ಭಟ್ ಬರೆದಿರುವ ಸ್ಕ್ರಿಪ್ಟ್ ನ ಶ್ರಾವಣ್ ಮತ್ತು ಸಂದೀಪ್ ವಿಡಿಯೋ ಮೂಲಕ ನಿಮ್ಮ ಮುಂದೆ ತಂದಿದ್ದಾರೆ.

English summary
YouTube channel 'Namdu K' has made fun of Kannada Songs in which unnecessarily hindi lyrics has been added. Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada