''ತಾರಕ್' ದರ್ಶನ್ ಮೇಲೆ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆಗಿದೆ''
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ 'ಬಾ ಬಾರೋ..' ಹಾಡಿನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾಯ್ತು... ನೀವು ಅದನ್ನ ಕೇಳಿದ್ದೂ ಆಯ್ತು.
ಈಗ ಅದೇ ಸಿನಿಮಾದ 'ಸಂಜೆ ಹೊತ್ತು...' ಹಾಡಿನ ಟೀಸರ್ ಬಿಡುಗಡೆ ಆಗಿದೆ. ಸ್ವಲ್ಪ ರೊಮ್ಯಾಂಟಿಕ್, ಸ್ವಲ್ಪ ಡ್ಯಾನ್ಸ್ ಬೀಟ್ಸ್ ಮಿಕ್ಸ್ ಆಗಿರುವ 'ಸಂಜೆ ಹೊತ್ತು...' ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ಸದ್ದು ಮಾಡುತ್ತಿದೆ.

ವಿದೇಶದಲ್ಲಿ ಚಿತ್ರೀಕರಣಗೊಂಡಿರುವ 'ತಾರಕ್' ಚಿತ್ರದಲ್ಲಿ ದರ್ಶನ್ ಮೇಲೆ ನಾಯಕಿ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆದ ಪರಿಣಾಮವೇ ಈ ಡ್ಯುಯೆಟ್ ಸಾಂಗ್.
ಇಂದು ನಾಗರಾಜ್ ಹಾಗೂ ವಿಜಯ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿರುವ 'ಸಂಜೆ ಹೊತ್ತು...' ಹಾಡಿಗೆ ಸಂಗೀತ ಸಂಯೋಜಿಸಿರುವವರು ಅರ್ಜುನ್ ಜನ್ಯ.
'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಿರುವ 'ತಾರಕ್' ಚಿತ್ರದ ಆಡಿಯೋ ಆಗಸ್ಟ್ 17 ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ 'ತಾರಕ್' ಚಿತ್ರದ 'ಸಂಜೆ ಹೊತ್ತು...' ಹಾಡನ್ನ ನೀವೂ ಒಮ್ಮೆ ಕೇಳ್ಬಿಡಿ...
More from Filmibeat
English summary
Challenging Star Darshan starrer Kannada Movie 'Tarak' song teaser is out. Watch 'Sanje Hothu..' song teaser here...
darshan milana prakash arjun janya kannada cinema sandalwood music song ದರ್ಶನ್ ಮಿಲನ ಪ್ರಕಾಶ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ ಸಂಗೀತ ಹಾಡು


Click it and Unblock the Notifications











