»   » ಅಯ್ಯೋ ಶಿವನೇ ಕನ್ನಡ ಭಾಷೆಯ ಹಾಡಿಗೆ ಇದೆಂತಹ ಅವಮಾನ

ಅಯ್ಯೋ ಶಿವನೇ ಕನ್ನಡ ಭಾಷೆಯ ಹಾಡಿಗೆ ಇದೆಂತಹ ಅವಮಾನ

By: ಸೋನು ಗೌಡ
Subscribe to Filmibeat Kannada

ಇತ್ತೀಚೆಗೆ ಕನ್ನಡ ಭಾಷೆಯ ಹಾಡುಗಳನ್ನು ಬೇರೆ ಭಾಷೆಯ ಹಾಡುಗಾರರು ಹಾಡೋದು ಒಂಥರಾ ಟ್ರೆಂಡ್ ಆದಂತಿದೆ. ಅದಕ್ಕೆ ಉತ್ತಮ ನಿದರ್ಶನ ಅಂದ್ರೆ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದ ಹಾಡುಗಳಿಗೆ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಕಾಜಲ್ ಅಗರ್ ವಾಲ್ ಅವರು ಧ್ವನಿ ನೀಡಿದ್ದು.

ಅಂದಹಾಗೆ ಅವರುಗಳು ಹಾಡೋದೇನು ಸರಿ, ಆದರೆ ಅವರು ಕನ್ನಡ ಪದಗಳನ್ನು ಸರಿಯಾಗಿ ಎಷ್ಟರಮಟ್ಟಿಗೆ ಉಚ್ಚಾರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋದು ನಮ್ಮ ಕನ್ನಡಿಗರ ಪ್ರಶ್ನೆ.['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]


ಇನ್ನು ಈ ಅನುಮಾನ ಬರಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಲಕ್ಕಿ ಗರ್ಲ್ ರಾಧಿಕಾ ಪಂಡಿತ್ ಅವರು ಕಾಣಿಸಿಕೊಂಡಿರುವ 'Zooಮ್' ಚಿತ್ರದ 'ನೈನಾ ನೈನಾ' ಹಾಡು.['ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!]


ಅಷ್ಟಕ್ಕೂ ಈ ಹಾಡಿನಲ್ಲಿರುವ ಘೋರ ತಪ್ಪುಗಳನ್ನು ನೋಡಿದರೆ ಕನ್ನಡಿಗರಿಗೆಲ್ಲರಿಗೂ ಭಯಂಕರ ಮೈ ಉರಿಯೋದು ಗ್ಯಾರೆಂಟಿ. ಏನಪ್ಪಾ ಅಂತಹ ತಪ್ಪುಗಳು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ಹಾಡಿರೋದು ಯಾರು?

ಹೌದು 'Zooಮ್' ಚಿತ್ರದ 'ನೈನಾ ನೈನಾ' ಹಾಡಿನಲ್ಲಿ ಅದೆಷ್ಟು ಕನ್ನಡ ಉಚ್ಚಾರಣೆ ತಪ್ಪಿದೆ ಗೊತ್ತಾ?. ಅಷ್ಟಕ್ಕೂ ಈ ಹಾಡನ್ನು ಹಾಡಿರೋದು ತಮಿಳು ಗಾಯಕ ನಿವಾಸ್ ಹಾಗೂ ತೆಲುಗು ಗಾಯಕಿ ಸಮೀರಾ ಅವರು.[ಗೋಲ್ಡನ್ ಸ್ಟಾರ್ ಗಣೇಶ್ ಇಟಲಿಯಲ್ಲಿ ಏನ್ ಮಾಡ್ತಿದ್ದಾರೆ?]


ಹಾಡಿನ ಪಲ್ಲವಿಯಲ್ಲಿ ಉಚ್ಚಾರಣೆ ದೋಷ

ಚಿತ್ರದ ಹಾಡಿನ ಪಲ್ಲವಿಯಲ್ಲಿ: 'ಸಂಪೂರ್ಣ' ಎಂದಾಗಬೇಕಿತ್ತು ಆದರೆ ಗಾಯಕರ ಉಚ್ಚಾರಣೆ ದೋಷದಿಂದ ಅದು 'ಸಂಪೂರ್ನ' ಆಗಿದೆ. ತದನಂತರ 'ಹೀಗೇನೆ' = 'ಈಗೇನೆ'; 'ಎಲ್ಲಾಕಡೆ' = 'ಹೆಲ್ಲಕಡೆ' ಹೀಗೆ ಅನೇಕ ದೋಷಗಳು.


ಹಾಡಿನ ಚರಣದಲ್ಲೂ ದೋಷ

ಇನ್ನು ಹಾಡಿನ ಚರಣಕ್ಕೆ ಬಂದರೆ 'ಗತಿ' ಹೋಗಿ 'ಗತಿಹಿ' ಆಗಿದೆ. 'ಅತಿ' ಬದಲು 'ಹತಿ' ಆಗಿದೆ; 'ಗಲಿಬಿಲಿ' ಬದಲು 'ಗಳಿಬಿಲಿ'; 'ಕೊಲ್ಲದಿರೆ' = 'ಕೊಳ್ಳದಿರೆ'; 'ನೋಡಿ ಹೀಗೆ' = 'ನೋಡಿ ಈಗೆ', ಅಂತಾಗಿದೆ.


ಕನ್ನಡಿಗರಲ್ಲಿ ಆತಂಕ

ಇದನ್ನು ನೋಡುತ್ತಿದ್ದರೆ, ಇನ್ನು ಮುಂದೆ ನಮ್ಮ ಕನ್ನಡ ಭಾಷೆಯ ಗತಿ ಏನಾಗಬಹುದು? ಅನ್ನೋ ಆತಂಕ ಕನ್ನಡಿಗರಲ್ಲಿ ಮೂಡೋದು ಸಹಜ ಬಿಡಿ.


ಹಾಡಿರೋದು ಸಂತಸವೇ

ಕನ್ನಡ ಭಾಷೆ ಬಾರದೇ ಇರುವವರು ಇಷ್ಟು ಚೆನ್ನಾಗಿ ಹಾಡಿರೋದು ಹಾಗೂ ಬೇರೆ ಭಾಷೆಯ ಸಂಗೀತ ನಿರ್ದೇಶಕರು ಸೂಪರ್ ಆಗಿ ಮ್ಯೂಸಿಕ್ ಕಂಪೋಸ್ ಮಾಡಿರೋದು ಸಂತೋಷದ ವಿಚಾರನೇ. ಆದರೆ ಕನ್ನಡ ಭಾಷೆಯ ಹಾಡುಗಳನ್ನು ಹಾಡುವಾಗ ಉಚ್ಚಾರಣೆಯಲ್ಲಿ ಇಷ್ಟೊಂದು ತಪ್ಪುಗಳಾದರೆ ಕನ್ನಡಿಗರಿಗೆ ಮಾಡಿದ ಅವಮಾನವಾದಂತಲ್ಲವೇ?.


ಕನ್ನಡಿಗರ ಮನವಿ

ಆದ್ದರಿಂದ ಕನ್ನಡಿಗರು ಹೇಳುವ ಪ್ರಕಾರ ಈ ರೀತಿ ತಪ್ಪು-ತಪ್ಪು ಉಚ್ಚಾರಣೆ ಮಾಡಿ ಹಾಡುವವರಲ್ಲಿ ಕನ್ನಡ ಭಾಷೆಯ ಹಾಡನ್ನು ದಯವಿಟ್ಟು ಹಾಡಿಸಬೇಡಿ ಅಂತ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಗಣೇಶ್ ಅವರೇ ನೀವೇನಂತೀರಾ?

ನಮ್ಮ ಕನ್ನಡ ಭಾಷೆಯ ಹಾಡುಗಳಲ್ಲಿ ಉಚ್ಚಾರ ದೋಷ ಉಂಟಾಗಿರೋದು ಇದು ಮೊದಲೇನಲ್ಲಾ. ಇದಕ್ಕಿಂತ ಮುಂಚೆ ಸುಮಾರು ಹಾಡುಗಳಲ್ಲಿ ಆಗಿ ಹೋಗಿದೆ. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಕನ್ನಡ ಚಿತ್ರರಂಗದ ಕುವರ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಇದೀಗ ನಿಮ್ಮ ಚಿತ್ರದಲ್ಲಿ ಈ ರೀತಿ ನಡೆದಿದೆ. ಇದಕ್ಕೆ ನೀವೇನಂತೀರಾ?.


ಫೇಸ್ ಬುಕ್ಕಿನಲ್ಲಿ ಚರ್ಚೆ

ಚಿತ್ರದ ಹಾಡಿನಲ್ಲಿ ಕನ್ನಡ ಭಾಷೆಯನ್ನು ಕೊಂದಿದ್ದಾರೆ ಅನ್ನೋದನ್ನು ಕನ್ನಡ ಅಭಿಮಾನಿಗಳು ಫೇಸ್ ಬುಕ್ಕಿನಲ್ಲಿ ಯಾವ ರೀತಿ ವ್ಯಕ್ತಪಡಿಸಿದ್ದಾರೆ ನೋಡಿ..


ಅಭಿಮಾನಿಗಳ ಬೇಸರ

ಕನ್ನಡ ಭಾಷೆಯ 'ಮಿಸ್ ಯೂಸ್' ಆಗುತ್ತಿರುವುದಕ್ಕೆ ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


ಹಾಡಿನ ವಿಡಿಯೋ ನೋಡಿ

ಹಾ..! ಇಷ್ಟೊಂದು ತಪ್ಪಾದ ಉಚ್ಚಾರಣೆ ಇರೋ ಹಾಡನ್ನು ನೀವು ನೋಡಬೇಕೆ? ಹಾಗಿದ್ದರೆ ಪ್ರಶಾಂತ್ ರಾಜ್ ನಿರ್ದೇಶನದ 'Zooಮ್' ಚಿತ್ರದ 'ನೈನಾ ನೈನಾ' ಹಾಡಿನ ವಿಡಿಯೋ ಇಲ್ಲಿದೆ ನೋಡಿ...


English summary
Watch Kannada Movie 'Zoom' 'Naina Naina' song with lyrics. Kannada Actor Ganesh, Kannada Actress Radhika Pandit in the lead role. The movie is directed by Prashanth Raj. Music Directed By SS Thaman.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada