»   » 'ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್

'ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೂಡ ಬಿರುಸಿನಿಂದ ಸಾಗುತ್ತಿದೆ. ಸದ್ಯದಲ್ಲೇ 'ರನ್ನ' ಚಿತ್ರದ ಆಡಿಯೋ ರಿಲೀಸ್ ಆಗುತ್ತಿದೆ. 'ರನ್ನ'ನ ಚಿನ್ನದಂಥ ಹಾಡುಗಳು ಹೇಗಿರಬಹುದು ಅನ್ನುವ ಕುತೂಹಲ ಎಲ್ಲಾ ಕಡೆ ಗರಿಗೆದರಿದೆ.

ಅಂತಹ ಕುತೂಹಲವನ್ನ ಇಮ್ಮಡಿಗೊಳಿಸುವ 'ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್ ಆಗಿದೆ. ಒಮ್ಮೆ ನೀವೇ ನಿಮ್ಮ ಕಿವಿಯಾರೆ ಕೇಳಿ......


Watch Kiccha Sudeep


ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ 'ರನ್ನ' ಚಿತ್ರದಲ್ಲಿನ ಸುದೀಪ್ ಇಂಟ್ರೊಡಕ್ಷನ್ ಸಾಂಗ್ ಇದು. ''ಜಂಗಲ್ ಮೇನ್ ಬಬ್ಬರ್ ಶೇರ್....'' ಅಂತ ಶುರುವಾಗುವ ಹಾಡಲ್ಲಿ ಸುದೀಪ್ ಸೂಪರ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

'ರನ್ನ' ಹೇಳಿ ಕೇಳಿ ತೆಲುಗಿನ ಸೂಪರ್ ಹಿಟ್ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಅಲ್ಲಿ ಪವನ್ ಕಲ್ಯಾಣ್, ''ಆರಡುಗುಲ ಬುಲ್ಲೆಟ್ಟು...'' ಆಗಿ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದರು. ಟಾಲಿವುಡ್ ನ ಅದ್ಧೂರಿತನವನ್ನ ಮೀರಿಸುವ ಹಾಗೆ ಕನ್ನಡದಲ್ಲಿ ಸುದೀಪ್ ''ಬಬ್ಬರ್ ಶೇರ್'' ಆಗಿ ಅಬ್ಬರಿಸಿದ್ದಾರೆ. ['ರನ್ನ' ಚಿತ್ರದ ರಂಗೀನ್ ಬುಲ್ ಬುಲ್ ಚಿತ್ರಗಳು]


Watch Kiccha Sudeep

ಹಾಡಿನ ವಿಶೇಷ ಅಂದ್ರೆ, ಮೊದಲ ಬಾರಿಗೆ ಪಂಚಭೂತಗಳಲ್ಲಿ ಚಿತ್ರೀಕರಣಗೊಂಡಿರುವುದು. ಭೂಮಿ, ಆಕಾಶ, ನೀರು, ಗಾಳಿ ಮತ್ತು ಅಗ್ನಿಯನ್ನ ಉಪಯೋಗಿಸಿ 'ಬಬ್ಬರ್ ಶೇರ್' ಹಾಡಿನ ಕೊರಿಯೋಗ್ರಫಿ ಮಾಡಲಾಗಿದೆ. ['ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್]


ನಂದಕಿಶೋರ್ ನಿರ್ದೇಶನದ 'ರನ್ನ' ಚಿತ್ರ ಎಷ್ಟು ರಿಚ್ಚಾಗಿ ರೆಡಿಯಾಗಿದೆ ಅನ್ನುವುದಕ್ಕೆ ಇದು ಸಣ್ಣ ಸಾಕ್ಷಿ ಅಷ್ಟೆ. ಇನ್ನು ಕೆಲವೇ ದಿನಗಳಲ್ಲಿ 'ರನ್ನ' ಆಡಿಯೋ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಲ್ಲಿವರೆಗೂ ಈಗ ಬಂದಿರೋ 'ಬಬ್ಬರ್ ಶೇರ್'ಗೆ ದಾರಿ ಬಿಟ್ಟು ಸೈಡಲ್ಲಿರಿ...(ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' movie audio is all set to hit the market soon. V.Harikrishna musical 'Babbar Sher' song teaser is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada