For Quick Alerts
  ALLOW NOTIFICATIONS  
  For Daily Alerts

  ''ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್...'' ಮಸ್ತ್ ಹಾಡು ಕೇಳಿ..

  By Harshitha
  |

  ಯುಗಾದಿ ಹಬ್ಬದ ಪ್ರಯುಕ್ತ 'ಕೃಷ್ಣ' ಅಜೇಯ್ ರಾವ್ ನಟಿಸಿ, ನಿರ್ಮಿಸಿರುವ 'ಕೃಷ್ಣಲೀಲಾ' ಸಿನಿಮಾ ಮಾರ್ಚ್ 20 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ 'ಕೃಷ್ಣಲೀಲಾ' ಚಿತ್ರತಂಡ ಎಲ್ಲೆಡೆ ಭರ್ಜರಿಯಾಗಿ ಪ್ರಮೋಷನ್ ಮಾಡುತ್ತಿದೆ.

  ಶ್ರೀಧರ್.ವಿ.ಸಂಭ್ರಮ್ ಸಂಯೋಜಿಸಿರುವ 'ಕೃಷ್ಣಲೀಲಾ' ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ ಪೆಸಲ್ ಮ್ಯಾನ್ ಯುವಕರ ಫೇವರಿಟ್ ಆಗಿಬಿಟ್ಟಿದೆ. [ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ']

  ಹೀಗಿರುವಾಗಲೇ, ನಿರ್ದೇಶಕ ಶಶಾಂಕ್ 'ಕೃಷ್ಣಲೀಲಾ' ಚಿತ್ರದ ಮತ್ತೊಂದು ಹಾಡನ್ನ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ. ''ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್...ಕಮ್...ಕಮ್...'' ಅನ್ನೋ ಹಾಡು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

  ಶಿವ ತೇಜಸ್ವಿ ಮತ್ತು ಸಾಯಿ ಸರ್ವೇಶ್ ಬರೆದಿರುವ ಕ್ಯಾಚಿ ಲಿರಿಕ್ಸ್ ಗೆ ಟಿಪ್ಪು ಮತ್ತು ಅಪೂರ್ವ ಶ್ರೀಧರ್ ದನಿಯಾಗಿರುವ ಹಾಡು 'ಕೃಷ್ಣ ಕಾಲಿಂಗ್...ಲೀಲಾ ಡಾರ್ಲಿಂಗ್...ಕಮ್...ಕಮ್...''.

  ಡಿಸ್ಕೋ ನಂಬರ್ ಅಲ್ಲದಿದ್ದರೂ, 'ಕೃಷ್ಣಲೀಲಾ' ಚಿತ್ರದ ಡ್ಯುಯೆಟ್ ಡಾನ್ಸ್ ನಂಬರ್ ಈ ''ಕೃಷ್ಣ ಕಾಲಿಂಗ್....''. ಸಂಗೀತ ನಿರ್ದೇಶಕ ಶ್ರೀಧರ್.ವಿ.ಸಂಭ್ರಮ್ ಹಾಕಿರುವ ತಾಳಕ್ಕೆ ನಾಯಕ ಅಜೇಯ್ ರಾವ್ ಮತ್ತು ಮಯೂರಿ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]

  2010 ರಲ್ಲಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿ, ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದ ಕಥೆಯೇ 'ಕೃಷ್ಣಲೀಲಾ' ಚಿತ್ರದ ಕಥಾಹಂದರ. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಅಜೇಯ್ ನಟಿಸಿದ್ದರೆ, ಮಿಡ್ಲ್ ಕ್ಲಾಸ್ ಹುಡುಗಿಯಾಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಇದೇ ಶುಕ್ರವಾರ ರಾಜ್ಯಾದ್ಯಂತ 'ಕೃಷ್ಣಲೀಲಾ' ನಿಮ್ಮ ಮುಂದೆ ಬರಲಿದೆ. [ಕೃಷ್ಣಲೀಲಾ ಚಿತ್ರದ ಹಾಡುಗಳನ್ನ ನೋಡಿ]

  ನಿನ್ನ ಸೌಂಡು ಎದೆಯೊಳಗೆ....

  ನಿನ್ದೇ ಫೀಲು ಮನದೊಳಗೆ....

  ನೂರೆಂಟು ಮ್ಯಾಟನಿ ಶೋಗಳು ಕಣ್ಣಲಿ...

  ನೈಟೆಲ್ಲಾ ನಿನ್ನದೇ ಕನಸಿನ ಹಾವಳಿ...

  ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್.....

  English summary
  Kannada Actor Ajay Rao starrer Krishna Leela's title track Krishna Calling song is out. Shridhar.V.Sambhram has composed the music for Krishna Leela, which is Directed by Shashank. Watch the song here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X