»   » ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್

ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್

Posted By:
Subscribe to Filmibeat Kannada

ನೀನಾಸಂ ಸತೀಶ್ ಈಗ 'ರಾಕೆಟ್' ವೇಗದಲ್ಲಿ ಬರ್ತಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ 'ರಾಕೆಟ್'ಗೆ ಈಗ ಹೊಸ ಪವರ್ ಬಂದಿದೆ. ಹೌದು ಕಣ್ರೀ.. ನಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಕೆಟ್' ಚಿತ್ರದ ರೊಮ್ಯಾಂಟಿಕ್ ಹಾಡೊಂದಕ್ಕೆ ದನಿಯಾಗಿದ್ದಾರೆ.

ನಮ್ 'ರಾಕೆಟ್' ಹೀರೋಯಿನ್ ಐಶಾನಿ ಶೆಟ್ಟಿ ಫೀಮೇಲ್ ವಾಯ್ಸ್ ನೀಡಿ ಪವರ್ ಸ್ಟಾರ್ ಗೆ ಸಾಥ್ ಕೊಟ್ಟು ಕಮಾಲ್ ಮಾಡಿದ್ದಾರೆ. [ಅಂದು ಅಪ್ಪು ಚಿತ್ರದಲ್ಲಿ ಉಪ್ಪಿ, ಇಂದು ಉಪ್ಪಿ ಚಿತ್ರದಲ್ಲಿ ಅಪ್ಪು]


"ತಣ್ಣಗಿದ್ವಿ ನಾವು ನಮ್ಮ ಪಾಡಿಗೆ ಮಲಿಕೊಂಡು, ಎದುರಲಿ ಬಂದ್ರಿ ನೀವು ನಗು ಚೆಲ್ಕೊಂಡು" ಅಂತ ಅಪ್ಪು, ಐಶಾನಿ ಜೊತೆ ಹಾಡಿದ ಹಾಡು ಈಗ ಎಲ್ಲರ ಬಾಯಲ್ಲೂ ಹರಿದಾಡ್ತಾ ಇದೆ. ಈ ಹಾಡಿನ ಮೇಕಿಂಗ್ ವೀಡಿಯೋ ಇಲ್ಲಿದೆ ನೋಡಿ...


Watch making video ; Puneeth Rajkumar sings for Sathish Ninasam's

ನೋಡಿದ್ರಲ್ಲಾ, ಪುನೀತ್ ಹಾಡಿರುವ ಹಾಡು ಹೇಗಿದೆ ಅಂತ. ಏನೇ ಆಗ್ಲಿ ಪುನೀತ್ ಪರದೆ ಮೇಲೆ ಮಾತ್ರವಲ್ಲದೆ ಪರದೆ ಹಿಂದೆ ಕೂಡ ಪವರ್ ಫುಲ್ ಅನ್ನೋದಕ್ಕೆ ಅವರ ಸೂಪರ್ ಹಿಟ್ ಹಾಡುಗಳೇ ಸಾಕ್ಷಿ. [ಪುನೀತ್ ರಾಜ್ ಕುಮಾರ್ ಲವ್ವು ನೀರು ಪಾಲಾದಾಗ...]


'ಲೂಸಿಯಾ' ಚಿತ್ರದ ಭರ್ಜರಿ ಯಶಸ್ಸಿನ ನಂತರ ನೀನಾಸಂ ಸತೀಶ್ ಚೊಚ್ಚಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ರಾಕೆಟ್'. ನವ ಪ್ರತಿಭೆ ಶಿವಸಾಹಸಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನವಿದೆ.

English summary
Puneeth Rajkumar has sung a song for Sathish Neenasam starrer Kannada Movie 'Rocket'. Music Director Poornachandra Tejasvi has composed music for the film. Watch the making video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada