»   » ಕ್ರಿಕೆಟ್ ಪ್ರೇಮಿಗಳಿಗೆ ರಘು ದೀಕ್ಷಿತ್ 'ಕಿಕ್' ಸಾಂಗ್

ಕ್ರಿಕೆಟ್ ಪ್ರೇಮಿಗಳಿಗೆ ರಘು ದೀಕ್ಷಿತ್ 'ಕಿಕ್' ಸಾಂಗ್

Posted By:
Subscribe to Filmibeat Kannada

ಫೆಬ್ರವರಿ 14, ಪ್ರೇಮಿಗಳ ಪಾಲಿಗಿದು ಸ್ಪೆಷಲ್ ಡೇ. ಆದ್ರೆ, ಈ ವರ್ಷ ಇದೇ ದಿನಕ್ಕಾಗಿ ಸಕಲ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಅದಕ್ಕೆ ಕಾರಣ 'ವರ್ಲ್ಡ್ ಕಪ್'.

ಈಗಾಗಲೇ ಎಲ್ಲಾ ಕಡೆ ವರ್ಲ್ಡ್ ಕಪ್ ಫೀವರ್ ಶುರುವಾಗಿದೆ. ಟಾಸ್ ಆರಂಭವಾಗ್ತಿದ್ದಂತೆ ಎಲ್ಲಾ ಬಿಟ್ಟು ಟಿವಿ ಮುಂದೆ ಸೆಟ್ಲ್ ಆಗುವ ಎಲ್ಲಾ ಕ್ರಿಕೆಟ್ ಭಕ್ತರಿಗೆ ಒಂದು ಸ್ಪೆಷಲ್ ಸಾಂಗ್ ರೆಡಿಯಾಗಿದೆ.

ಭಾರತ ವರ್ಲ್ಡ್ ಕಪ್ ಗೆಲ್ಲಬೇಕು ಅಂತ ಆಶಿಸುವ ಎಲ್ಲಾ ಭಾರತೀಯರನ್ನ ಪ್ರತಿನಿಧಿಸಿ ಪ್ರಖ್ಯಾತ ಗಾಯಕರನ್ನೆಲ್ಲಾ ಒಟ್ಟುಗೂಡಿಸಿ, ಸೋನಿ ಮ್ಯೂಸಿಕ್ ಸಂಸ್ಥೆ 'ಮೈಕ್ರೊ ಮ್ಯಾಕ್ಸ್ ಯುನೈಟ್ ಕ್ರಿಕೆಟ್ ಆನ್ಥೆಮ್' ಹೊರತಂದಿದೆ.

raghu dixit

ಖ್ಯಾತ ಗಾಯಕ ಬೆನ್ನಿ ದಾಯಳ್, ಗಾಯಕಿ ಶಾಲ್ಮಲಿ ಖೋಲ್ಗಡೆ, ಮತ್ತು ಕನ್ನಡಿಗ ರಘು ದೀಕ್ಷಿತ್ ಈ ಕ್ರಿಕೆಟ್ ಆನ್ಥೆಮ್ ನಲ್ಲಿ ದನಿಯಾಗಿದ್ದಾರೆ. [ಟಾಲಿವುಡ್ ನಲ್ಲಿ ಅಕೌಂಟ್ ಓಪನ್ ಮಾಡಿದ ರಘು ದೀಕ್ಷಿತ್]

ಭಾರತದ ಎಲ್ಲಾ ರಾಜ್ಯಗಳು ಒಟ್ಟಾಗಿ 'ಟೀಮ್ ಇಂಡಿಯಾ'ಗೆ ಸಪೋರ್ಟ್ ಮಾಡಬೇಕು ಅನ್ನುವ ಕನ್ಸೆಪ್ಟ್ ನಲ್ಲಿ ತಯಾರಾಗಿರುವ ಈ ಗೀತೆಯಲ್ಲಿ ಕರ್ನಾಟಕದ ಪರವಾಗಿ ಕನ್ನಡದಲ್ಲಿ ರಘು ದೀಕ್ಷಿತ್ ಗಾನಸುಧೆ ಹರಿಸಿದ್ದಾರೆ. ಅದರ ಮೇಕಿಂಗ್ ವಿಡಿಯೋ ಇಲ್ಲಿದೆ.

ಇಂತಹ ಸುವರ್ಣಾವಕಾಶ ಸಿಕ್ಕಿದ್ದಕ್ಕೆ ರಘು ದೀಕ್ಷಿತ್ ಖುಷಿಯಾಗಿದ್ದಾರೆ. ಅಷ್ಟೇ ಜೋಷ್ ನಲ್ಲಿ ಹಾಡು ಹಾಡಿದ್ದಾರೆ. ಸದ್ಯಕ್ಕೆ ಮೂವರು ಗಾಯಕರ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಆಫೀಶಿಯಲ್ ಸಾಂಗ್ ಸದ್ಯದಲ್ಲೇ ನಿಮಗೆ ನೋಡುವುದಕ್ಕೆ ಸಿಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Rockstar Raghu Dixit representing Karnataka, unite his soulful voice with the artists from across the country to cheer Team India for World Cup-2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada