»   » 'ಬಹದ್ದೂರ್' ಗಂಡು ಧ್ರುವ 'ಭರ್ಜರಿ' ಸೌಂಡು

'ಬಹದ್ದೂರ್' ಗಂಡು ಧ್ರುವ 'ಭರ್ಜರಿ' ಸೌಂಡು

Posted By:
Subscribe to Filmibeat Kannada

'ಅದ್ದೂರಿ'ಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಧ್ರುವ ಸರ್ಜಾ 'ಬಹದ್ದೂರ್' ಗಂಡಾಗಿ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದಾಯ್ತು. ಈಗ 'ಭರ್ಜರಿ'ಯಾಗಿ ಸೌಂಡ್ ಮಾಡೋಕೆ ತಮ್ಮ ಹೊಸ ಚಿತ್ರದಿಂದ ಶುರುಮಾಡಿದ್ದಾರೆ.

ಧ್ರುವ ಸರ್ಜಾಗೆ 'ಬಹದ್ದೂರ್' ಅಂತ ಹಿಟ್ ಸಿನಿಮಾ ಕೊಟ್ಟ ನವ ಪ್ರತಿಭೆ ಚೇತನ್ ಕುಮಾರ್ ಈಗ ಅದೇ ಧ್ರುವ ಸರ್ಜಾಗೆ 'ಭರ್ಜರಿ' ಸಿನಿಮಾ ಮಾಡ್ತಿದ್ದಾರೆ. ಅದ್ದೂರಿಯಾಗಿ 'ಭರ್ಜರಿ' ಸಿನಿಮಾ ಸೆಟ್ಟೇರಿದೆ.

'ಭರ್ಜರಿ' ಎಷ್ಟು ಧಮಾಕೇಧಾರ್ ಆಗಿ ಇರಲಿದೆ ಅನ್ನೋದಕ್ಕೆ ಒಂದು ಪ್ರೊಮೋಷನಲ್ ಸಾಂಗ್ ಬಿಡುಗಡೆ ಮಾಡಿದೆ ಚಿತ್ರತಂಡ. ಅದನ್ನ ಮೊದಲು ನೀವು ನೋಡಿ.....

Watch Promotional song of Kannada movie 'Bharjari'


'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾಗೆ ಹೇಳಿ ಮಾಡಿಸಿದಂತಿದೆ ಈ 'ಭರ್ಜರಿ' ಹಾಡು. ಲೇಟಾಗಿ ಬಂದ್ರೂ, ಲೇಟೆಸ್ಟ್ ಆಗಿ ಎಂಟ್ರಿ ಕೊಡುವ ಧ್ರುವ ಸರ್ಜಾಗೆ ''ಚಿರತೆ ಬಂದ್ರೆ ವೇಗ ಇರುತ್ತೆ...ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ...ಸಿಂಹ ಬಂದ್ರೆ ಘರ್ಜನೆ ಇರುತ್ತೆ...ಸೂರ್ಯ ಬಂದ್ರೆ ಈ ಮೂರು ಇರುತ್ತೆ..!'' ಅಂತೆಲ್ಲಾ ಬಿಲ್ಡಪ್ ಕೂಡ ನೀಡಲಾಗಿದೆ.

ಯುವ ಪ್ರತಿಭೆಗಳಾದ ಚಂದನ್ ಮತ್ತು ವಿಜು ಈ ಪ್ರಮೋಷನಲ್ ಸಾಂಗ್ ಗೆ ಮ್ಯೂಸಿಕ್ ನೀಡಿದ್ದಾರೆ. ಆದ್ರೆ, 'ಭರ್ಜರಿ' ಚಿತ್ರಕ್ಕೆ ಹಾಡುಗಳ ಸಂಯೋಜನೆ ಮಾಡುತ್ತಿರುವುದು ವಿ.ಹರಿಕೃಷ್ಣ. [ಧ್ರುವ 'ಭರ್ಜರಿ' ಚಿತ್ರಕ್ಕೆ 'ಬುಲ್ ಬುಲ್' ಹಕ್ಕಿ ನಾಯಕಿ]

Watch Promotional song of Kannada movie 'Bharjari'

ಮೊದಲ ಬಾರಿಗೆ 'ಭರ್ಜರಿ' ಸಿನಿಮಾ ಮೂಲಕ ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. 'ಬಹದ್ದೂರ್' ಸಿನಿಮಾದಲ್ಲಿದ್ದಂತೆ ಇಲ್ಲೂ ಕೂಡ ಧ್ರುವ ಅಪ್ಪಟ ಆಂಜಿನೇಯನ ಭಕ್ತ ಅನ್ನೋದಕ್ಕೆ ಈ ಪ್ರಮೋಷನಲ್ ಹಾಡೇ ಸಾಕ್ಷಿ. ['ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ]

ಆರ್.ಎಸ್.ಪ್ರೊಡಕ್ಷನ್ ಬ್ಯಾನರ್ ನಡಿ, ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ಚಿತ್ರ 'ಭರ್ಜರಿ'. ಹಾಡನಷ್ಟೇ 'ಭರ್ಜರಿ'ಯಾಗಿ ಚಿತ್ರೀಕರಣ ಶುರುವಾಗಿದೆ.

English summary
Kannada Actress Rachita Ram and Dhruva Sarja starrer 'Bharjari' movie promotional song is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada