»   » ಹುಚ್ಚ ವೆಂಕಟ್ ಫ್ಯಾನ್ಸ್ ಹಾಡು; ಮಸ್ತ್ ಮಜಾ ಮಾಡಿ

ಹುಚ್ಚ ವೆಂಕಟ್ ಫ್ಯಾನ್ಸ್ ಹಾಡು; ಮಸ್ತ್ ಮಜಾ ಮಾಡಿ

Posted By: ಹರಾ
Subscribe to Filmibeat Kannada

ಮಾಡಿದ ಸಿನಿಮಾಗಿಂತ ಹೆಚ್ಚಾಗಿ ಮಾಡಿಕೊಂಡ ಎಡವಟ್ಟುಗಳಿಂದಲೇ ಜನಪ್ರಿಯತೆ ಪಡೆದಿರುವ ನಟ ಕಮ್ ಗಾಂಧಿನಗರದ ಆಲ್ ರೌಂಡರ್ ಹುಚ್ಚ ವೆಂಕಟ್. ಯೂಟ್ಯೂಬ್ ನಲ್ಲಿ ಸೆಲೆಬ್ರೇಟಿಗಳಿಗಿಂತಲೂ ಹೆಚ್ಚು ಸೆನ್ಸೇಷನ್ ಹುಟ್ಟುಹಾಕಿದ ಹುಚ್ಚ ವೆಂಕಟ್ ಈಗೆಲ್ಲಿದ್ದಾರೋ ಗೊತ್ತಿಲ್ಲ. ಆದ್ರೆ, ಅವರ ಅಭಿಮಾನಿಗಳು ಮಾತ್ರ ಬೇಜಾನ್ ಸೌಂಡ್ ಮಾಡ್ತಿದ್ದಾರೆ. [ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್]

huccha venkat

ಹುಚ್ಚ ವೆಂಕಟ್ ಹೆಸರಲ್ಲಿ ಅವರ ಅಭಿಮಾನಿಗಳೆಲ್ಲಾ ಸೇರಿ ಒಂದು ಹಾಡನ್ನ ರೆಡಿಮಾಡಿದ್ದಾರೆ. ಹುಚ್ಚ ವೆಂಕಟ್ಟೇ ಹಿಂಗೆ ಅಂದ್ಮೇಲೆ ಅವರ ಅಭಿಮಾನಿಗಳು ಇನ್ಹೆಂಗೆ ಅಂತ ನೀವು ಊಹಿಸಿಕೊಳ್ಳುವ ಮುನ್ನ ಒಮ್ಮೆ ಈ ಹಾಡನ್ನ ನೋಡಿಬಿಡಿ....

Watch the video of Huccha Venkat fans song

'ಹುಚ್ಚ ವೆಂಕಟ್' ಚಿತ್ರದ ಹಾಡುಗಳನ್ನ ಅದೆಷ್ಟು ಬಾರಿ ಇವರೆಲ್ಲಾ ನೋಡಿದ್ದಾರೋ ಗೊತ್ತಿಲ್ಲ. ಆದ್ರೆ, ಅದರ ತಲೆಮೇಲೆ ಹೊಡೆದಂತೆ ಈ ಹಾಡನ್ನ ತಯಾರು ಮಾಡಿದ್ದಾರೆ. ಹುಚ್ಚ ವೆಂಕಟ್ ಹೇರ್ ಸ್ಟೈಲ್ ನಿಂದ ಹಿಡಿದು, ಬ್ಲೂ ಶರ್ಟ್ ಯೂನಿಫಾರ್ಮ್ ವರೆಗೂ ಹುಚ್ಚ ವೆಂಕಟ್ ನ ಆರಾಧಿಸಿದ್ದಾರೆ. [ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!]

ಸಾಲ್ದು ಅಂತ ಹುಚ್ಚ ವೆಂಕಟ್ ವೈನ್ ಶಾಪ್, ಹುಚ್ಚ ವೆಂಕಟ್ ಫ್ರೂಟ್ ಶಾಪ್, ಹುಚ್ಚ ವೆಂಕಟ್ ಪಾನಿ ಪುರಿ, ಹುಚ್ಚ ವೆಂಕಟ್ ಕ್ಲಿನಿಕ್ ನ್ನೆಲ್ಲಾ ಹಾಡಿಗಾಗಿ ಶುರುಮಾಡಿದ್ದಾರೆ. ಇಷ್ಟೆಲ್ಲಾ ಮಾಡಿ, ಕೊನೆಗೆ ''ಬೇಕಿತ್ತಾ ಇವೆಲ್ಲಾ ನಮ್ ಬಾಯಲ್ಲಿ ಕೇಳೋದು..'' ಅಂತ ಪಂಚ್ ಬೇರೆ ಕೊಟ್ಟಿದ್ದಾರೆ. ಇದಕ್ಕೆ ನಗಬೇಕೋ, ಅಳಬೇಕೋ ನೀವೇ ನಿರ್ಧರಿಸಿ.

English summary
Huccha Venkat is in news again because of his Fans. Hardcore Fans of Huccha Venkat has made a special song on the Actor. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada