»   » ಮುಂಬೈ ಬೀದಿಯಲ್ಲಿ ಭಿಕ್ಷುಕರಾದ ಸೋನು ನಿಗಮ್

ಮುಂಬೈ ಬೀದಿಯಲ್ಲಿ ಭಿಕ್ಷುಕರಾದ ಸೋನು ನಿಗಮ್

Posted By:
Subscribe to Filmibeat Kannada

ಮಹಾನಗರಿ ಮುಂಬೈನ ಜುಹು ರಸ್ತೆಯಲ್ಲಿ ಒಂಟಿಯಾಗಿ ಕೈಯಲ್ಲಿ ಒಂದು ಹಾರ್ಮೋನಿಯಂ ಜೊತೆಗೆ ಸ್ಲೇಟು ಹಿಡಿದು ತನ್ನಷ್ಟಕ್ಕೆ ತಾನು ವೃದ್ಧನೊಬ್ಬ ಕಿಂಗ್ ಖಾನ್ ಶಾರುಖ್ ಅವರ 'ಕಲ್ ಹೋ ನ ಹೋ' ಚಿತ್ರದ 'ಹರ್ ಗಡೀ ಬದಲ್ ರಹೀ ಹೇ ರೂಪ್ ಜಿಂದಗಿ' ಅಂತ ಹಾಡುತ್ತಾ ಸಾಗುತ್ತಿದ್ದಾರೆ.

ಇದನ್ನು ನೋಡಿದ ಕೆಲವರು ನಿಂತು ಹಾಡು ಕೇಳಿದರೆ, ಇನ್ನು ಕೆಲವರು ನೋಡಿಯೂ ನೋಡದಂತೆ ಅತ್ತ ಸಾಗಿದ್ದಾರೆ. ಅಷ್ಟಕ್ಕೂ ಸುಂದರವಾಗಿ ಹಾಡುತ್ತಿರುವ ಆ ವೃದ್ಧ ಯಾರಿರಬಹುದು? ನಿನ್ನೆ-ಮೊನ್ನೆ ಜುಹು ರಸ್ತೆಯಲ್ಲಿ ಕಾಣದಿದ್ದವರು ದಿಢೀರ್ ಅಂತ ಇಂದೇನು? ಅಂತ ಪ್ರಶ್ನೆ ಹಾಕಿದವರು ಹಲವರು.

When bollywood singer Sonu Nigam sang on the Mumbai streets

ಅಂತೂ ಕೊನೆಯವರೆಗೂ ಹಾಡುತ್ತಿರುವ ಆ ವೃದ್ಧ ಯಾರು ಅಂತ ಯಾರಿಗೂ ಗೊತ್ತೇ ಆಗಲಿಲ್ಲ. ಅಷ್ಟಕ್ಕೂ ಬೀದಿ-ಬೀದಿ ಅಲೆಯುತ್ತಾ ಹಾರ್ಮೋನಿಯಂ ಹಿಡಿದು ಹಾಡುತ್ತಿದ್ದವರು ಬೇರಾರು ಅಲ್ಲ ರೋಮ್ಯಾಂಟಿಕ್ ಹಾಡುಗಳನ್ನು ಹಾಡುವ ಮೂಲಕ ಫೇಮಸ್ ಆದ ದ ಗ್ರೇಟ್ ಸಿಂಗರ್ ಸೋನು ನಿಗಮ್ ಅವರು.

ಹೌದು 'ಬೀಯಿಂಗ್ ಇಂಡಿಯನ್' ಎಂಬ ಯೂಟ್ಯೂಬ್ ಚಾನೆಲ್ ನವರು ನಡೆಸುವ 'ದ ರೋಡ್ ಸೈಡ್ ಉಸ್ತಾದ್' ಎಂಬ ಸಂಗೀತದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರು ಈ ವೇಷ ತೊಟ್ಟಿದ್ದರು.

When bollywood singer Sonu Nigam sang on the Mumbai streets

'ಯಾಂತ್ರಿಕ ಜೀವನದಲ್ಲಿ ಎಲ್ಲರೂ ಧಾವಂತದಿಂದಲೇ ಮುನ್ನುಗ್ಗುತ್ತಿರುವ ಈಗಿನ ದಿನಗಳಲ್ಲಿ ಜನರಿಗೆ ಸಂಗೀತದ ಮಹತ್ವ ತಿಳಿಯಪಡಿಸಲು ಹಾಗು ಸಂಗೀತದಿಂದ ಜನರನ್ನು ಭಾವಪರವಶಗೊಳಿಸಲು 'ಬೀಯಿಂಗ್ ಇಂಡಿಯನ್' ನವರು 'ದ ರೋಡ್ ಸೈಡ್ ಉಸ್ತಾದ್' ಎಂಬ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ವೃದ್ಧನ ವೇಷ ಕಳಚಿದ ನಂತರ ಗಾಯಕ ಸೋನು ನಿಗಮ್ ಅವರು ಈ ಜಾಗೃತಿ ಕಾರ್ಯಕ್ರಮದಿಂದ ತಮಗಾದ ಸುಂದರ ಅನುಭವನ್ನು ಹಂಚಿಕೊಂಡಿದ್ದಾರೆ. "ಇದೊಂದು ಅದ್ಭುತ ಅನುಭವ ನನಗಾಗಿತ್ತು".

When bollywood singer Sonu Nigam sang on the Mumbai streets

"ಒಬ್ಬ ವ್ಯಕ್ತಿ ಬಂದು ನನ್ನ ಹಾಡು ಕೇಳಿ ನನ್ನ ಕೈಯಲ್ಲಿ 12 ರೂಪಾಯಿ ಇಟ್ಟು ಹೋದರು. ಅದು ನನಗೆ ತುಂಬಾ ಖುಷಿ ಕೊಟ್ಟಿತು ಆ ನೋಟನ್ನು ನಾನು ಫ್ರೇಮ್ ಹಾಕಿ ಇಟ್ಟಿದ್ದೇನೆ. ಅವರನ್ನು ನಾನು ಮತ್ತೇ ಭೇಟಿ ಮಾಡಿ ಅವರಿಗೆ ಏನಾದ್ರೂ ನೀಡಬೇಕೆಂದಿದ್ದೇನೆ" ಎಂದು ಸೋನು ನಿಗಮ್ ನುಡಿದಿದ್ದಾರೆ.

When bollywood singer Sonu Nigam sang on the Mumbai streets

ಗಾಯಕ ಸೋನು ನಿಗಮ್ ಅವರು ತಮ್ಮ ಅಸಲಿ ರೂಪವನ್ನು ಮರೆಮಾಚಿ ವೇಷ ತೊಟ್ಟು ಜುಹು ರಸ್ತೆಯಲ್ಲಿ ಹಾಡುತ್ತಾ ಸಾಗುವ ವಿಡಿಯೋ ಇಲ್ಲಿದೆ ನೋಡಿ ಎಂಜಾಯ್ ಮಾಡಿ....

English summary
On the streets of Juhu in Mumbai, Bollywood singer Sonu Nigam took the garb of an old man in tatters to dole out some of his songs as part of a social experiment conducted by ‘Being Indian’, a popular Youtube channel. Titled ‘The Roadside Ustaad’.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada