»   » ವಿಶೇಷ: ವಿಶ್ವ ಸಂಗೀತ ದಿನಕ್ಕೆ 25 ಪ್ರಣಯ ಗೀತೆಗಳು

ವಿಶೇಷ: ವಿಶ್ವ ಸಂಗೀತ ದಿನಕ್ಕೆ 25 ಪ್ರಣಯ ಗೀತೆಗಳು

By: ರಾಜ್
Subscribe to Filmibeat Kannada

ಇಂದು(ಜೂ.21) ಇಡೀ ವಿಶ್ವದ ಸಂಗೀತ ಪ್ರೇಮಿಗಳು ಹಾಡಿ ನಲಿವ ದಿನ. ವಿಶ್ವ ಸಂಗೀತ ದಿನಾಚರಣೆ ಆರಂಭಗೊಂಡಿದ್ದು 1982ರಲ್ಲಿ Fete de la Musique ಎಂದು ಫ್ರೆಂಚಿನಲ್ಲಿ ಕರೆಯಲ್ಪಡುವ ಈ ಮಹಾನ್ ವಿಶ್ವ ನಾದಮಯ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ವಿಶ್ವ ಸಂಗೀತ ದಿನಾಚರಣೆಯಂದು ಹಾದಿ ಬೀದಿಗಳಲ್ಲಿ ದೊಡ್ಡ ವೇದಿಕೆಗಳಲ್ಲಿ ಸಂಗೀತಗಾರರು ಹಾಡಿ ನಲಿದು ಸಂತಸಪಡುತ್ತಾರೆ. ಈ ದಿನವನ್ನು ಸಂಭ್ರಮದಿಂದ ಆಚರಿಸಲು ಸಂಗೀತ ಪ್ರೇಮಿಗಳಿಗೆ ಹಿಂದಿ ಚಿತ್ರರಂಗದ ಎವರ್ ಗ್ರೀನ್ ಹಾಡುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಚೋರಿ ಚೋರಿ ಚಿತ್ರದ ರಾಜ್ ಕಪೂರ್ ನರ್ಗೀಸ್ ಕಾಲದ 'ಯೇ ರಾತ್ ಭೀಗಿ ಭೀಗಿ' ಶಂಕರ್ ಜೈಕಿಷನ್ ಸಂಗೀತದಲ್ಲಿ ಹಸ್ರತ್ ಜೈಪುರಿ ಹಾಗೂ ಶೈಲೇಂದ್ರದ ಸಾಹಿತ್ಯದಲ್ಲಿ ಮೂಡಿ ಬಂದ ಪ್ರಣಯ ಗೀತೆ ಇಂದಿಗೂ ಸಿನಿರಸಿಕರನ್ನು ಕಾಡುತ್ತದೆ. ಕಪ್ಪು ಬಿಳುಪಿನ ಕಾಲದಿಂದ ಇಂದಿನ ವೇಗದ ಸಂಗೀತ ಬ್ಯಾಂಡ್ ಗಳ ಕಾಲದವರೆಗಿನ ಹಾಡುಗಳನ್ನು ನೋಡಿದರೆ ಪ್ರಣಯ ಗೀತೆಗಳಲ್ಲಿ ಮಾಧುರ್ಯ ಹಾಗೂ ಸಾಹಿತ್ಯ ಮಹತ್ವದ ಪಾತ್ರವಹಿಸಿದೆ.. ಇನ್ನು ನೀವಾಯ್ತು 25 ಪ್ರಣಯ ಗೀತೆಗಳಾಯ್ತು ಎಂಜಾಯ್...

ಆಜಾ ಸನಮ್

ಚೋರಿ ಚೋರಿ ಚಿತ್ರದ 'ಆಜಾ ಸನಮ್ ಮಧುರ್ ಚಾಂದನಿ ಮೇ ಹಮ್' ಲತಾ ಮಂಗೇಷ್ಕರ್ ಹಾಗೂ ಮನ್ನಾ ಡೇ ಕಂಠದಿಂದ ಹೊರಹೊಮ್ಮಿದ ಅದ್ಭುತ ಗೀತೆ

ಪ್ಯಾರ್ ಹುವಾ ಏಕ್ರಾರ್ ಹುವಾ

ಪ್ಯಾರ್ ಹುವಾ ಎಕ್ರಾರ್ ಹುವಾ ಎವರ್ ಗ್ರೀನ್ ಪ್ರಣಯ ಗೀತೆ. ಶ್ರೀ 420ಚಿತ್ರ 1955 ರಲ್ಲಿ ತೆರೆ ಕಂಡರೂ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ರಾಜ್ ಕಪೂರ್ ಹಾಗೂ ನರ್ಗೀಸ್ ಅಭಿನಯದ ಈ ಹಾಡಿಗೆ ಶೈಲೇಂದ್ರ ಅವರ ಸಾಹಿತ್ಯವಿದೆ. ಲತಾ ಮಂಗೇಷ್ಕರ್ ಹಾಗೂ ಮನ್ನಾಡೇ ಹಿನ್ನೆಲೆ ಗಾಯನವಿದೆ

ಚೌಧ್ವಿ ಕಾ ಚಾಂದ್

ಚೌಧ್ವಿ ಕಾ ಚಾಂದ್ 1960 ರ ಈ ಚಿತ್ರದ ಟೈಟಲ್ ಗೀತೆ ಮಹಮ್ಮದ್ ರಫಿ ಕಂಠದಲ್ಲಿ ಹೊರ ಹೊಮ್ಮಿತ್ತು.

ಪ್ಯಾರ್ ಕೀಯಾ ತೊ ಡರ್ನಾ ಕ್ಯಾ

1960ರಲ್ಲಿ ತೆರೆ ಕಂಡ ಕೆ ಆಸೀಫ್ ನಿರ್ದೇಶನದ ಮುಘಲ್ ಇ ಅಜಾಮ್ ಚಿತ್ರದ ಹಾಡು 'ಪ್ಯಾರ್ ಕೀಯಾ ತೊ ಡರ್ನಾ ಕ್ಯಾ' ಲತಾ ಮಂಗೇಷ್ಕರ್ ಅವರ ಕಂಠದಲ್ಲಿ ಸುಂದರವಾಗಿ ಹೊರಹೊಮ್ಮಿತ್ತು

ಗಾಥಾ ರಹೇ ಮೇರಾ ದಿಲ್

ಗೈಡ್ ಚಿತ್ರ ಗಾಥಾ ರಹೇ ಮೇರಾ ದಿಲ್ ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಷ್ಕರ್ ಗಾಯನದಲ್ಲಿ ಹೊಮ್ಮಿದ ಪ್ರಣಯ ಗೀತೆ..

ರೂಪ್ ತೆರಾ ಮಸ್ತಾನಾ

1969ರಲ್ಲಿ ತೆರೆ ಕಂಡ ಶಕ್ತಿ ಸಾಮಂತ ನಿರ್ದೇಶನದ ಆರಾಧನಾ ಚಿತ್ರದ 'ರೂಪ್ ತೆರಾ ಮಸ್ತಾನಾ' ಹಾಡು ಶರ್ಮಿಳಾ ಠಾಗೋರ್ ಹಾಗೂ ರಾಜೇಶ್ ಖನ್ನಾ ಜೋಡಿ ಹಾಗೂ ಕಿಶೋರ್ ಕುಮಾರ್ ಧ್ವನಿಯಲ್ಲಿ ಸಿನಿರಸಿಕರಿಗೆ ಹುಚ್ಚು ಹಿಡಿಸಿತು.

ಬಹೋಮೇ ಚಲೆ ಆಹಾ

ಆರ್ ಡಿ ಬರ್ಮನ್ ಸಂಗೀತವಿರುವ 'ಅನಾಮಿಕ' ಚಿತ್ರ ಹಲವು ಹಿಟ್ ಸಾಂಗ್ಸ್ ನೀಡಿದೆ. ಕಿಶೋರ್ ಕುಮಾರ್ ಗಾಯನದ 'ಮೇರಿ ಭಿಗಿ ಭಿಗಿ ಸಿ'.. ಲತಾ ಮಂಗೇಷ್ಕರ್ ದನಿಯಲ್ಲಿ ಬಂದ 'ಬಹೋ ಮೆ ಚಲೆ ಆವ್'

ಚುರಾ ಲಿಯಾ

ನಾಸೀರ್ ಹುಸೇನ್ ನಿರ್ದೇಶನದ 1973ರ ಯಾದೋಂಕಿ ಬಾರತ್ ಚಿತ್ರದ ಚುರಾ ಲಿಯಾ ಹೇ ತುಮ್ ನೆ ಹಾಡು ಆಶಾ ಭೋಂಸ್ಲೆ ಹಾಗೂ ಮಹಮ್ಮದ್ ರಫಿ ದನಿಯಲ್ಲಿ

ಕಭಿ ಕಭಿ

1976ರ ಬಾಲಿವುಡ್ ಚಿತ್ರ ಕಭಿ ಕಭಿ ಯಶ ಚೋಪ್ರಾ ನಿರ್ಮಾಣದ ಈ ಚಿತ್ರದ ಟೈಟಲ್ ಗೀತೆ ಮುಖೇಶ್ ಹಾಗೂ ಲತಾ ಮಂಗೇಷ್ಕರ್ ಕಂಠ ಸಿರಿಯಲ್ಲಿ ಬಂದಿದೆ.

ದೇಖ ಏಕ್ ಕ್ವಾಬ್ ತೊ

1981ರ ಸಿಲ್ ಸಿಲಾ ಯಶ್ ಛೋಪ್ರಾ ನಿರ್ದೇಶನದ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ರೇಖಾ, ಸಂಜೀವ್ ಕುಮಾರ್, ಜಯಾ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಷ್ಕರ್ ದನಿಯಲ್ಲಿ 'ದೇಖಾ ಎಕ್ ಕ್ವಾಬ್ ತೊ' ಗೀತೆ

ಮೇರೆ ರಂಗ್ ಮೇ

ಎಸ್ಪಿ ಬಾಲಸುಬ್ರಮಣ್ಯಂ ದನಿಯಲ್ಲಿ ಮೈನೇ ಪ್ಯಾರ್ ಕಿಯಾ ಹಾಡುಗಳು

ನಜರ್ ಕೆ ಸಾಮ್ನೆ

1990ರಲ್ಲಿ ತೆರೆಕಂಡ ಆಶೀಕಿ ಪ್ರಣಯ ಚಿತ್ರಕ್ಕೆ ನದೀಂ ಶ್ರವಣ್ ಸಂಗೀತ ನಿರ್ದೇಶನಿದೆ. ನಜರ್ ಕೆ ಸಾಮ್ನೆ -ಕುಮಾರ್ ಸಾನು ಹಾಗೂ ಅನುರಾಧ ಪೌಡ್ವಲ್ ದನಿಯಲ್ಲಿ

ಪೆಹ್ಲಾ ನಶಾ

ಜೋ ಜೀತಾ ವಹಿ ಸಿಕಂದರ್ ಚಿತ್ರದ ಪೆಹ್ಲಾ ನಶಾ-ಉದಿತ್ ನಾರಾಯಣ್ ಹಾಗೂ ಸಾಧನಾ ಸರ್ಗಮ್ ದನಿಯಲ್ಲಿ

ಎಕ್ ಲಡ್ಕಿ ಕೊ

ಕುಮಾರ್ ಸಾನು ದನಿಯಲ್ಲಿ ಬಂದ 'ಎಕ್ ಲಡ್ಕಿ ಕೊ ದೇಖಾ' 1942 ಎ ಲವ್ ಸ್ಟೋರಿ ಚಿತ್ರದ ಸುಂದರ ಗೀತೆ

ತು ಹಿ ರೇ

ಅರವಿಂದ್ ಸ್ವಾಮಿ, ಮನೀಶಾ ಕೊಯಿರಾಲ ಅಭಿನಯದ ಮಣಿರತ್ನಂ ನಿರ್ದೇಶನದ 1995ರ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಹರಿಹರನ್ ದನಿಯಲ್ಲಿ ತು ಹಿ ರೇ ಹಾಡು

ತುಜೆ ದೇಖಾ ತೊ

ಲತಾ ಮಂಗೇಷ್ಕರ್ ಹಾಗೂ ಕುಮಾರ್ ಸಾನು ಹಾಡಿರುವ ದಿಲ್ ವಾಲೆ ದುಲ್ಹನಿಯಾ ಲೇ ಜಾಯಂಗೇ ಚಿತ್ರದ ತುಜೆ ದೇಖಾ ತೊ ಹಾಡು

ಚಾಂದ್ ಚುಪಾ

ಹಮ್ ದಿಲ್ ದೇ ಚೂಕೆ ಸನಮ್ ಚಿತ್ರದ ಚಾಂದ್ ಚುಪಾ ಬಾದಲ್ ಮೇ

ಸೂರಜ್ ಹುವಾ ಮಧಂ

ಜತಿನ್ ಲಲಿತ್ ಸಂಗೀತ ನಿರ್ದೇಶನದಲ್ಲಿ ಕಭಿ ಖುಷಿ ಕಭಿ ಘಮ್ ಚಿತ್ರದ ಸೂರಜ್ ಹುವಾ ಮಧಮ್ ಹಾಡು

ಭೀಗೆ ಹೋಟ್ ತೆರೆ

ಅನುರಾಗ್ ಬಸು ನಿರ್ದೇಶನದ 2004ರ ಮರ್ಡರ್ ಚಿತ್ರದ ಭೀಗ ಹೋಟ್ ತೆರೆ ಕುನಾಲ್ ಗಾಂಜವಾಲ ದನಿಯಲ್ಲಿ

ಸಾಥಿಯಾ

ಶಾದ್ ಅಲಿ ನಿರ್ದೇಶನದ ಯಶ್ ರಾಜ್ ಬ್ಯಾನರ್ ಚಿತ್ರ ಸಾಥಿಯಾ 2002ರ ಪ್ರೇಮ ಕಥಾನಕ.. ಸೋನು ನಿಗಮ್ ದನಿಯಲ್ಲಿ ಸಾಥಿಯಾ ಟೈಟಲ್ ಗೀತೆ

ಜಾದೂ ಹೇ ನಶಾ ಹೇ

ಜಿಸ್ಮಮ್ ಚಿತ್ರದಲ್ಲಿ ಶ್ರೇಯಾ ಘೋಷಾಲ್ ಹಾಗೂ ಶಾನ್ ದನಿಯಲ್ಲಿ ಹೊರ ಬಂದ 'ಜಾದೂ ಹೇ ನಶಾ ಹೇ' ಹಾಡು

ಮೇರೆ ಹಾಥ್ ಮೇ

2006ರಲ್ಲಿ ತೆರೆ ಕಂಡ ಆಮೀರ್ ಖಾನ್ ಹಾಗೂ ಕಜೋಲ್ ಅಭಿನಯದ ಫನಾ ಚಿತ್ರದ 'ಮೇರೆ ಹಾಥ್ ಮೇ..' ಹಾಡು ಸೋನು ನಿಗಮ್ ಹಾಗೂ ಸುನಿಧಿ ಚೌಹಾಣ್ ಧ್ವನಿಯಲ್ಲಿ

ಖುದಾ ಜಾನೆ

ಬಚ್ನಾ ಏ ಹಸೀನೊ ಚಿತ್ರದ 'ಖುದಾ ಜಾನೆ' ಹಾಡು ಕೆಕೆ ಹಾಗೂ ಶಿಲ್ಪಾ ರಾವ್ ಧ್ವನಿಯಲ್ಲಿ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ

ಇಷ್ಕ್ ವಾಲಾ ಲವ್

2012ರಲ್ಲಿ ತೆರೆಕಂಡ ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರ ಕರಣ್ ಜೋಹರ್ ನಿರ್ದೇಶನದ ಯಶಸ್ವಿ ಪ್ರಯೋಗ. ಈ ಚಿತ್ರದಲ್ಲಿ ಶೇಖರ್ ವ್ ಜಿವಾನಿ, ಸಲಿಂ ಮರ್ಚೆಂಟ್ ಹಾಗೂ ನೀತಿ ಮೋಹನ್ ಹಾಡಿರುವ 'ಇಷ್ಕ್ ವಾಲ ಲವ್ ' ಉತ್ತಮ ಗೀತೆ

ತುಮ್ ಹಿ ಹೋ

ಆಶೀಕಿ 2 2013ರಲ್ಲಿ ಸೂಪರ್ ಹಿಟ್ ಆದ ಚಿತ್ರ ಮೋಹಿತ್ ಶೂರಿ ನಿರ್ದೇಶನದ ಚಿತ್ರ ಆದಿತ್ಯಾ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.. ಆರ್ಜಿತ್ ಸಿಂಗ್ ಹಾಡಿರುವ 'ತುಮ್ ಹಿ ಹೊ' ಜೊತೆಗೆ ಇನ್ನಷ್ಟು ಉತ್ತಮ ಹಾಡುಗಳನ್ನು ಚಿತ್ರ ಹೊಂದಿದೆ.

English summary
Today is World Music Day, which is Celebrated annually on June 21. World Music Day is also referred to as Fete de la Musique and it began in France in the year 1982. On the occasion of World Music Day, we bring to you 25 evergreen romantic songs of Bollywood.
Please Wait while comments are loading...