For Quick Alerts
  ALLOW NOTIFICATIONS  
  For Daily Alerts

  ಯೋ ಯೋ ಹನಿಸಿಂಗ್-ಶಾಲಿನಿ ದಾಂಪತ್ಯ ಕಲಹ: 10 ಕೋಟಿ ರೂ. ಪರಿಹಾರ ಕೇಳಿದ ಪತ್ನಿ

  |

  ಬಾಲಿವುಡ್ ನ ಖ್ಯಾತ ಗಾಯಕ, ರ್‍ಯಾಪರ್, ಸಂಗೀತ ಸಂಯೋಜಕ ಯೋ ಯೋ ಹನಿಸಿಂಗ್ ದಾಂಪತ್ಯ ಕಲಹ ಕೋರ್ಟ್ ಮೆಟ್ಟಿಲೇರಿದೆ. ಹನಿಸಿಂಗ್ ಪತ್ನಿ ಶಾಲಿನಿ ತಲ್ವಾರ್ ಕೌಂಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. Rap ಸಿಂಗರ್ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಪತ್ನಿ ಶಾಲಿನಿ ತಲ್ವಾರ್, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ, ಆರ್ಥಿಕ ಹಿಂಸೆ ಮತ್ತು ವ್ಯಭಿಚಾರದ ಆರೋಪಗಳನ್ನು ಮಾಡಿದ್ದಾರೆ.

  ಪತಿಯಿಂದ ವಿಚ್ಛೇದನ ಕೋರುತ್ತಾ ಶಾಲಿನಿ 10 ಕೋಟಿ ರೂ. ಪರಿಹಾರ ಕೇಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 38 ವರ್ಷದ ಪತ್ನಿ ಶಾಲಿನಿ ಹನಿ ಸಿಂಗ್ ತನ್ನನ್ನು ಕ್ರೂರವಾಗಿ, ಪ್ರಾಣಿಗಳಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟ್‌ಗೆ ಸಲ್ಲಿಸಿರುವ 120 ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆಯ ಪತಿಯಿಂದ ಹಲವಾರು ಬಾರಿ ದೈಹಿಕ ಹಲ್ಲೆಗೆ ಒಳಗಾಗಿರುವುದಾಗಿ ಶಾಲಿನಿ ಆರೋಪ ಮಾಡಿದ್ದಾರೆ.

  ತನ್ನ ಪತಿ ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹನಿ ಸಿಂಗ್ ಕುಟುಂಬದ ಸದಸ್ಯರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ, ಭಯದಲ್ಲೇ ಜೀವನ ಮಾಡಬೇಕಾಗಿದೆ ಎಂದು ಶಾಲಿನಿ ದೂರಿದ್ದಾರೆ. ಸತತದ ಹಿಂಸೆ ಮತ್ತು ಕಿರುಕುಳದಿಂದ ಹಿಂಸೆ ಮತ್ತು ಮಾನಸಿಕ ವೇದನೆಯಿಂದ ತನಗೆ ಖಿನ್ನತೆಗೊಳಗಾಗಿದ್ದೀನಿ ಎಂದು ಶಾಲಿನಿ ಹೇಳಿದ್ದಾರೆ.

  ಬಾಲಿವುಡ್‌ನಲ್ಲಿ ನಟನೆ ಆರಂಭಿಸುವುದಕ್ಕೆ ಮುಂಚೆಯೇ ಯೋ ಯೋ ಹನಿಸಿಂಗ್ ಮದುವೆ ಅಗಿರುವ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ತನ್ನ ಮದುವೆಯನ್ನು ಗೌಪ್ಯವಾಗಿ ಇಟ್ಟಿದ್ದ ಹನಿಸಿಂಗ್ 2014ರ ಇಂಡಿಯಾ'ಸ್ ರಾಸ್ಟಾರ್ ರಿಯಾಲಿಟಿ ಶೋನಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ತನ್ನ ಪತ್ನಿಯನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ, ಹನಿಸಿಂಗ್ ದಾಂಪತ್ಯ ಕಲಹ ಬೀದಿಗೆ ಬಂದಿದೆ.

  ಗಾಯಕ ಹನಿ ಸಿಂಗ್ ಬಗ್ಗೆ

  ಗಾಯಕ, Rap ಸಿಂಗರ್, ಸಂಗೀತ ನಿರ್ದೇಶಕ ಹಾಗೂ ನಟ ಹನಿಸಿಂಗ್ ಬಾಲಿವುಡ್‌ನಲ್ಲಿ ಪ್ರಸ್ತುತ ಅತಿ ಹೆಚ್ಚು ಸಂಭಾವನೆ ಪಡೆಯುವ ಮ್ಯೂಸಿಕ್ ಕಂಪೋಸರ್ ಎಂದು ಗುರುತಿಸಿಕೊಂಡಿದ್ದಾರೆ. ಮೂಲತಃ ಪಂಜಾಬಿ ಕುಟುಂಬದಲ್ಲಿ ಜನಿಸಿರುವ ಹನಿ ಸಿಂಗ್ ಸಿಂಗ್ ನಿಜವಾದ ಹೆಸರು ಹರ್ದೇಶ್ ಸಿಂಗ್. ಆರಂಭದಲ್ಲಿ ಪಂಜಾಬಿ ಭಾಷೆಯಲ್ಲಿ ಹಾಡುಗಳನ್ನು ತಯಾರಿಸುತ್ತಿದ್ದರು. ನಂತರ ಸ್ವತಂತ್ರವಾಗಿ ಆಲ್ಬಮ್ ಹಾಡುಗಳನ್ನು ಮಾಡುವ ಮೂಲಕ ಖ್ಯಾತಿಗಳಿಸಿದರು.

  ನಿಧಾನವಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಹನಿಸಿಂಗ್ ಭರ್ಜರಿ ಹಾಡುಗಳನ್ನು ಕಂಪೋಸ್ ಮಾಡಿ ಗಮನ ಸೆಳೆದರು. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟಿಸಿದ್ದ 'ಕಾಕ್ಟೈಲ್' ಚಿತ್ರದಲ್ಲಿ 'ಆಗ್ರೇಂಜಿ ಬೀಟ್ಸ್' ಹಾಡು ಕಂಪೋಸ್ ಮಾಡಿದ ನಂತರ ಹನಿಸಿಂಗ್ ಹೆಸರು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.

  'ಚೆನ್ನೈ ಎಕ್ಸ್‌ಪ್ರೆಸ್‌' ಸಿನಿಮಾದ 'ಲುಂಗಿ ಡ್ಯಾನ್ಸ್' ಹಾಡು ಕಂಪೋಸ್ ಮಾಡಿದ್ದು ಇದೇ ಹನಿಸಿಂಗ್. ಸನ್ ಆಫ್ ಸರ್ದಾರ್, ಖಲಾಡಿ 76, ರೇಸ್ 2, ಬಾಸ್, ಯಾರಿವನ್, ಸಿಂಗಂ ರಿಟರ್ನ್ಸ್, ಕಿಕ್, ರಾಗಿಣಿ ಎಂಎಂಎಸ್ 2, ಗಬ್ಬರ್ ಈಸ್ ಬ್ಯಾಕ್, ಪಾಗಲ್‌ಪತ್ನಿ, ಮುಂಬೈ ಸಗಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಹನಿಸಿಂಗ್ ಹಾಡುಗಳು ಮೋಡಿ ಮಾಡಿವೆ.

  ಈ ಹಿಂದೆ ಹನಿಸಿಂಗ್ ಸಾಹಿತ್ಯ ವಿವಾದಕ್ಕೆ ಕಾರಣವಾಗಿ ಖ್ಯಾತ ಗಾಯನ ವಿರುದ್ಧ ಎಫ್ ಐ ಆರ್ ಸಹ ದಾಖಲಾಗಿತ್ತು. 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಹನಿಸಿಂಗ್ ಹಾಡಿನ ಸಾಹಿತ್ಯ ವಿವಾದಕ್ಕೆ ಗುರಿಯಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಪ್ರಚೋದಿಸುವ ಸಾಹಿತ್ಯ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರ ತಂಡ ಎಫ್‌ಐಆರ್ ಸಹ ದಾಖಲಿಸಿದ್ದರು.

  English summary
  Rapper Yo Yo Honey Singh’s wife Shalini Talwar files domestic violence case, seeks Rs 10 crore compensation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X