»   » ತುಂಡ್ ಹೈಕ್ಳ 'ಡ್ರಾಮಾ' ಹಾಡುಗಳು ಸಖತ್ ಕ್ಲಿಕ್

ತುಂಡ್ ಹೈಕ್ಳ 'ಡ್ರಾಮಾ' ಹಾಡುಗಳು ಸಖತ್ ಕ್ಲಿಕ್

Posted By:
Subscribe to Filmibeat Kannada

ಯೋಗರಾಜ್ ಭಟ್ ಬಹುನಿರೀಕ್ಷೆಯ 'ಡ್ರಾಮಾ' ಚಿತ್ರದ ಆಡಿಯೋ ಬಿಡುಗಡೆ ಕಳೆದ ಮಂಗಳವಾದ ನೆರವೇರಿತು. ಈ ಮೊದಲಿನ ಭಟ್ಟರ 'ಪರಮಾತ್ಮ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ನಾಯಕರಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಹಣ ಮಾಡಿದ್ದರೂ ಪ್ರೇಕ್ಷಕರು ಹಾಗೂ ವಿಮರ್ಶಕರ ದೃಷ್ಟಿಯಲ್ಲಿ ಚಿತ್ರ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಬರಲಿರುವ ಭಟ್ಟರ 'ಡ್ರಾಮಾ' ಚಿತ್ರದ ಬಗ್ಗೆ ಎಲ್ಲರಲ್ಲೂ ಭಾರಿ ಕುತೂಹಲ ಮನೆಮಾಡಿದೆ. ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕ್ಲಿಕ್ ಆಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಇತ್ತೀಚಿನ ಬಹಳಷ್ಟು ಸಿನಿಮಾಗಳಲ್ಲಿ ಯೋಗರಾಜ್ ಭಟ್ಟರ ಹಾಡು ಒಂದಂತೂ ಇದ್ದೇ ಇರುತ್ತದೆ, ಅದು ಸೂಪರ್ ಹಿಟ್ ಕೂಡ ಆಗುತ್ತದೆ. ಕಮರ್ಷಿಯಲ್ ಹಾಡುಗಳನ್ನು ಬರೆಯುವವರಲ್ಲಿ ಯೋಗರಾಜ್ ಭಟ್ ಹೆಸರು ಟಾಪ್ ನಲ್ಲಿದೆ. ಹೀಗಿರುವಾಗ ಅವರದೇ ನಿರ್ದೇಶನದ ಚಿತ್ರಗಳಲ್ಲಿನ ಹಾಡುಗಳು ಹೇಗಿರಬಹುದು ಎಂಬ ಎಲ್ಲರ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಡ್ರಾಮಾ ಹಾಡುಗಳು ಫಿಲಾಸಫಿಕಲ್ ಆಗಿವೆ, ವಿಭಿನ್ನ ಹಾಗೂ ವಿಶಿಷ್ಟವಾಗಿವೆ ಎಂಬ ಮಾತು ಕೇಳಿ ಬರುತ್ತಿದೆ.

ಬಿಡುಗಡೆಯಾಗಿರುವ ಹಾಡುಗಳ ಕುರಿತು ಅದರ ಸಂಗೀತಕ್ಕಿಂತಲೂ ಹೆಚ್ಚು ಸಾಹಿತ್ಯದ ಬಗ್ಗೆಯೇ ಚರ್ಚೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಆನಂದ್ ಆಡಿಯೋ 30 ಸಾವಿರಕ್ಕೂ ಹೆಚ್ಚು ಆಡಿಯೋ ಸಿಡಿಗಳನ್ನು ಮಾರುಕಟ್ಟೆಗೆ ತಂದಿದೆ. ಅಡಿಯೋಗೆ ಭಾರೀ ಬೇಡಿಕೆ ಇದ್ದು ಮತ್ತೂ ಹೆಚ್ಚಿನ ಬೇಡಿಕೆ ಖಂಡಿತ ಎಂದಿದ್ದಾರೆ ಆನಂದ್ ಆಡಿಯೋದ ಮೋಹನ್. ಒಟ್ಟಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಭಟ್ಟರ ಡ್ರಾಮಾ ಹಾಡುಗಳು ಕ್ಲಿಕ್ ಆಗಿವೆ.

ಅಂದಹಾಗೆ, ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ನಾಯಕ ಹಾಗೂ ನಾಯಕಿಯರು. ಜೊತೆಗೆ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಅಂಬರೀಷ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಹಾಗೂ ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರವು ಇದೇ ತಿಂಗಳು ಕೊನೆಯೊಳಗೆ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

English summary
Yogaraj Bhat upcoming movie Drama Audio Released. This audio got high response for its Lyrics than its Music. Yash and Radhika Pandit are Lead in this movie and V Harikrishna composed the Music for this movie Drama. Release date to announce. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada