twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಈ ಸಂಗೀತ ಯುವ ನಿರ್ದೇಶಕರಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್!

    By Naveen
    |

    ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಅಲೆ ಸೃಷ್ಟಿಯಾಗಿದೆ. ಅದೇ ರೀತಿ ಸಿನಿಮಾ ಸಂಗೀತ ಕೂಡ ಹೊಸ ಸಂಗೀತ ನಿರ್ದೇಶಕರಿಂದ ತುಂಬಿಕೊಂಡಿದೆ. ಆ ಹೊಸ ಸಂಗೀತ ನಿರ್ದೇಶಕರು ಕನ್ನಡ ಸಿನಿಮಾ ಸಂಗೀತವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

    ಆಗ ಹಂಸಲೇಖ, ಆದಾದ ನಂತರ ಗುರುಕಿರಣ್, ಈಗ ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಕನ್ನಡ ಸಿನಿಮಾ ಸಂಗೀತದ ದಿಗ್ಗಜರಾಗಿದ್ದಾರೆ. ಆದರೆ ಇದರ ಮುಂದೆ ಯಾರು ಎಂಬ ಪ್ರಶ್ನೆಗೆ ಕೆಲ ಸಂಗೀತ ನಿರ್ದೇಶಕರ ಹೆಸರು ಸೂಕ್ತವಾಗಿದೆ. ಟ್ರೆಂಡ್ ಬದಲಾಗುತ್ತಿರುವ ಹಾಗೆ ಕನ್ನಡದಲ್ಲಿ ಹಾಡುಗಳಲ್ಲಿ ಕೂಡ ವಿಭಿನ್ನತೆ ಬರುತ್ತಿದೆ. ಪ್ರಮುಖವಾಗಿ ಹಿನ್ನಲೆ ಸಂಗೀತ ಮತ್ತು ಸೌಂಡಿಂಗ್ ನಲ್ಲಿ ಸ್ಯಾಂಡಲ್ ವುಡ್ ದಿನೇ ದಿನೇ ಬೆಳೆಯುತ್ತಿದೆ.

    ಅಂದಹಾಗೆ, ಸದ್ಯ ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ನಂತರ ಆ ಸ್ಥಾನ ತುಂಬಿಸುವ ಶಕ್ತಿ ಇರುವ ಕನ್ನಡದ ಕೆಲ ಯುವ ಸಂಗೀತ ನಿರ್ದೇಶಕರ ಸಣ್ಣ ಪಟ್ಟಿ ಮುಂದಿದೆ ಓದಿ...

    ಅಜನೀಶ್ ಲೋಕನಾಥ್

    ಅಜನೀಶ್ ಲೋಕನಾಥ್

    ಅಜನೀಶ್ ಲೋಕನಾಥ್ ಒಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕ. ಈಗಾಗಲೇ ಅದನ್ನು ಅವರು ತಮ್ಮ ಹಾಡುಗಳ ಮೂಲಕ ಸಾಕಷ್ಟು ಬರಿ ಸಾಬೀತು ಮಾಡಿದ್ದಾರೆ. 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ', 'ಇಷ್ಟಕಾಮ್ಯ', 'ಅಕಿರ' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಕ್ಕೆ ಅಜನೀಶ್ ಸಂಗೀತ ನೀಡಿದ್ದಾರೆ. ಮುಖ್ಯವಾಗಿ ಹಾಡುಗಳ ಜೊತೆಗೆ ಹಿನ್ನಲೆ ಸಂಗೀತದಲ್ಲಿಯೂ ಅಜನೀಶ್ ದೊಡ್ಡ ಹೆಸರು ಮಾಡಿದ್ದಾರೆ.

    ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ

    ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ

    ಕನ್ನಡದ ನಂತರ ಅಜನೀಶ್ ಲೋಕನಾಥ್ ಈಗ ಪರಭಾಷೆಯಲ್ಲಿಯೂ ಮಿಂಚುವುದಕ್ಕೆ ಶುರು ಮಾಡಿದ್ದಾರೆ. ತಮಿಳಿನಲ್ಲಿ 'ರಿಚ್ಚಿ' ಚಿತ್ರಕ್ಕೆ ಸಂಗೀತ ನೀಡಿದ್ದ ಇವರು ತೆಲುಗಿನಲ್ಲಿ 'ಕಿರಿಕ್ ಪಾರ್ಟಿ' ರಿಮೇಕ್ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ. 'ರಂಗಿತರಂಗ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದ ಅಜನೀಶ್ 'ರಾಜರಥ' ಚಿತ್ರಕ್ಕೂ ಬ್ಯಾಗ್ರೌಂಡ್ ಸ್ಕೋರ್ ಮಾಡಿದ್ದಾರೆ.

    ರವಿ ಬಸೂರ್

    ರವಿ ಬಸೂರ್

    'ಉಗ್ರಂ' ಮೂಲಕ ಸದ್ದು ಮಾಡುತ್ತ ಬಂದ ರವಿ ಬಸೂರ್ ಈಗ ಸಖತ್ ಡಿಮ್ಯಾಂಡ್ ನಲ್ಲಿ ಇದ್ದಾರೆ. 'ಮಫ್ತಿ' ಮತ್ತು 'ಅಂಜನೀಪುತ್ರ' ಚಿತ್ರಗಳಿಗೆ ಸದ್ಯ ರವಿಬಸೂರ್ ಸಂಗೀತ ನೀಡಿದ್ದಾರೆ. ಯಶ್ ಅವರ 'ಕೆ.ಜಿ.ಎಫ್' ಸಿನಿಮಾ ಸೇರಿದಂತೆ ದೊಡ್ಡ ನಟರ ದೊಡ್ಡ ಸಿನಿಮಾಗಳು ರವಿಬಸೂರ್ ಪಾಲಾಗುತ್ತಿವೆ.

    'ಮಫ್ತಿ'ಯಲ್ಲಿ ಒಂಟಿ ಸಲಗನಾದ ಶ್ರೀಮುರಳಿ'ಮಫ್ತಿ'ಯಲ್ಲಿ ಒಂಟಿ ಸಲಗನಾದ ಶ್ರೀಮುರಳಿ

    ಚರಣ್ ರಾಜ್

    ಚರಣ್ ರಾಜ್

    ಚರಣ್ ರಾಜ್ ಕನ್ನಡ ಮತ್ತೊಬ್ಬ ಯುವ ಪ್ರತಿಭೆ. ಅವರ ಸಂಗೀತ ತುಂಬ ವಿಭಿನ್ನವಾಗಿ ಇರುತ್ತದೆ. ಅವರ ಹಾಡುಗಳು ಕೇಳಿದರೆ ಡಿಫರೆಂಟ್ ಸೌಂಡ್ ಅನಿಸುತ್ತದೆ. 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಮತ್ತು 'ಪುಷ್ಪಕ ವಿಮಾನ' ಚರಣ್ ರಾಜ್ ಪ್ರತಿಭೆ ಸಾಬೀತು ಮಾಡಿದ ಸಿನಿಮಾಗಳಾಗಿವೆ. ಸದ್ಯ ಚರಣ್ ರಾಜ್ ನಿರ್ದೇಶಕ ಸೂರಿ ಗ್ಯಾಂಗ್ ಸೇರಿದ್ದಾರೆ. ಶಿವಣ್ಣ ಅವರ 'ಟಗರು' ಮತ್ತು 'ಕೆಂಡಸಂಪಿಗೆ ಪಾರ್ಟ್ 1' ಚಿತ್ರಗಳಲ್ಲಿ ಚರಣ್ ರಾಜ್ ಸಂಗೀತ ಇರಲಿದೆ.

    ಜೂಡ ಸ್ಯಾಂಡಿ

    ಜೂಡ ಸ್ಯಾಂಡಿ

    ಜೂಡ ಸ್ಯಾಂಡಿ ಕೂಡ ತಮ್ಮ ಸಂಗೀತದ ಮೂಲಕ ದಿನೇ ದಿನೇ ಗಮನ ಸೆಳೆಯುತ್ತಿದ್ದಾರೆ. 'ಬದ್ಮಾಶ್' 'ಆಪರೇಶನ್ ಅಲಮೇಲ್ಲಮ್ಮ' ಚಿತ್ರಕ್ಕೆ ಸಂಗೀತ ನೀಡಿದ್ದ ಇವರು ಸದ್ಯ 'ಚಮಕ್' ಸಿನಿಮಾ ಮಾಡಿದ್ದಾರೆ. ಜೂಡ ಸ್ಯಾಂಡಿ ಮ್ಯೂಸಿಕ್ ಕೂಡ ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ.

    'ಚಮಕ್' ಚಿತ್ರದ ಖುಷಿಯಾದ ಈ ಹಾಡಿನ ವಿಡಿಯೋ ನೋಡಿ'ಚಮಕ್' ಚಿತ್ರದ ಖುಷಿಯಾದ ಈ ಹಾಡಿನ ವಿಡಿಯೋ ನೋಡಿ

    ನಿಮಗೆ ಯಾರು ಇಷ್ಟ?

    ನಿಮಗೆ ಯಾರು ಇಷ್ಟ?

    ಹೊಸ ತಲೆಮಾರಿನ ಈ ಹೊಸ ಸಂಗೀತ ನಿರ್ದೇಶಕರಲ್ಲಿ ನಿಮ್ಮ ಇಷ್ಟದ ಸಂಗೀತ ನಿರ್ದೇಶಕರು ಯಾರು ಎಂಬುದನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

    English summary
    Ravi Basrur, Charan Raj, Ajaneesh Loknath and Juda Syandi are young music directors. Who are creating new trend kannada cinemas.
    Saturday, December 16, 2017, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X