»   »  ಕನ್ನಡ ಚಿತ್ರಕ್ಕೆ ಬಂದ ಗಜಿನಿ ಅಪರಾವತಾರ

ಕನ್ನಡ ಚಿತ್ರಕ್ಕೆ ಬಂದ ಗಜಿನಿ ಅಪರಾವತಾರ

Posted By: * ನಿಸ್ಮಿತಾ
Subscribe to Filmibeat Kannada
actor, director nagashekar
ಅಲ್ಲಿಂದ ಇಲ್ಲಿಂದ ಕಥೆ ಕದ್ದು ಚಿತ್ರ ಮಾಡುತ್ತಾರೆ ಎಂಬ ಅಪವಾದಕ್ಕೆ ಕನ್ನಡ ಚಿತ್ರರಂಗ ತುತ್ತಾಗಿರುವುದು ಈಗ ಹೊಸದೇನಲ್ಲ. ಪೂರ್ತಿ ಕಥೆ ಕದಿಯುವ ಬದಲು ಚಿತ್ರದ ತುಣುಕು, ಹಾಸ್ಯ, ಗೀತೆಗಳನ್ನು ಅಷ್ಟಿಷ್ಟು ಬಳಸಿಕೊಳ್ಳುವ ಜಾಣ್ಮೆ ನಮ್ಮ ಚಿತ್ರರಂಗಕ್ಕೆ ಬಂದಿರುವ ಬಳುವಳಿ. ಈ ಪೀಠಿಕೆಗೆ ಕಾರಣ. ಗಜಿನಿ ಚಿತ್ರದ ನಕಲು ತಯಾರಾಗುತ್ತಿದೆ. ಹೆದರಬೇಡಿ ಪೂರ್ತಿ ಚಿತ್ರವನ್ನೇನು ಕನ್ನಡಕ್ಕೆ ಭಟ್ಟಿ ಇಳಿಸುತ್ತಿಲ್ಲ. ಗಜಿನಿ ಚಿತ್ರದ ನಾಯಕನ ಅಣುಕು ಪಾತ್ರ ತೆರೆಯ ಮೇಲೆ ಕಾಣಿಸಲಿದೆ.

ಅರಮನೆ ಚಿತ್ರದ ನಿರ್ದೇಶಕ, ನಟ ನಾಗಶೇಖರ್ ಅವರು ಈ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಇದಕ್ಕೆ ತಯಾರಿ ನಡೆಸಿದ್ದಾರೆ ಕೂಡ (ಕ್ಷಮಿಸಿ, ಜಿಮ್ ಗೆ ಹೋಗಿ ಅಮೀರ್ ನಂತೆ ಮೈ ಬೆಳೆಸುತ್ತಿಲ್ಲ) ತಲೆಗೂದಲನ್ನು ಕ್ಷೌರಿಕನ ಕತ್ತಿಗೆ ಬಲಿಕೊಟ್ಟು ಇತ್ತೀಚೆಗೆ ಜನಪ್ರಿಯವಾಗಿರುವ ಗಜಿನಿ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟ, ನಿರ್ದೇಶಕ ರಘುರಾಮ್ ಅವರ ಮಹತ್ವಾಕಾಂಕ್ಷೆಯ 'ಚೆಲುವೆ ನಿನ್ನ ನೋಡಲು' ಚಿತ್ರದಲ್ಲಿ ನಾಗಶೇಖರ್ ಈ ರೀತಿಯ ಪಾತ್ರ ಮಾಡುತ್ತಿದ್ದಾರೆ. ಇಲ್ಲಿ ಅವರ ಪಾತ್ರದ ಹೆಸರು ರಜಿನಿಯಂತೆ. ಮೂಲ ಚಿತ್ರದಂತೆ ಇಲ್ಲೂ ಪಾತ್ರಧಾರಿಗೆ ಮರೆವಿನ ರೋಗ. ಮನೆಗೆಲಸದ ವಿವರಗಳನ್ನು ಮೈ ತುಂಬಾ ಹಚ್ಚೆ ಹಾಕಿಸಿಕೊಂಡು ಓಡಾಡುತ್ತಿರುತ್ತಾನೆ ಎಂದು ವಿಷಯ ಹೊರಬಿಟ್ಟರು ನಿರ್ದೇಶಕ ರಘುರಾಮ್.
ಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada