»   » ಸುದೀಪ್ ಕಂಗನಾ ಹ್ಯಾಪಿ ನ್ಯೂ ಇಯರ್ ಜೋಡಿ

ಸುದೀಪ್ ಕಂಗನಾ ಹ್ಯಾಪಿ ನ್ಯೂ ಇಯರ್ ಜೋಡಿ

Posted By:
Subscribe to Filmibeat Kannada

ಕಿಚ್ಚ ಸುದೀಪ್‌ಗೆ ಈಗ ಕನ್ನಡಕ್ಕಿಂತಲೂ ಬಾಲಿವುಡ್‌ನಲ್ಲಿ ಹೆಚ್ಚು ಆಫರ್ ಗಳು ಬರುತ್ತಿವೆ. ಕನ್ನಡದಲ್ಲಿ ಅಭಿನಯಿಸಿದ ಜಸ್ಟ್ ಮಾತ್‌ ಮಾತಲ್ಲಿ ಚಿತ್ರ ಯಶಸ್ಸು ಗಳಿಸದಿದ್ದರೂ, ಸುದೀಪ್ ಸುಮ್ಮನೆ ಕುಳಿತಿಲ್ಲ. ಬಾಲಿವುಡ್‌ನಲ್ಲಿ ಸುದೀಪ್ ಗೆ ಬೇಡಿಕೆ ಹೆಚ್ಚಿದ್ದು, ಮತ್ತೊಮ್ಮೆ ಮುಂಬೈಗೆ ಹಾರಲಿದ್ದಾರೆ.

ಹಾರರ್ ಚಿತ್ರ 'ಪೂಂಕ್' ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಸುದೀಪ್ ಈಗ ಹ್ಯಾಪಿ ನ್ಯೂ ಇಯರ್ ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುದೀಪ್‌ನೊಂದಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ಕಂಗನಾ ರಾನೌತ್ ನಟಿಸಲಿದ್ದಾಳೆ. ಚಿತ್ರಕ್ಕಾಗಿ ಗಾಗಲೇ ಏಳು ದಿನಗಳ ಕಾಲ್ ಶೀಟನ್ನು ಕೂಡ ಸುದೀಪ್ ಕೊಟ್ಟಿದ್ದಾರಂತೆ.

ಚಿತ್ರದ ಚಿತ್ರೀಕರಣ ಆಗಸ್ಟ್‌ನಿಂದ ಆರಂಭವಾಗಲಿದೆ. ಲಕ್ಕಿ ಚಿತ್ರದ ನಿರ್ದೇಶಕ ವಿನಯ್ ಸಪ್ಪು ಈ ಚಿತ್ರವನ್ನು ನಿರ್ದೇಶಿಸಲಿದ್ದು, ತ್ರಿ ಈಡಿಯಟ್ಸ್ ಖ್ಯಾತಿಯ ನಿರ್ಮಾಪಕ ವಿನೋದ್ ಚೋಪ್ರಾ ಈ ಚಿತ್ರದ ನಿರ್ಮಾಪಕ. ಸನ್ನಿ ಡಿಯೋಲ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚಿತ್ರದಲ್ಲಿ ನಟಿಸುವುದು ನನ್ನ ಸೌಭಾಗ್ಯ ಎಂದು ಕಿಚ್ಚ ಹೇಳಿದ್ದಾರೆ.

ಸುದೀಪ್ ಇಲ್ಲಿಯವರೆಗೆ ಹಿಂದಿಯಲ್ಲಿ ನಟಿಸಿದ ಪೂಂಕ್, ಪೂಂಕ್ 2, ರಣ್ ಚಿತ್ರಗಳಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಚಿತ್ರೀಕರಣದ ಮುಕ್ತಾಯ ಹಂತದಲ್ಲಿರುವ ರಾಮ್ ಗೋಪಾಲ್‌ವರ್ಮರ ರಕ್ತ ಚರಿತ ಚಿತ್ರ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಸುದೀಪ್‌ರೊಂದಿಗೆ ವಿವೇಕ್ ಒಬೆರಾಯ್, ತಮಿಳಿನ ಸೂರ್ಯ ಕೂಡ ಅಭಿನಯಿಸ್ತಿದ್ದಾರೆ. ಬಾಲಿವುಡ್‌ನಲ್ಲಿ ನಟಿಸಿದ ಮೂರು ಚಿತ್ರಗಳಲ್ಲಿ ಸುದೀಪ್ ವಿಮರ್ಶಕರ ಮೆಚ್ಚುಗೆ ಪಡೆದಿದ್ದಾರೆ. ಕನ್ನಡದಲ್ಲಿ ಎಸ್ ನಾರಾಯಣ್ ನಿರ್ದೇಶನದ ವೀರ ಪರಂಪರೆ , ಕನ್ವರ್ ಲಾಲ್ ಹಾಗೂ ದ್ವಾರಕೀಶ್ ನಿರ್ಮಾಣದ 'ಪ್ರೊಡಕ್ಷನ್ ನಂ.47' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada