For Quick Alerts
  ALLOW NOTIFICATIONS  
  For Daily Alerts

  ಪೂಜಾಗಾಂಧಿಗೆ ಬೆದರಿಕೆ ಕರೆ; ಪೊಲೀಸರಿಗೆ ದೂರು

  By Rajendra
  |

  ಸಿನಿಮಾ ತಾರೆ ಪೂಜಾಗಾಂಧಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಚಲನಚಿತ್ರ ವಿತರಕ ಡಾ.ಕಿರಣ್ ಅವರು ತಮಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಸಂಬಂಧ ಅವರು ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಬುಧವಾರ (ಜೂ.1) ದೂರು ನೀಡಿದ್ದಾರೆ.

  ಚಿತ್ರ ವಿತರಕ ಡಾ.ಕಿರಣ್ ಅವರೂ ಪೂಜಾಗಾಂಧಿಯಿಂದಲೂ ತಮಗೆ ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. "ನನ್ನ ಕಾರು ಮತ್ತು ಮೊಬೈಲ್ ಫೋನ್‌ಗಳನ್ನು ಪೂಜಾ ಬಳಸಿಕೊಳ್ಳುತ್ತಿದ್ದಾರೆ" ಎಂದು ಕಿರಣ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಇಬರಿಬ್ಬರು ಪರಸ್ಪರ ಒಬ್ಬರ ಮೇಲೊಬ್ಬರು ದೂರು ನೀಡಿದ್ದಾರೆ.

  ಪೂಜಾಗಾಂಧಿ ಅಭಿನಯದ 'ನೀ ಇಲ್ಲದೆ' ಚಿತ್ರವನ್ನು ಡಾ.ಕಿರಣ್ ನಿರ್ಮಿಸಿದ್ದರು. ಕಿರಣ್ ಅವರು ಸಾಗರೋತ್ತರ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂಜಾ ಹಾಗೂ ಕಿರಣ್ ಕಳೆದ ಕೆಲ ವರ್ಷಗಳಿಂದ ಕ್ಲೋಸ್ ಫ್ರೆಂಡ್ಸ್‌. ತಾಜ್ ಮಹಲ್, ಹರಿಕಥೆ ಹಾಗೂ ನೀ ನಿಲ್ಲದೆ ಚಿತ್ರಗಳ ವಿತರಣೆ ಹಕ್ಕುಗಳನ್ನು ಕಿರಣ್ ಪಡೆದಿದ್ದರು.

  ಪೂಜಾಗಾಂಧಿ ಅವರ ತಂಗಿ ರಾಧಿಕಾ ಗಾಂಧಿ ಚಿತ್ರರಂಗದಲ್ಲಿ ಅವಕಾಶ ಕೊಡಿಸಿದ್ದು, ಆಕೆಯ ಮತ್ತೊಬ್ಬ ತಂಗಿಗೆ ದಯಾನಂದ್ ಸಾಗರ್ ಕಾಲೇಜಿನಲ್ಲಿ ಬಿಬಿಎಂ ಸೀಟು ಕೊಡಿಸಿದ್ದು ತಾವೆ. ಪೂಜಾಗಾಂಧಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆಕೆಗೆ ನನ್ನ ಕಾರನ್ನು ಕೊಟ್ಟಿದ್ದೆ ಎಂದಿದ್ದಾರೆ ಕಿರಣ್.

  ಕೆಲದಿನಗಳ ಹಿಂದೆ ಇದೇ ಕಾರು ಆಕ್ಸಿಡೆಂಡ್ ಆಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಮಸ್ಯೆ ಆರಂಭವಾದದ್ದೇ ಇಲ್ಲಿ. ಈ ಸಂಬಂಧ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು, ಇವರಿಬ್ಬರ ಜಗಳ ಈಗ ಬೀದಿಗೆ ಬಂದಿದೆ ಎನ್ನುತ್ತವೆ ಮೂಲಗಳು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Actress Pooja Gandhi has filed a complaint against Distributor Dr Kiran in the Police Commissioner Officer alleges Dr Kiran was threatening her. Alok Kumar, Joint police commissioner has received the complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X