»   »  ಡಾ.ರಾಜ್ ಪ್ರತಿಮೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

ಡಾ.ರಾಜ್ ಪ್ರತಿಮೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

Subscribe to Filmibeat Kannada

ಪುರಭವನದ ಬಳಿ ವರನಟ ಡಾ.ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿಂದಿನ ಪಾಲಿಕೆ ನಿರ್ಣಯಕ್ಕೆ ವಿರುದ್ಧವಾಗಿ ರಾಣಿ ಚೆನ್ನಮ್ಮ ಪ್ರತಿಮೆಯ ಮುಂಭಾಗದಲ್ಲಿ ರಾಜ್ ಪ್ರತಿಮೆ ಸ್ಥಾಪಿಸುವುದನ್ನು ಪ್ರಶ್ನಿಸಿ ಮಾಜಿ ಮೇಯರ್ ಬಿ.ವಿ ಪುಟ್ಟೇಗೌಡ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪಾಲಿಕೆ ನಿರ್ಣಯದಂತೆ ಈಗಿನ ರಾಣಿ ಚೆನ್ನಮ್ಮ ಪ್ರತಿಮೆಯ ಪಕ್ಕದಲ್ಲಿ ರಾಜ್ ಪ್ರತಿಮೆ ಸ್ಥಾಪಿಸಬೇಕು. ಮುಂಭಾಗದಲ್ಲಿ ಸ್ಥಾಪಿಸುವುದರಿಂದ ಚೆನ್ನಮ್ಮ ಪ್ರತಿಮೆಗೆ ಅಡ್ಡಿಯಾಗುತ್ತದೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಬೇಕು ಎಂದು ಪುಟ್ಟೇಗೌಡ ಕೋರಿದ್ದಾರೆ. ಹೈಕೋರ್ಟ್ ನ ವಿಭಾಗೀಯ ಪೀಠ ಸರಕಾರದ ವಿವರಣೆ ಕೇಳಿದೆ. ಗೊಂದಲಕ್ಕೆ ಆಸ್ಪದ ನೀಡದೆ ಪ್ರತಿಮೆಯನ್ನು ಸ್ಥಾಪಿಸುವಂತೆ ಕೋರ್ಟ್ ಸೂಚಿಸಿದೆ.

1970ರಲ್ಲಿ ಅಣ್ಣಾವ್ರು ನಟಿಸಿದ್ದ 'ಕಸ್ತೂರಿ ನಿವಾಸ' ಚಿತ್ರದ ಭಂಗಿಯಲ್ಲಿ ಈ ಪುತ್ತಳಿಯನ್ನು ನಿರ್ಮಿಸಲಾಗಿದೆ. ಭುಜದ ಮೇಲೆ ಪಾರಿವಾಳ ಕುಳಿತ ಮಾದರಿಯಅಣ್ಣಾವ್ರ ಪ್ರತಿಮೆಯನ್ನು ನಿರ್ಮಿಸಲು ರು.22 ಲಕ್ಷ ಖರ್ಚು ಮಾಡಲಾಗಿದೆ. ಎರಡು ವರ್ಷಗಳಷ್ಟು ತಡವಾಗಿ ರಾಜ್ ಪ್ರತಿಮೆ ಅನಾವಣಗೊಳ್ಳಲು ಸಿದ್ಧವಾಗಿದೆ

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada