»   » ಸೆಟ್ಟೇರಿತು ದುನಿಯಾ ವಿಜಯ್ ಜರಾಸಂಧ

ಸೆಟ್ಟೇರಿತು ದುನಿಯಾ ವಿಜಯ್ ಜರಾಸಂಧ

Posted By:
Subscribe to Filmibeat Kannada

ಶಶಾಂಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜರಾಸಂಧ' ಚಿತ್ರ ಸೆಟ್ಟೇರಿದೆ. ನವೀನ್ ಮನು ಗಂಗಾಧರ್, ವೆಂಕಟೇಶ್ ಮತ್ತು ಬಸವರಾಜು ಎಂಬುವವರು ನಿರ್ಮಿಸುತ್ತಿರುವ ಚಿತ್ರ ಇದು. 'ಜರಾಸಂಧ' ಚಿತ್ರದ ಅವಕಾಶ ಐಂದ್ರಿತಾ ರೇ ಕೈತಪ್ಪಿ ಈ ಹಿಂದೆ ಸುದ್ದಿಯಾಗಿತ್ತು.

ಬೆಂಗಳೂರಿನ ಮೋದಿ ಆಸ್ಪತ್ರೆ ಬಳಿಯ ಗಣೇಶ ಮಂದಿರದಲ್ಲಿ ಚಿತ್ರ ಮುಹೂರ್ತ ಸನ್ನಿವೇಶ ಇತ್ತೀಚೆಗೆ ನೆರವೇರಿತು. ನಿರ್ಮಾಪಕರು ಸೇರಿದಂತೆ ಚಿತ್ರದ ತಾಂತ್ರಿಕ ಬಳಗ ಹಾಗೂ ಹಿತೈಷಿಗಳು ಚಿತ್ರಕ್ಕೆ ಶುಭ ಕೋರಿದರು. ಜನವರಿಯಲ್ಲೇ ಚಿತ್ರ ಸೆಟ್ಟೇರಬೇಕಾಗಿತ್ತು. ವಿಜಯ್ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಮುಂದೂಡಲಾಗಿತ್ತು.

ಚಿತ್ರದ ನಾಯಕ ನಟ ದುನಿಯಾ ವಿಜಯ್, ನಾಯಕಿ ಪ್ರಣೀತಾ. ಉಳಿದ ತಾರಾಬಳಗದಲ್ಲಿ ದೇವರಾಜ್, ಸಂಪತ್ ಮತ್ತು ರೂಪಾದೇವಿ ಮುಂತಾದವರು ಇದ್ದಾರೆ. ಫೆಬ್ರವರಿ 12ರಿಂದ ಪ್ರಣೀತಾ ಭಾಗದ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. [ದುನಿಯಾ ವಿಜಯ್]

English summary
Duniya Vijay lead movie Jarasandha launched. The movie is directing by Shashank. The movie is being produced by Naveen Manu Gangadhar, Venkatesh and Basavaraju. Praneetha is the heroine of the movie. Devaraj, Sampath and Roopadevi are in the cast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada