»   »  ಕಂಠೀರವ ಸ್ಟುಡಿಯೋಗೆ ಮಟ್ಟಣನವರ್ ದಿಕ್ಕು!

ಕಂಠೀರವ ಸ್ಟುಡಿಯೋಗೆ ಮಟ್ಟಣನವರ್ ದಿಕ್ಕು!

Posted By:
Subscribe to Filmibeat Kannada
Girish Mattanavar
ನಗರದ ಪ್ರಮುಖ ಸ್ಟುಡಿಯೋಗಳಲ್ಲಿ ಒಂದಾದ ಕಂಠೀರವ ಸ್ಟುಡಿಯೋ ಅಭಿವೃದ್ಧಿಯ ಹೊಣೆ ಗಿರೀಶ್ ಮಣ್ಣಣ್ಣನವರ್ ಅವರ ಹೆಗಲ ಮೇಲೆ ಬಿದ್ದಿದೆ. ಕಂಠೀರವ ಸ್ಟುಡಿಯೋದ ನಿಯಮಿತ ಅಧ್ಯಕ್ಷರಾಗಿ ಇಂದು ಗಿರೀಶ್ ಅಧಿಕಾರವಹಿಸಿಕೊಂಡರು.

ಕನ್ನಡ ಚಲನಚಿತ್ರೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಸಾಕಷ್ಟು ಕಲಾವಿದರು, ಚಿತ್ರೋದ್ಯಮಿಗಳು ಬೆಳೆದಿದ್ದಾರ. ಒಳ್ಳೆ ಇತಿಹಾಸ ಹೊಂದಿರುವ ಇತ್ತೀಚಿನ ದಿನಗಳಲ್ಲಿ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋದಲ್ಲಿ ಇನ್ನೆರಡು ಫ್ಲೋರ್ ಗಳನ್ನು ನಿರ್ಮಿಸಲಾಗುವುದು. ಈಗಿರುವ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಗಿರೀಶ್ ಹೇಳಿದರು.

ಸ್ಟುಡಿಯೋ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಗಳ ಬಳಿಗೆ ಚಿತ್ರೋದ್ಯಮಿಗಳ ನಿಯೋಗವನ್ನು ಕೊಂಡೊಯ್ಯಲಾಗುವುದು. ಡಾ. ರಾಜ್ ಕುಮಾರ್ ಅವರ ಸಮಾಧಿ ಇರುವ ಪುಣ್ಯಭೂಮಿ ಇದಾಗಿದ್ದು, ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡಲು ಶ್ರಮಿಸುತ್ತೇನೆ. ಐದು ವರ್ಷದ ಅಧಿಕಾರಾವಧಿಯ ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು ಮಟ್ಟಣ್ಣನವರ್ ತಿಳಿಸಿದರು. ಈ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋದ ಅಡಳಿತಾಧಿಕಾರಿ ಶಿವರಾಂ ಉಪಸ್ಥಿತರಿದ್ದರು.

ಐದು ವರ್ಷದ ಹಿಂದೆ ಸರ್ಕಾರಿ ಹುದ್ದೆಯಲ್ಲಿದ್ದ ಗಿರೀಶ್ ಮಟ್ಟಣ್ಣನವರ್ ಅವರು' ಬಾಂಬ್ ಎಸೈ' ಎಂಬ ಕುಖ್ಯಾತಿಗೆ ಒಳಗಾಗಿ ಪೊಲೀಸ್ ಇಲಾಖೆಯಿಂದ ಸಂಬಂಧ ಕಳೆದುಕೊಂಡರು. ನಂತರದ ದಿನಗಳಲ್ಲಿ ಪತ್ರಿಕೋದ್ಯಮ, ಯುವಜನ ಸಂಘಟನೆ, ಬಿಜೆಪಿ ಯುವಮೋರ್ಚಾದ ನಾಯಕತ್ವ ವಹಿಸಿ ಶ್ಲಾಘನೀಯ ಕೆಲಸ ಮಾಡಿ, ಹಿರಿಯ ನಾಯಕರ ಮೆಚ್ಚುಗೆ ಗಳಿಸಿದರು. ಈಗ ಮತ್ತೆ ಸರ್ಕಾರಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada