For Quick Alerts
  ALLOW NOTIFICATIONS  
  For Daily Alerts

  ಬಹುನಿರೀಕ್ಷೆಯ ದರ್ಶನ್ 'ಚಿಂಗಾರಿ' ಆಡಿಯೋ ರಿಲೀಸ್

  |

  ಕಳೆದ ವರ್ಷದ ಸೂಪರ್ ಹಿಟ್ ಚಿತ್ರ 'ಸಾರಥಿ' ಮೂಲಕ ಬಾಕ್ಸ್ ಆಫೀಸ್ 'ಸುಲ್ತಾನ್' ಆಗಿ ಹೊರಹೊಮ್ಮಿರುವ ದರ್ಶನ್, ಇದೀಗ ಸ್ಯಾಂಡಲ್ ವುಡ್ 'ಕಿಂಗ್' ಎನಿಸಿಕೊಂಡಿದ್ದಾರೆ. ಸಾರಥಿ ನಂತರ ಬಿಡುಗಡೆಯಾಗುತ್ತಿರುವ 'ಚಿಂಗಾರಿ' ಇದೀಗ ಸಹಜವಾಗಿ ಗಾಂಧಿನಗರ ಹಾಗೂ ಪ್ರೇಕ್ಷಕರನ್ನು ಮಿತಿಮೀರಿ ಗಮನಸೆಳೆದಿದೆ.

  ಚಿಂಗಾರಿ ಚಿತ್ರದ ಆಡಿಯೋ ಬಿಡುಗಡೆ ನಾಳೆ (ಜನವರಿ 02, 2012) ನಡೆಯಲಿದ್ದು ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ನಿರ್ಮಾಪಕರಾದ ಮಹಾದೇವ್ ಮತ್ತು ಮನು ಗೌಡ ಹಾಡುಗಳು ಹಾಗೂ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿವೆ ಎನ್ನುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

  ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದ್ದು ಸಾಹಿತ್ಯದಲ್ಲಿ ಪ್ರಮುಖವಾಗಿ ಯೋಗರಾಜ್ ಭಟ್ ಹಾಡು ಸಖತ್ತಾಗಿದೆ ಎಂಬ ಮಾತು ಚಿತ್ರತಂಡದಿಂದ ಹೊರಬಿದ್ದಿದ್ದು ಎಲ್ಲೆಡೆ ಸುತ್ತುತ್ತಿರುವ ಸುದ್ದಿಯಾಗಿದೆ. ಹಾಡುಗಳನ್ನು ಅಶ್ವಿನಿ ಆಡಿಯೋ ಮೂಲಕ ಹೊರತಂದಿದ್ದು ಕೇಳಲು ನಾಳೆಯವರೆಗೆ ಮಾತ್ರ ಕಾದರೆ ಸಾಕು.

  ಹೊಸ ವರ್ಷದಲ್ಲಿ ಚಿಂಗಾರಿ ತನ್ನ ಆಡಿಯೋ ಬಿಡುಗಡೆ ಮೂಲಕ ಸದ್ದು-ಸುದ್ದಿ ಮಾಡಲು ಪ್ರಾರಂಬಭಿಸಿದೆ. ಈ ಚಿತ್ರ ಇದೇ ತಿಂಗಳು, ಜನವರಿ 27ಕ್ಕೆ ಬಿಡುಗಡೆ ಆಗಲಿದ್ದು ಈಗಾಗಲೇ ಸಿನಿಮಾ ನೋಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಕಾರಣ ದರ್ಶನ್, ಸಾರಥಿ ಯಶಸ್ಸು ಮತ್ತು ದರ್ಶನ್. (ಒನ್ ಇಂಡಿಯಾ ಕನ್ನಡ)

  English summary
  Kannada movie Chingari Audio set to be released tomorrow. This is Challenging Star Darshan Movie and A Harsha Directs this.
 
  Sunday, January 1, 2012, 16:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X