»   » ನಟಿ ಕರೀನಾ ಕಪೂರ್ ಸದ್ಯದಲ್ಲಿಯೇ ಹೀರೋಯಿನ್

ನಟಿ ಕರೀನಾ ಕಪೂರ್ ಸದ್ಯದಲ್ಲಿಯೇ ಹೀರೋಯಿನ್

Posted By:
Subscribe to Filmibeat Kannada
Kareena Kapoor
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಈಗ ಯಶಸ್ಸಿನ ಯಾತ್ರೆಯಲ್ಲಿದ್ದಾರೆ. ಒಂದರಹಿಂದೆ ಮತ್ತೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಬಾಲಿವುಡ್ ನಂ.1 ಸ್ಥಾನಕ್ಕೆ ಹತ್ತಿರವಾಗುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ರಾ ಒನ್ ಚಿತ್ರದಲ್ಲಿನ ಅಭಿನಯ ಪ್ರೇಕ್ಷಕರ ಹಾಗೂ ವಿಮರ್ಶಕರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಾಕಿ ಬಾಲಿವುಡ್ ನಟಿಯರ ನಿದ್ದೆ ಕೂಡ ಕದ್ದಿದ್ದಾಳೆ.

ತ್ರಿ ಈಡಿಯಟ್ಸ್, ಗೋಲ್ ಮಾಲ್, ಬಾಡಿಗಾರ್ಡ್ ಹಾಗೂ ಈಗ ರಾ ಒನ್, ಹೀಗೆ ಸಾಲಾಗಿ ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿರುವ ಕರೀನಾ, ಮುಂದೆ ಮಧುರ್ ಭಂಡಾರ್ಕರ್ ಸಿನಿಮಾ 'ಹೀರೋಯಿನ್' ನಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೇ ಜನಪ್ರಿಯತೆಯ ತುದಿಯಲ್ಲಿ ರಾರಾಜಿಸುತ್ತಿರುವ ಕರೀನಾ, ನಂ. 1 ಸ್ಥಾನದ ಪ್ರಮುಖ ಸ್ಪರ್ಧಿಯಾಗಿದ್ದಾರೆ.

ಹೀಗಿರುವ ಕರೀನಾ ತಮ್ಮ ಮೇಣದ ಪ್ರತಿಮೆಯ ಬಗ್ಗೆ ಫುಲ್ ಖುಷಿಯಾಗಿದ್ದಾರೆ. ಕಾರಣ ಅದು ಅಮಿತಾಬ್ ಬಚ್ಚನ್ ಪಕ್ಕದಲ್ಲಿದೆ. ಅದರ ಫೋಟೋವನ್ನು ಗೆಳೆಯ ಸೈಫ್ ಅಲಿಗೆ ಕಳಿಸಿದ್ದರಂತೆ. ಅದಕ್ಕೆ ಸೈಫ್, ತುಂಬಾ ಹಾಟ್ ಎಂದು ಪ್ರತಿಕ್ರಿಯಿಸಿದ್ದಾನಂತೆ. ಏನೇ ಆಗಲಿ, ಗ್ರೇಟ್ ಕರೀನಾ ಗ್ರೇಟೆಸ್ಟ್ ಆಗುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
3 Idiots, Golmaal, Bodyguard and now Ra.One – All of Kareena's films released in recent times have been blockbusters. Now, Kareena Kapoor looks forward to Madhur's Heroine.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada