»   » ಅರ್ಧಶತಕದ ಸಂಭ್ರಮದಲ್ಲಿ 'ನಾನು ನನ್ನ ಕನಸು'

ಅರ್ಧಶತಕದ ಸಂಭ್ರಮದಲ್ಲಿ 'ನಾನು ನನ್ನ ಕನಸು'

Posted By:
Subscribe to Filmibeat Kannada

ದಕ್ಷಿಣಭಾರತದ ಹೆಸರಾಂತ ನಟ ಪ್ರಕಾಶ್ ರೈ ಚೊಚ್ಚಲ ನಿರ್ಮಾಣ ಮತ್ತು ನಿರ್ದೇಶನದ 'ನಾನು ನನ್ನ ಕನಸು' ಐವತ್ತು ದಿನ ಪೂರೈಸಿದ ಸಂಭ್ರಮದಲ್ಲಿದೆ. ಗಳಿಕೆಯಲ್ಲಿ ಕೂಡ ಹಿಂದೆ ಬೀಳದ ಈ ಚಿತ್ರ ನಿರ್ಮಾಪಕರು ಹಾಕಿರುವ ದುಡ್ಡಿಗೆ ಮೋಸ ಮಾಡಿಲ್ಲ. ಪ್ರಕಾಶ್ ರೈ ಅವರ ಡ್ಯೂಟ್ ಮೂವೀಸ್ ಮತ್ತು ಮಿಡಿಯಾ ಹೌಸ್ ಪ್ರೊಡಕ್ಷನ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿತ್ತು.

ಚಿತ್ರ ಗೆದ್ದ ಸಂಭ್ರಮದಲ್ಲಿ ಬೆಂಗಳೂರಿನ ಬೆಲ್ ಹೋಟೆಲ್ ನಲ್ಲಿ ಚಿತ್ರತಂಡ ಮತ್ತು ಮಾಧ್ಯಮದವರಿಗೆ ಏರ್ಪಡಿಸಿದ್ದ ಪಾರ್ಟಿಯಲ್ಲಿ ಪ್ರಕಾಶ್, ನನ್ನ ಈ ಚಿತ್ರ ಗೆಲ್ಲಲು ಮಾಧ್ಯಮದವರ ಸಹಕಾರ ಪ್ರಮುಖ ಕಾರಣಗಳಲ್ಲೊಂದು. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಾ ಚಿತ್ರ ಯಶಸ್ಸು ಗೊಂಡಿದ್ದು ಸಂತಸ ನೀಡಿದೆ. ಚಿತ್ರಕ್ಕೆ ವಾರಾಂತ್ಯದ ಗಳಿಕೆ ಉತ್ತಮವಾಗಿದೆ. ಮಲ್ಟಿಪ್ಲೆಕ್ಷ್ ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕನ್ನಡದಲ್ಲಿ ಇನ್ನೂ ಚಿತ್ರ ತೆಗೆಯಲು ಹುಮ್ಮಸ್ಸು ಬಂತಂತಾಗಿದೆ ಎಂದು ಬೀಗಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿದ್ದ ರಾಜೇಶ್, ಅಚ್ಯುತ್, ರುತ್ವಾ, ಬೇಬಿ ಕೃತಿಕಾ ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರಮುಖ ಪಾತ್ರಧಾರಿ ಅಮೂಲ್ಯಾ ಯಾಕೋ ಬಂದಿರಲಿಲ್ಲ. ನಟ ಸಿಹಿಕಹಿ ಚಂದ್ರು ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada