»   »  ಕನ್ನಡ, ತಮಿಳು ದ್ವಿಭಾಷಾ ಚಿತ್ರದಲ್ಲಿ ನಾಗಕಿರಣ್

ಕನ್ನಡ, ತಮಿಳು ದ್ವಿಭಾಷಾ ಚಿತ್ರದಲ್ಲಿ ನಾಗಕಿರಣ್

Posted By:
Subscribe to Filmibeat Kannada

ನಟ ನಾಗಕಿರಣ್ ದ್ವಿಭಾಷಾ ಚಿತ್ರದಲ್ಲಿ ನಟಿಸಿದ್ದಾರೆ. ಸೂರ್ಯವಂಶಿ ನಿರ್ದೇಶಿಸುತ್ತಿರುವ ತಮ್ಮ ಮೊದಲ ಚಿತ್ರ 'ಲಹರಿ' ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದ್ದ್ದು ಬಿಡುಗಡೆ ಸಿದ್ಧವಾಗಿದೆ. ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಭಾನು ಈ ಚಿತ್ರದನಾಯಕಿ.

ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಾಗಕಿರಣ್ ಮತ್ತು ಭಾನು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣ ಮತ್ತು ರವಿರಾಜ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಮಿಳು ಚಿತ್ರಕ್ಕೆ 'ಯಾರಿಂದ ದೇವತೈ' ಎಂದು ಹೆಸರಿಡಲಾಗಿದೆ.

ಎರಡು ಭಾಷೆಗಳ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆಗಸ್ಟ್ ಕೊನೆ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಚಿತ್ರ ತೆರೆ ಕಾಣಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು. ವಿಶೇಷ ಪಾತ್ರದಲ್ಲಿ ಮೀರಾ ಕೃಷ್ಣನ್ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada