»   »  ಅಭಿನಯ ತರಂಗದಲ್ಲಿ ರಮ್ಯಾ ಮತ್ತು ವಿಜಯ್

ಅಭಿನಯ ತರಂಗದಲ್ಲಿ ರಮ್ಯಾ ಮತ್ತು ವಿಜಯ್

Subscribe to Filmibeat Kannada

ಅಭಿನಯ ತರಂಗ 'ಫ್ರೇಂ' ಎಂಬ ಒಂದು ತಿಂಗಳ (ಜೂನ್ 7 ರಿಂದ ಜುಲೈ 12) ಸಿನಿಮಾ ಮತ್ತ್ತು ಟಿವಿ ಅಭಿನಯ ಶಿಬಿರವನ್ನು ಆಯೋಜಿಸಿದೆ. ಶಿಬಿರಾರ್ಥಿಗಳನ್ನು ಉದ್ದೇಶಿಸಿ ನಟಿ ರಮ್ಯಾ ಮತ್ತು 'ತಾಕತ್' ವಾಲಾ ವಿಜಯ್ ಒಂದೆರಡು ಹಿತನುಡಿಗಳನ್ನು ಹೇಳಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಿರ್ಮಾಪಕ ರಾಜೇಶ್ ನಾಯ್ಡು ಮಾತನಾಡುತ್ತಾ, ಮುಂಬರುವ ದಿನಗಳಲ್ಲಿ ರಮ್ಯಾ ಮತ್ತು ವಿಜಯ್ ಅವರೊಂದಿಗೆ ಚಿತ್ರ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದರು. ರಮ್ಯಾ ಮತ್ತು ವಿಜಯ್ ಸಹ ನಾಯ್ಡುರ ಆಸೆಗೆ ತಣ್ಣೀರೆರಚದೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ಹನುಮಂತನಗರದಲ್ಲಿ ಆಯೋಜಿಸಿದ್ದ ಕಲಾಮಂದಿರದಲ್ಲಿ 40 ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು. ಇವರನ್ನು ಉದ್ದೇಶಿಸಿ ರಮ್ಯಾ ಮಾತನಾಡುತ್ತಿದ್ದರು. ತಾಳ್ಮೆ ಮತ್ತು ಶಿಸ್ತು ಜೀವನದಲ್ಲಿ ಬಹಳ ಮುಖ್ಯ .ಚಿತ್ರರಂಗದಲ್ಲಿ ಅದೃಷ್ಟ ಎಂಬುದು ಎಷ್ಟು ಮುಖ್ಯವೋ ಪ್ರತಿಭೆ ಸಹ ಅಷ್ಟೇ ಮುಖ್ಯ. ಜ್ಞಾನ ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನಟ ವಿಜಯ್ ಮಾತನಾಡುತ್ತಾ, ಸೂರಿ ಅವರ ನಿರ್ದೇಶನ ಸಾಮರ್ಥ್ಯಗಳನ್ನು ಕೊಂಡಾಡಿದರು. ಅವರು ಅಭಿನಯ ತರಂಗದಿಂದ ತರಬೇತಿ ಪಡೆದಿದ ಪ್ರತಿಭಾವಂತ ಎಂದು ವಿಜಯ್ ವಿವರ ನೀಡಿದರು. ವಿಜಯ್ ಮತ್ತು ರಮ್ಯಾ ಹೊಸ ಉತ್ಸಾಹ ಮೂಡಿಸಿದ್ದು ಶಿಬಿರಾರ್ಥಿಗಳ ಮುಖದಲ್ಲಿ ಪ್ರತಿಬಿಂಬಿಸುತ್ತಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada