»   » ರಾಧಿಕಾ ಕುಮಾರಸ್ವಾಮಿ ಲಕ್ಕಿ ಬೈಕ್, ಟಿವಿ ಬೇಕೇ?

ರಾಧಿಕಾ ಕುಮಾರಸ್ವಾಮಿ ಲಕ್ಕಿ ಬೈಕ್, ಟಿವಿ ಬೇಕೇ?

Posted By:
Subscribe to Filmibeat Kannada

ರಾಧಿಕಾ ಕುಮಾರಸ್ವಾಮಿ ತಮ್ಮ ಕೈಯಾರೆ 'ಲಕ್ಕಿ'ಯಾದವರಿಗೆ ಬೈಕ್, ಮೊಪೆಡ್, ಎಲ್‌ಸಿಡಿ ಟಿವಿ ಹಂಚಲಿದ್ದಾರೆ. ಲಕ್ಕಿ ಚಿತ್ರದ ಕುರಿತು ಹೀಗೊಂದು ಪ್ರಚಾರ ನಡೆಯುತ್ತಿದೆ. ಫೆಬ್ರವರಿ 14ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ರಾಧಿಕಾ ನಿರ್ಮಾಣ ಹಾಗೂ ಯಶ್-ರಮ್ಯಾ ಜೋಡಿಯ ಚಿತ್ರ, 40 ದಿನ ಪೂರೈಸಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಆದರೆ ಈ ಪ್ರಚಾರದ ವರಸೆ ಈ ರೀತಿ ಬದಲಾಗಿದೆ.

"ಚಿತ್ರಮಂದಿರಕ್ಕೆ ಬನ್ನಿ, 'ಲಕ್ಕಿ' ಸಿನಿಮಾ ನೋಡಿ. ಕೊನೆಗೆ ಹೋಗುವಾಗ ಚಿತ್ರಮಂದಿರದಲ್ಲಿ ಇಟ್ಟಿರುವ ಬಾಕ್ಸ್‌ಗೆ ಹೆಸರು, ವಿಳಾಸ, ಮೊಬೈಲ್ ನಂಬರ್ ಬರೆದಿರುವ ಚೀಟಿಯನ್ನು ಹಾಕಿ ಹೋಗಿ. ನೀವು ಅದೃಷ್ಟವಂತರಾದರೆ ಬೈಕ್ ನಿಮ್ಮದಾಗುತ್ತದೆ. ಅದನ್ನು ಸ್ವತಃ ರಾಧಿಕಾ ಕುಮಾರಸ್ವಾಮಿಯವರು ಹಸ್ತಾಂತರಿಸುತ್ತಾರೆ. ಹೀಗಂತ ಪ್ರಚಾರ ಮಾಡಲಾಗುತ್ತಿದೆ.

ಹಾಗಾದರೆ ಲಕ್ಕಿ ಸಿನಿಮಾ ಗೆದ್ದಿದೆಯೋ ಅಥವಾ... ಎಂದರೆ 'ಇಲ್ಲ, ಗೆದ್ದಿಲ್ಲ' ಎಂಬ ಉತ್ತರ ಗಾಂಧಿನಗರದ ದಿಕ್ಕಿನಿಂದ ಬರುತ್ತಿದೆ. ಇನ್ನೂ 40 ದಿನ ಪೂರ್ಣಗೊಳಿಸಿಲ್ಲ. ಈಗಲೇ ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ಹೇಗಾದರೂ ಮಾಡಿ 50 ದಿನ ಪೂರೈಸಬೇಕು ಎನ್ನುವ ಉದ್ದೇಶದಿಂದ ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ಅದೃಷ್ಟ ಪರೀಕ್ಷೆ ಮಾಡಿ ಎನ್ನಲಾಗುತ್ತಿದೆ.

ಬೆಂಗಳೂರಿನ ಸಾಗರ್, ಮೈಸೂರಿನ ಪ್ರಭಾ, ಮಂಡ್ಯದ ಗುರುಶ್ರೀ, ಹಾಸನದ ಎಸ್‌ಬಿಜಿ, ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರಗಳಲ್ಲಿ ಈ ಲಕ್ಕಿ ಡ್ರಾ ಚೀಟಿ ಪ್ರೇಕ್ಷಕರಿಗೆ ಲಭ್ಯವಿದೆ. ಗೆದ್ದ ಮೂವರು ಅದೃಷ್ಟವಂತರಿಗೆ ಒಂದು ಬೈಕು, ಒಂದು ಮೊಪೆಡ್ ಮತ್ತು ಒಂದು ಎಲ್‌ಸಿಡಿ ಟಿವಿ ಬಹುಮಾನ. ಲಕ್ಕಿ ಚಿತ್ರ 50 ದಿನಗಳನ್ನು ಪೂರೈಸಿದ ನಂತರ ಸ್ವತಃ ರಾಧಿಕಾ ಬಹುಮಾನವನ್ನು ಅದೃಷ್ಟವಂತರಿಗೆ ವಿತರಿಸಲಿದ್ದಾರೆ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)

English summary
Actress Radhika produced, Rocking Star Yash Ramya Lead movie Lucky team arranged Lucky Draw contest.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X