For Quick Alerts
  ALLOW NOTIFICATIONS  
  For Daily Alerts

  ಬಿಲ್ ಕುಲ್ ಸಿಕ್ಸ್ ಪ್ಯಾಕ್ ಮಾಡಲ್ಲ ಎಂದ ರಾಗಿಣಿ

  |

  ನೀವೇನಾದರೂ ಜಿಮ್, ಸಿಕ್ಸ್ ಪ್ಯಾಕ್ ಮಾಡಲಿದ್ದೀರಾ ಎಂದು ನಟಿ ರಾಗಿಣಿಯನ್ನು ಎಲ್ಲರೂ ಕೇಳುತ್ತಿದ್ದಾರೆ. ಅದಕ್ಕೆ "ನೋ.. ನೋ.. ಇಲ್ಲಪ್ಪ.. ಹೀರೋಯಿನ್ಸ್ 'ಸಿಕ್ಸ್ ಪ್ಯಾಕ್' ಮಾಡೋದಕ್ಕೆ ಬರಲ್ಲ. ನಾನಂತೂ ಯಾವ ಪ್ಯಾಕೂ ಮಾಡುತ್ತಿಲ್ಲ. ಸಿಕ್ಸ್ ಪ್ಯಾಕ್ ಬಿಡಿ, ನಾನು ಈಗ ಹೋಗುತ್ತಿರುವ ಜಿಮ್‌ಗೂ ಗುಡ್ ಬೈ ಹೇಳುತ್ತಿದ್ದೇನೆ" ಅಂದ್ರು

  "ಸಿಕ್ಸ್ ಪ್ಯಾಕ್ ಹೀರೋಯಿನ್ನುಗಳಿಗೆ ಸಾಧ್ಯವೇ ಇಲ್ಲ ಎನ್ನುವಂತಿಲ್ಲ. ದೇಹ ರಚನೆಯಲ್ಲಿ ವ್ಯತ್ಯಾಸ ಇರುವುದರಿಂದ, ನಾಯಕಿಯರು ಸಿಕ್ಸ್ ಪ್ಯಾಕ್ ಮಾಡಿದರೆ ಕೆಟ್ಟದಾಗಿ ಕಾಣುತ್ತದೆ. ನಾನು ಈಗ ಮಾಡುತ್ತಿರುವ ಜಿಮ್‌ಗೆ ಹೋಲಿಸಿಕೊಂಡರೆ ಸಿಕ್ಸ್ ಪ್ಯಾಕ್ ಮಾಡುವುದು ಕಷ್ಟವೇ ಅಲ್ಲ. ಆದರೆ ನನಗೆ ಬೇಡ" ಅನ್ನುತ್ತಾರೆ ರಾಗಿಣಿ

  ಆನಂದ್ ಪಿ. ರಾಜು ನಿರ್ದೇಶನದ ಹೊಸ ಆಕ್ಷನ್ ಬೇಸ್ಡ್ ಚಿತ್ರವೊಂದರಲ್ಲಿ ನಾಯಕಿಯಾಗಿರುವ ರಾಗಿಣಿ ಜಿಮ್‌ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಕಾರಣ, ಜಿಮ್ ತೂಕ ಕಡಿಮೆ ಮಾಡುತ್ತದೆ. ಜತೆಗೆ ದೇಹವನ್ನು ಹುರಿಗೊಳಿಸುತ್ತದೆ. ಆದರೆ ನಾಯಕಿಗೆ ಇದರ ಅಗತ್ಯವಿರುವುದಿಲ್ಲ. ಹಾಗಾಗಿ 'ಪವರ್ ಯೋಗ'ದ ಮೊರೆ ಹೋಗಿದ್ದೇನೆ ಅನ್ನೋದು ರಾಗಿಣಿ ಮಾತು.

  ಈ ಹೊಸ ಚಿತ್ರಕ್ಕೆ ಶೀರ್ಷಿಕೆಯದ್ದೇ ದೊಡ್ಡ ಗೊಂದಲವಾಗಿದೆ. ಆರಂಭದಲ್ಲಿ 'ಖದರ್ ಪೊಲೀಸ್' ಎಂದು ಹೆಸರಿಡಲಾಗಿತ್ತು. ಕೆಲ ದಿನಗಳ ನಂತರ ಅದು 'ದುರ್ಗಾಂಬ' ಎಂದು ಬದಲಾಯ್ತು. ರಾಗಿಣಿಗೆ ಇದೆಲ್ಲ ಇಷ್ಟವಾಗಿಲ್ಲ. ರಾಗಿಣಿ ಐಪಿಎಸ್, ಖಾಕಿ ಖದರ್ ಮುಂತಾದ ಹೆಸರುಗಳು ಓಕೆ ಅಂದಿದ್ದಾರಂತೆ ರಾಗಿಣಿ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi told that she will not do Six Packs Abbs for her upcoming action based movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X