»   »  ಸಂಗೀತಾ, ಕ್ರಿಶ್ ಪ್ರೇಮಿಗಳು ದಾಂಪತ್ಯ ಜೀವನಕ್ಕೆ

ಸಂಗೀತಾ, ಕ್ರಿಶ್ ಪ್ರೇಮಿಗಳು ದಾಂಪತ್ಯ ಜೀವನಕ್ಕೆ

Subscribe to Filmibeat Kannada
ತಮಿಳು ಮೂಲದ ಕನ್ನಡ ನಟಿ ಹಾಗೂ ತಮಿಳು ಹಿನ್ನೆಲೆ ಗಾಯಕ ಕ್ರಿಶ್ ಅವರು ತಿರುವಣ್ಣ ಮಲೈನ ಅರುಣಾಚಲೇಶ್ವರ ಮಂದಿರದಲ್ಲಿ ಸರಳವಾಗಿ ವಿವಾಹವಾದರು. ಭಾನುವಾರ ಮುಂಜಾನೆ ಹಿಂದು ಸಂಪ್ರದಾಯದ ಪ್ರಕಾರ ದಾಂಪತ್ಯಕ್ಕೆ ಕಾಲಿರಿಸಿದರು.

ಮದುವೆ ಸಂಭ್ರಮಕ್ಕೆ ಚಿತ್ರರಂಗದ ಬಹುತೇಕ ಮಂದಿ ಆಗಮಿಸಿ ನವ ದಂಪತಿಗಳನ್ನು ಹಾರೈಸಿದರು. ಕ್ರಿಶ್ ಹಾಗೂ ಸಂಗೀತಾ ಅವರ ಪ್ರೇಮ ವಿವಾಹಕ್ಕೆ ಇಬ್ಬರ ಮನೆಯವರ ವಿರೋಧವಿತ್ತು. ಕುಟುಂಬಗಳ ವಿರೋಧದ ನಡುವೆಯೂ ಇವರ ಪ್ರೇಮ ಗೆದ್ದಿದೆ. ಪ್ರೇಮಿಗಳ ದಿನ ಮದುವೆಯಾಗುವುದಾಗಿ ಈ ಹಿಂದೆ ನಿರ್ಣಯಿಸಿದ್ದರು. ನಂತರ ಮುಹೂರ್ತ ಬದಲಾಯಿಸಿಕೊಂಡು ಫೆ.1ರಂದು ಹಸೆಮಣೆ ಹತ್ತಿದರು.

ಸುದೀಪ್ ರ ನಲ್ಲ, ರಾಮ್ ಕುಮಾರ್ ಜತೆ ಬೆಂಗಳೂರು ಬಂದ್ ಮತ್ತು ವಜ್ರ ಸೇರಿದಂತೆ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಮದುವೆಯ ನಂತರವೂ ಬಣ್ಣಬಳಿದುಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.

(ಏಜೆನ್ಸೀಸ್)
ಪೂರಕ ಓದಿಗೆ: ನಲ್ಲ ಚಿತ್ರದ ನಾಯಕಿಗೆ ಕಲ್ಯಾಣ ಯೋಗ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada