For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್

  By Rajendra
  |

  ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ದರ್ಶನ್ ಮುಂದಿನ ಚಿತ್ರ 'ಬುಲ್ ಬುಲ್' ಚಿತ್ರದ ಮೂಲಕ. ದರ್ಶನ್ ಅವರ ಹೋಂ ಬ್ಯಾನರ್ ಚಿತ್ರ ಇದಾಗಿದೆ.

  ಈ ಹಿಂದೆ 'ಅಣ್ಣಾವ್ರು' ಚಿತ್ರದಲ್ಲಿ ಅಂಬರೀಷ್ ಜೊತೆ ದರ್ಶನ್ ಅಭಿನಯಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ದೇವರ ಮಗ' ಚಿತ್ರದಲ್ಲೂ ಅಂಬರೀಷ್ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ದರ್ಶನ್ ನೆಗೆಟೀವ್ ಪಾತ್ರವನ್ನು ಪೋಷಿಸಿದ್ದರು.

  ತೆಲುಗಿನ ಹಿಟ್ ಚಿತ್ರ 'ಡಾರ್ಲಿಂಗ್' ರೀಮೇಕ್ ಬುಲ್ ಬುಲ್. ಈ ಚಿತ್ರಕ್ಕೆ ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳಿದ್ದಾರೆ. ದಿನಕರ್ ತೂಗುದೀಪ ನಿರ್ಮಾಣದ ಚಿತ್ರ. ವಿ ಹರಿಕೃಷ್ಣ ಸಂಗೀತ, ಕೃಷ್ಣ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಅಂಬರೀಷ್ ಅವರು ದರ್ಶನ್‌ಗೆ ತಂದೆಯಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಏಜೆನ್ಸೀಸ್)

  English summary
  Rebel Star Ambarish and Challenging Star Darshan team-up again in Bul Bul. The movie is being made under the Home Productions banner. Earlier the duo acted in Annavru and also worked in Devara Maga, which had Shivaraj Kumar in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X