Don't Miss!
- News
ಕಟ್ಟಡ ಬಿದ್ದಮೇಲೆ ಮರುಕ ಬೇಡ: ಈಗಲೇ ಹೊಸ ಶಾಲೆ ಕಟ್ಟಿಸಿ ಎಂದ ವಿದ್ಯಾರ್ಥಿಗಳು
- Sports
ಶ್ರೀಲಂಕಾ ವಿರುದ್ಧ ಟೆಸ್ಟ್ ಆಡುತ್ತಿದ್ದರೂ ಆಸಿಸ್ ನಾಯಕನ ಕಣ್ಣು ಭಾರತದ ಮೇಲೆ!
- Finance
ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್ ಸೇರಿ ನಾಲ್ವರಿಗೆ 36 ಲಕ್ಷ ರೂ. ದಂಡ ವಿಧಿಸಿದ ಸೆಬಿ
- Lifestyle
ಜುಲೈ 2022ರಲ್ಲಿ ವಿವಾಹಕ್ಕೆ ಪ್ರಾಶಸ್ತ್ಯ ದಿನ ಹಾಗೂ ಮುಹೂರ್ತ
- Automobiles
ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ
- Technology
ಸ್ಯಾಮ್ಸಂಗ್ ಟಿವಿ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಸಿಗೋದಿಲ್ಲ!
- Education
Cochin Shipyard Limited Recruitment 2022 : 330 ವೆಲ್ಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಪುನೀತ್ ಗೆ 2ನೇ ಸ್ಥಾನ, ಅತ್ಯುತ್ತಮ ನಟನಾಗಿ ದರ್ಶನ್
ನಮ್ಮ ಅಂತರ್ ಜಾಲ ಮತಗಟ್ಟೆಯಲ್ಲಿ ಜರುಗಿದ ಬಲಾಬಲ ಪ್ರದರ್ಶನದಲ್ಲಿ ಮುನ್ನಡೆ ಸಾಧಿಸಿದವರ ಪಟ್ಟಿ ಇಂತಿದೆ:
1. ಅತ್ಯುತ್ತಮ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಹೊರಹೊಮ್ಮಿದ್ದಾರೆ. 3085 ವೋಟು ಪಡೆದು ದರ್ಶನ್ ಪ್ರಥಮ ಸ್ಥಾನದಲ್ಲಿದ್ದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ 2832 ವೋಟು ಪಡೆದ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ಸುದೀಪ್, ಗಣೇಶ್, ಶ್ರೀನಗರ ಕಿಟ್ಟಿ ಮತ್ತು ಶಿವರಾಜ್ ಕುಮಾರ್ ಪಾಲಾಗಿದೆ.
2. ಅತ್ಯುತ್ತಮ ನಟಿಯಾಗಿ ಲಕ್ಕಿ ಸ್ಟಾರ್ ರಮ್ಯಾ (1590), ಎರಡನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ (1185) ಮತ್ತು ನಂತರದ ಸ್ಥಾನದಲ್ಲಿ ದೀಪಾ ಸನ್ನಿಧಿ, ರಾಗಿಣಿ ದ್ವಿವೇದಿ ಮತ್ತು ಐಂದ್ರಿತಾ ರೇ.
3. ಅತ್ಯುತ್ತಮ ಚಿತ್ರ ಕಳೆದ ವರ್ಷದ ಬ್ಲಾಕ್ ಬಸ್ಟರ್ ಚಿತ್ರ ಸಾರಥಿ (1414), ಎರಡನೇ ಸ್ಥಾನದಲ್ಲಿ ಹುಡುಗ್ರು (695), ನಂತರದ ಸ್ಥಾನದಲ್ಲಿ ವಿಷ್ಣುವರ್ಧನ, ಸಂಜು ವೆಡ್ಸ್ ಗೀತಾ, ಪುಟ್ಟಕ್ಕ ಹೈವೇ, ಒಲವೇ ಮಂದಾರ, ಬೆಟ್ಟದ ಜೀವ ಮತ್ತು ಜೋಗಯ್ಯ.
4. ಅತ್ಯುತ್ತಮ ನಿರ್ದೇಶಕರಾಗಿ ದಿನಕರ್ ತೂಗುದೀಪ್ (1722) ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳು ಸುದೀಪ್, ನಾಗಶೇಖರ್, ಮಾದೇಶ ಮತ್ತು ಪ್ರದೀಪ್ ರಾಜ್ ಅವರಿಗೆ.
5. ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ವಿ ಹರಿಕೃಷ್ಣ (3442) ಪರಮಾತ್ಮ ಚಿತ್ರಕ್ಕಾಗಿ ನೀಡಿದ ಸಂಗೀತಕ್ಕಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜೆಸ್ಸಿ ಗಿಫ್ಟ್, ಹರಿಕೃಷ್ಣ (ಹುಡುಗ್ರು), ಅರ್ಜುನ್ ಜನ್ಯಾ ಮತ್ತು ಮನೋಮೂರ್ತಿ ಪಡೆದಿದ್ದಾರೆ.