»   »  ಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್

ಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್

Posted By:
Subscribe to Filmibeat Kannada
Rakshith wins BIG 92.7 FMs RJ Hunt
ಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯ ಕಣದಲ್ಲಿದ್ದರು. ಸೂಕ್ತ 10 ಅಭ್ಯರ್ಥಿಗಳನ್ನು ನ.29ರ ಸೆಮಿ ಫೈನಲ್ ಗೆ ಆಯ್ಕೆ ಮಾಡಲಾಗಿತ್ತು. ಸ್ಪರ್ಧಿಗಳಿಗೆ ಮೂರು ಸುತ್ತಿನ ಪಿಕ್ ಅಂಡ್ ಸ್ಪೀಕ್, ಡಿಬೇಟ್ ಅಂಡ ಮಾಕ್, ಆರ್ ಜೆ ಲಿಂಕ್ಸ್ ಸ್ಪರ್ಧೆಗಳು ನಡೆದವು.ಸ್ಪರ್ಧಿಗಳ ಜಾಣ್ಮೆ, ವಿನೋದ ಮತ್ತು ಒತ್ತಡ ನಿರ್ವಹಿಸುವ ಸಾಮರ್ಥ್ಯಗಳನ್ನು ಓರೆಗೆ ಹಚ್ಚಲಾಯಿತು.

ಆರ್ ಜೆಗಳಾದ ಹರ್ಷ ಮತ್ತು ರಶ್ಮಿ ಅವರೊಂದಿಗೆ ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಚೈತ್ರಾ ಮತ್ತು ಉದಯೋನ್ಮುಖ ನಟ ಯಶ್ ತೀರ್ಪುಗಾರರಾಗಿದ್ದರು. ಕೊನೆಯ ಸುತ್ತಿಗೆ ಆಯ್ಕೆಯಾಗಿರುವ ರಕ್ಷಿತ್ , ಸೌಜನ್ಯ ಮತ್ತು ಭವ್ಯ ಅವರಿಗೆ ಡಿ.1 ರಿಂದ 5ರವರೆಗೆ ಬಿಗ್ ಕಾಫಿ, ಬರಿ ಬಿಂದಾಸ್, ಹಿಪ್ ಹಿಪ್ ಹುರೇ ಮತ್ತ್ತು ನೋ ಟೆನ್ಷನ್ ಕಾರ್ಯಕ್ರಮ ನಿರ್ವಹಣೆಯನ್ನು ನೀಡಿ ಕೇಳುಗರಿಂದ ಮತಚಲಾಯಿಸುವಂತೆ ಕೋರಲಾಗಿತ್ತು. ಎಸ್ ಎಂಎಸ್ ಪ್ರತಿಕ್ರಿಯೆಗಳನ್ನು ಆಧರಿಸಿ ರಕ್ಷಿತ್ ರನ್ನುಆರ್ ಜೆ ಹಂಟ್ ವಿಜೇತರನ್ನಾಗಿ ಘೋಷಿಸಲಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada