For Quick Alerts
  ALLOW NOTIFICATIONS  
  For Daily Alerts

  ನಟ ಸಿದ್ಧಾರ್ಥ್ ಮೇಲೆ ಚೀಟಿಂಗ್ ಕೇಸ್ ದಾಖಲು

  By Rajendra
  |

  ದಕ್ಷಿಣ ಭಾರತದ ಯಂಗ್ ಹೀರೋ ಸಿದ್ಧಾರ್ಥ್ ಮೇಲೆ ಚೆನ್ನೈ ಪೊಲೀಸರು ಚೀಟಿಂಗ್ ಕೇಸ್ ದಾಖಲಿಸಿಕೊಂಡಿದ್ದಾರೆ. ಬಾಲು ಎಂಬ ಇಂಟೀರಿಯರ್ ಡಿಸೈನರ್ ಕೊಟ್ಟ ದೂರಿನ ಮೇರೆಗೆ ಸಿದ್ಧಾರ್ಥ್ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ.

  ಚೆನ್ನೈನ ತಮ್ಮ ಮನೆಗೆ ಇಂಟೀರಿಯರ್ ಡೆಕೋರೇಟ್ ಮಾಡಿಸಿಕೊಳ್ಳುತ್ತಿರುವ ಸಿದ್ಧಾರ್ಥ್ ತಮಗೆ ರು.2 ಲಕ್ಷ ವಂಚಿಸಿದ್ದಾರೆ ಎಂದು ಬಾಲು ಆರೋಪಿಸಿದ್ದಾನೆ. ತನಗೆ ಆರು ಲಕ್ಷ ಅರುವತ್ತು ಸಾವಿರ ವರ್ಕ್ ಕೊಟ್ಟಿದ್ದರು. ಆದರೆ ಕೊಟ್ಟಿದ್ದು ಮಾತ್ರ ನಾಲ್ಕು ಲಕ್ಷ ಮೂವತ್ತು ಸಾವಿರ ಅಷ್ಟೇ ಎಂದು ಬಾಲು ತನ್ನ ಕಂಪ್ಲೇಟ್‌ನಲ್ಲಿ ತಿಳಿಸಿದ್ದಾನೆ.

  ಬಾಕಿ ಹಣದ ಬಗ್ಗೆ ಸಿದ್ಧಾರ್ಥ್‌ರನ್ನು ಕೇಳಲು ಅವರ ಮನೆಗೆ ಹೋದರೆ ಅಲ್ಲಿ ಸಿದ್ಧಾರ್ಥ್ ತಂದೆ ಹಣ ಕೊಡದೆ ತಮಗೆ ಬೆದರಿಕೆ ಹಾಕಿದರು ಎಂದು ಬಾಲು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಸಿದ್ಧಾರ್ಥ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದರಾದರೂ ಆತ ಸಿಗದೇ ಇದ್ದ ಕಾರಣ ಕೇಸು ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ತೆಲುಗಿನಲ್ಲಿ ಬಿಜಿಯಾಗಿರುವ ಸಿದ್ಧಾರ್ಥ್ ಚಿತ್ರಗಳು ಆರಕ್ಕೇರುತ್ತಿಲ್ಲ ಮೂರಕ್ಕಿಳಿಯುತ್ತಿಲ್ಲ. (ಏಜೆನ್ಸೀಸ್)

  English summary
  Chennai police have registered a cheating case against hero Siddharth. The case was registered on the complaint of one Balu, an interior decorator. ನಟ ಸಿದ್ಧಾರ್ಥ್ ಮೇಲೆ ಚೀಟಿಂಗ್ ಕೇಸ್ ದಾಖಲು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X