For Quick Alerts
  ALLOW NOTIFICATIONS  
  For Daily Alerts

  ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಬಯೋಡಾಟಾ

  By Rajendra
  |

  ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಚೊಚ್ಚಲ ಕನ್ನಡ ಚಿತ್ರ 'ಚಿಂಗಾರಿ' ಈ ವಾರ ತೆರೆಕಾಣುತ್ತಿದೆ. ದರ್ಶನ್‌ರ ಪ್ರೇಯಸಿಯಾಗಿ ಚಿತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಈ ಹಿಂದೆ ತಮಿಳಿನ 'ಪೆಸು' ಮತ್ತು 'ಅನ್‌ಮೈಯ್ ತಾವರಿಲ್' ಎಂಬ ಚಿತ್ರಗಳಲ್ಲಿ ದೀಪಿಕಾ ಕಾಮಯ್ಯ ಅಭಿನಯಿಸಿದ್ದರು.

  ಕೊಡಗು ಮೂಲದ ದೀಪಿಕಾರ ಕುಟುಂಬಿಕರು ಬೆಂಗಳೂರಿನಲ್ಲೇ ಸೆಟ್ಲ್ ಆಗಿದ್ದಾರೆ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿ.ಕಾಂ ಓದಿರುವ ದೀಪಿಕಾಗೆ ಕನ್ನಡ ಸುಲಿದ ಬಾಳೆಹಣ್ಣು. ಎಂಟಿವಿ ಲಿಕ್ರಾ ಸ್ಟ್ರೈಲ್ ಪ್ರಶಸ್ತಿಗೆ ದೀಪಿಕಾ ಆಯ್ಕೆಯಾಗಿದ್ದರು. ಚಿಂಗಾರಿ ಚಿತ್ರದಲ್ಲಿ ದೀಪಿಕಾಗೆ ಚಾನ್ಸ್ ಸಿಕ್ಕಿದ್ದೂ ಒಂದು ರೀತಿ ಆಕಸ್ಮಿಕ.

  ಈ ಚಿತ್ರಕ್ಕೆ ಮೊದಲು ನಾಯಕಿ ಎಂದು ಡೈಸಿ ಶಾರನ್ನು ಆಯ್ಕೆ ಮಾಡಲಾಗಿತ್ತು. ಡೈಸಿ ಚಿತ್ರದ ಮುಹೂರ್ತದಲ್ಲೂ ಭಾಗವಹಿಸಿದ್ದರು. ಆದರೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಕೈಎತ್ತಿದರು. ತೆರವಾಗಿದ್ದ ಸ್ಥಾನ ದೀಪಿಕಾರ ಮಡಿಲಿಗೆ ಸುನಾಯಾಸವಾಗಿ ಬಂದು ಬಿತ್ತು. 'ಚಿಂಗಾರಿ' ಚಿತ್ರದ ಮೂಲಕ ಕೊಡಗಿನ ಅಪ್ಪಟ ಹುಡುಗಿಯೊಬ್ಬರು ಪರಿಚಯವಾಗುತ್ತಿದ್ದಾರೆ. (ಏಜೆನ್ಸೀಸ್)

  English summary
  A model turned actress Deepika Kamaih's debut Kannada film Chingari. Deepika is quite happy to be paired with Darshan in her first film. Her family hails from the Kodagu district though her family is settled in Bangalore. She has done B.Com from Bishop Cottons college.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X