»   » ಲಿಮ್ಕಾ ದಾಖಲೆಗೆ ಚಿತ್ರಲೋಕ ಡಾಟ್ ಕಾಂ

ಲಿಮ್ಕಾ ದಾಖಲೆಗೆ ಚಿತ್ರಲೋಕ ಡಾಟ್ ಕಾಂ

Subscribe to Filmibeat Kannada

ಕನ್ನಡ ಚಿತ್ರರಂಗದ ಸುದ್ದಿ ಸ್ವಾರಸ್ಯಗಳಿಗೆ ಮೀಸಲಾದ ಚಿತ್ರಲೋಕ ಡಾಟ್ ಕಾಂ ವೆಬ್ ಸೈಟ್ ತನ್ನ ವಿಶಿಷ್ಟ ಸಾಧನೆಗಾಗಿ ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಚಿತ್ರಲೋಕ ಡಾಟ್ ಕಾಂ ಮೂರು ಸಾವಿರ ಸ್ಥಿರ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ತಾಣ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗುತ್ತಿರುವುದು ಇದು ಎರಡನೇ ಸಲ.

ಮೊದಲ ಕನ್ನಡ ಚಿತ್ರ ಸತಿ ಸುಲೋಚನ(1934) ದಿಂದ 2009ರ ಫೆವ್ರವರಿ 29ರ ನಂ ಯಜಮಾನ್ರು ತನಕ ಬಿಡುಗಡೆಯಾದ ಎಲ್ಲಾ ಕನ್ನಡ ಚಿತ್ರಗಳ ಮತ್ತು ವಿಶೇಷ ಚಿತ್ರಗಳ ಒಟ್ಟು ಮೂರು ಸಾವಿರ ಸ್ಥಿರ ಚಿತ್ರಗಳನ್ನು ಪ್ರದರ್ಶಿಸಿದ ಈ ವಿಶಿಷ್ಟ ಪ್ರಯತ್ನವನ್ನು ದಾಖಲೆಯೆಂದೇ ಲಿಮ್ಕಾ ದಾಖಲೆ ಪುಸ್ತಕದ ತೀರ್ಪುಗಾರರು ಗುರುತಿಸಿದ್ದಾರೆ. ಈ ಪ್ರದರ್ಶನ ಈಗ 2010ರ ಲಿಮ್ಕಾ ಪುಸ್ತಕದಲ್ಲಿ ದಾಖಲೆಯಾಗಲಿದೆ.

ಈ ಹಿಂದೆ 2009ರ ಆಗಸ್ಟ್ 14ರಿಂದ 20 ತನಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಚಿತ್ರಲೋಕ ಡಾಟ್ ಕಾಂ ವತಿಯಿಂದ ಕನ್ನಡ ಚಲನಚಿತ್ರಗಳ 2650 ಸ್ಥಿರ ಚಿತ್ರಗಳ ಪ್ರದರ್ಶನಕ್ಕಾಗಿ ಲಿಮ್ಕಾ ದಾಖಲೆ ಸೇರಿತ್ತು. ಅಮೃತ ಮಹೋತ್ಸವದಲ್ಲಿ ಛಾಯಾಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರಲೋಕ ಡಾಟ್ ಕಾಂನ ಸಂಪಾಕದ ಕೆ.ಎಂ.ವೀರೇಶ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚಿತ್ರಲೋಕ ಡಾಟ್ ಕಾಂಗೆ ಲಿಮ್ಕಾ ಗರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada